twitter
    For Quick Alerts
    ALLOW NOTIFICATIONS  
    For Daily Alerts

    ಪಕ್ಕಾ ಸ್ಕ್ರೀನ್ ಪ್ಲೇ ಚಿತ್ರ ಕಡ್ಡಿಪುಡಿ, ದುನಿಯಾ ಸೂರಿ

    By Rajendra
    |
    <ul id="pagination-digg"><li class="previous"><a href="/news/kaddipudi-duniya-soori-interview-074652.html">« Previous</a>

    6. ಈ ರೀತಿಯ ಸ್ಪೆಷಲ್ ಸಾಂಗ್ ಗಳ ಅಗತ್ಯವಿದೆಯೇ?
    'ಸತ್ಯಹರಿಶ್ಚಂದ್ರ' ಚಿತ್ರದಲ್ಲಿ ನನ್ನ ಪ್ರಕಾರ ಮೂರು ಐಟಂ ಸಾಂಗ್ ಗಳು ಬರುತ್ತವೆ. ಫಸ್ಟ್ ಹಾಪ್ ನಲ್ಲಿ ಎರಡು ಹಾಡುಗಳು ಬರುತ್ತವೆ. ಒಂದು "ನೀನು ನನಗೆ ಸಿಕ್ಕಿಬಿದ್ದೆಯೋ ರಾಜಾ" ಎಂದು. "ಕುಲದಲ್ಲಿ ಮೇಲ್ಯಾವುದು ಹುಚ್ಚಪ್ಪಾ..." ಎಂಬ ಹಾಡು ಆ ಹೊತ್ತಿನ ಕಾಲಕ್ಕೆ ನನ್ನ ಪ್ರಕಾರ ಸ್ಪೆಷಲ್ ಸಾಂಗ್.

    ಸ್ಕ್ರೀನ್ ಪ್ಲೇ ಅನ್ನುವ ವಿಷಯದಲ್ಲಿ ಏಳು ಮತ್ತು ಎಂಟನೇ ರೀಲ್ ನ್ನು ತುಂಬಾ ಕಷ್ಟಕರ ಎಂದು ಹೇಳುತ್ತೇವೆ. ಯಾಕೆಂದರೆ ಪ್ರೀ ಕ್ಲೈಮ್ಯಾಕ್ಸ್ ನಲ್ಲಿ ಲೀಡ್ ಆಗುತ್ತಿರುತ್ತದೆ ಕಥೆ. ಆ ಸ್ಥಳವನ್ನು ಎಂಟರ್ ಟೈನ್ ಮಾಡುವುದಕ್ಕಾಗಿ ಬಳಸುತ್ತಿದ್ದಂತಹ ಹಾಡು. ಈಗ ಅದರ ಪ್ಲೇಸ್ ಮೆಂಟನ್ನು ಬದಲಾಯಿಸಿದ್ದೇವೆ. ಈ ಸಿನಿಮಾದಲ್ಲಿ ಅದರ ಅವಶ್ಯಕತೆ ಇದೆ ಎಂದು ಮಾಡಿದ್ದು. 'ಜಂಗ್ಲಿ' ಚಿತ್ರದಲ್ಲಿ "ಈ ಮಜವಾದ ಮೊಗ್ಗು ಮುಸುಕಿದ ಸಂಜೆಗೆ..." ಎಂಬ ಐಟಂ ಹಾಡನ್ನು ಉದ್ದೇಶಪೂರ್ವಕವಾಗಿಯೇ ಮಾಡಿದ್ದು.

    ಇನ್ನು 'ಜಾಕಿ' ಹಾಗೂ 'ಅಣ್ಣಾಬಾಂಡ್' ಚಿತ್ರಗಳಲ್ಲಿ ಐಟಂ ಹಾಡನ್ನು ಬಳಸಲಿಲ್ಲ. ಅಂದರೆ ರೆಗ್ಯುಲರ್ ಐಟಂ ಸಾಂಗನ್ನು ಬಳಸಲಿಲ್ಲ. 'ಕಡ್ಡಿಪುಡಿ'ಯಲ್ಲಿ ಬರುವ ಸ್ಪೆಷಲ್ ಸಾಂಗ್ ಚಿತ್ರಕಥೆಯ ಚೌಕಟ್ಟನ್ನು ಬಿಟ್ಟು ಹೋಗುವುದಿಲ್ಲ. ಕಥೆಯ ಭಾಗವಾಗಿ ಅದು ಮೂಡಿ ಬರುತ್ತದೆ.

    7. ಶಿವಣ್ಣ ಸಾಕಷ್ಟು ಚಿತ್ರಗಳಲ್ಲಿ ಮಚ್ಚು ಹಿಡಿದಿದ್ದಾರೆ. ಇದರಲ್ಲೇನು ಭಿನ್ನ?
    ಇಷ್ಟು ದಿನ ಬಲಗೈಲಿ ಹಿಡಿದಿದ್ದರು. ಈ ಚಿತ್ರದಲ್ಲಿ ಎಡಗೈಲಿ ಹಿಡಿದಿದ್ದಾರೆ! ತಮಾಷೆಗೆ ಹೇಳಿದೆ. ದುನಿಯಾ ಸಿನಿಮಾ ರೌಡಿಯಿಸಂ ಸಿನಿಮಾನಾ ಪ್ರೇಮ ಕಥೆನಾ? ಹಾಗೆಯೇ 'ಜೋಗಿ' ಸಿನಿಮಾ ರೌಡಿಯಿಸಂ ಸಿನಿಮಾವೇ ಅಥವಾ ತಾಯಿ ಸೆಂಟಿಮೆಂಟ್ ಚಿತ್ರವೇ? ರೌಡಿಯಿಸಂ ಹಿನ್ನೆಲೆಯಲ್ಲಿ ಬರುವ ದುನಿಯಾದು ಪ್ರೇಮ ಕಥೆ, ಹಾಗೆಯೇ 'ಜೋಗಿ' ತಾಯಿ ಸೆಂಟಿಮೆಂಟ್ ಚಿತ್ರ.

    'ಕಡ್ಡಿಪುಡಿ' ಚಿತ್ರವೂ ಅಷ್ಟೇ ಪೂರ್ಣ ಪ್ರಮಾಣದ ರೌಡಿಯಿಸಂ ಸಿನಿಮಾ ಆಗಲು ಸಾಧ್ಯವಿಲ್ಲ. ಭೂಗತಜಗತ್ತಿನ ಒಂದಷ್ಟು ವಿಶೇಷಗಳನ್ನು ಇಟ್ಟಿರುತ್ತೀವಿ ಆ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ. ಅದೇ ಮುಖ್ಯ ಎಂದು ಹೇಳಲು ಆಗುವುದಿಲ್ಲ. ನಾಯಕನನ್ನು ಹೊಗಳುವ, ವೈಭವೀಕರಿಸುವ ಸಿನಿಮಾ ಇದಲ್ಲ. ನಲವತ್ತು ಐವತ್ತು ಜನರನ್ನು ಒಬ್ಬನೇ ಹೊಡೆದು ಹಾಕುವುದು, ಆದಿಯಿಂದಲೂ ಅಂತ್ಯದವರೆಗೂ ನಾಯಕನನ್ನು ವೈಭವೀಕರಿಸುವ ಸಿನಿಮಾ ಅಂತೂ ಖಂಡಿತ ಅಲ್ಲ. ತಂದೆಯನ್ನು ಕೊಂದು ಬಿಟ್ಟ ಎಂದು ಎರಡು ಗಂಟೆಗಳ ಕಾಲ ಹುಡುಕಿಕೊಂಡು ಹೋಗಿ ಹೊಡೆಯುವುದು, ಆ ರೀತಿಯ ಸೀನ್ ಗಳೆಲ್ಲಾ ಇಲ್ಲಿಲ್ಲ. ಸ್ಕ್ರೀನ್ ಪ್ಲೇಗೆ ಒತ್ತು ಕೊಟ್ಟು ಮಾಡಿರುವ ಸಿನಿಮಾ ಇದು.

    8. ರಾಧಿಕಾ ಪಂಡಿತ್ ಅವರದು ಯಾವ ರೀತಿಯ ಪಾತ್ರ?
    ರಾಧಿಕಾ ಪಂಡಿತ್ ಅವರು ಒಬ್ಬ ಜೂನಿಯರ್ ಆರ್ಟಿಸ್ಟ್ ಆಗಿ, ಮಧ್ಯಮವರ್ಗದ ಕುಟುಂಬದ ಹೆಣ್ಣುಮಗಳಾಗಿ ಕಾಣಿಸುತ್ತಿದ್ದಾರೆ. ಗಂಡು ದಿಕ್ಕಿಲ್ಲದ ಒಂದು ಹೆಣ್ಣಿನ ಪಾತ್ರ. ಮನೆಯಲ್ಲಿ ಅಜ್ಜಿ ಮತ್ತು ತಾಯಿ ಮಾತ್ರ ಇರುತ್ತಾರೆ. ಅವಳ ಜೀವನದಲ್ಲಿ ಆಗುವ ಎಲ್ಲಾ ಘಟನೆಗಳಿಗೂ ನಾಯಕ ನಟನೇ ಕಾರಣನಾಗುತ್ತಾನೆ.

    9. ಮುಂದಿನ ಚಿತ್ರ ಯಾರ ಜೊತೆ?
    ಈ ಬಗ್ಗೆ ಇನ್ನೂ ಏನೂ ಯೋಚಿಸಿಲ್ಲ. ಕಥೆ ಬರೆಯುತ್ತಿದ್ದೇನೆ. ಹೊಸಬರ ಜೊತೆ ಮಾಡಬೇಕೆಂದಿದ್ದೇನೆ. ಇಂತಹವರ ಜೊತೆಗೆ ಮಾಡಬೇಕೆಂದು ಯಾರ ಜೊತೆಗೂ ಕಮಿಟ್ ಆಗಿಲ್ಲ.

    <ul id="pagination-digg"><li class="previous"><a href="/news/kaddipudi-duniya-soori-interview-074652.html">« Previous</a>

    English summary
    An interview with Kannada films most successful director Duniya Soori or Suri. He shares his experience about his upcoming film 'Kaddipudi', which will be slated for release on 7th June, 2013. It stars Shivrajkumar and Radhika Pandit in the lead.
    Thursday, June 6, 2013, 11:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X