twitter
    For Quick Alerts
    ALLOW NOTIFICATIONS  
    For Daily Alerts

    'ನನ್ Life ಅಲ್ಲಿ' ಚಿತ್ರ ಸೆನ್ಸಾರ್ ನಲ್ಲಿ ಫಸ್ಟ್ ಕ್ಲಾಸ್

    By Rajendra
    |

    ಸಾಮಾಜಿಕ ಸಂಪರ್ಕ ತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಸದ್ದು ಮಾಡುತ್ತಿರುವ ಚಿತ್ರ 'ನನ್ Life ಅಲ್ಲಿ'. ಹೊಸ ಪ್ರತಿಭೆಗಳ ಹೊಸ ಪ್ರಯತ್ನವಿದು. ಗುರುವಾರ (ಆ.8) ಈ ಚಿತ್ರ ಸೆನ್ಸಾರ್ ಮುಗಿಸಿಕೊಂಡು ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದೆ.

    ಹೊಸಬರ ಹೊಸ ಪ್ರಯತ್ನಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿ ಕೆ.ನಾಗರಾಜ್ ಅವರು ಬೆನ್ನುತಟ್ಟಿದ್ದಾರೆ. ತಾನು ವರ್ಷಕ್ಕೆ ಸೆನ್ಸಾರ್ ಗೆ ಬರುವ ಸರಿಸುಮಾರು 120 ಚಿತ್ರಗಳನ್ನು ವೀಕ್ಷಿಸುತ್ತೇನೆ. ಆದರೆ ಈ ರೀತಿಯ ವಿಭಿನ್ನ ಪ್ರಯತ್ನವನ್ನು ನಾನು ನೋಡಿಲ್ಲ. ಚಿತ್ರ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನನ್ನ ಮನಸ್ಸನಂತೂ ಗೆದ್ದಿದೆ ಎಂದಿದ್ದಾಗಿ ಚಿತ್ರತಂಡ ತಿಳಿಸಿದೆ.

    Nan Lifealli clears censor
    ಚಿತ್ರದಲ್ಲಿನ ಒಂದೇ ಒಂದು ದೃಶ್ಯಕ್ಕೆ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗಿಸಿದೆ. ಚಿತ್ರದಲ್ಲಿ ಏಡಿಕಾಯಿಯನ್ನು ತೋರಿಸಲಾಗಿದೆ. ಆದರೆ ಇದಕ್ಕೆ ಚಿತ್ರತಂಡ ಪ್ರಾಣಿದಯಾ ಸಂಘದ ಸರ್ಟಿಫಿಕೇಟ್ ತೋರಿಸಬೇಕಾಗಿತ್ತು. ಆದರೆ ಅದು ಸಾಧ್ಯವಾಗದ ಕಾರಣ ಆ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ. ಅದೂ ಗ್ರಾಫಿಕ್ಸ್ ಏಡಿಕಾಯಿ ಎಂಬುದು ವಿಶೇಷ.

    ಸೆನ್ಸಾರ್ ನಲ್ಲಿ ಪಾಸಾಗಿರುವ ಚಿತ್ರವನ್ನು ಆಗಸ್ಟ್ 30 ಅಥವಾ ಸೆಪ್ಟೆಂಬರ್ 6ರಂದು ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇನ್ನು ಚಿತ್ರದ ಟ್ರೇಲರ್ ಗೆ ಯೂಟ್ಯೂಬ್ ನಲ್ಲಿ ಇದುವರೆಗೂ 178,293 ಕ್ಲಿಕ್ಸ್ ಸಿಕ್ಕಿವೆ. ನಿಜಕ್ಕೂ ಇದೊಂದು ದಾಖಲೆ ಎನ್ನಬಹುದು.

    ಈ ಹಿಂದೆ ಪೊಲೀಸ್ ಕ್ವಾರ್ಟಸ್ ಹಾಗೂ ನಮ್ ಏರಿಯಾಲ್ ಒಂದಿನಾ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ಅನೀಶ್ ತೇಜಸ್ವರ್ ಮೂರನೇ ಚಿತ್ರವಿದು. ತಮ್ಮ ಮೂರನೇ ಇನ್ನಿಂಗ್ಸ್ ನಲ್ಲಿ ಖಂಡಿತ ಗೆಲ್ಲುತ್ತೇನೆ ಎಂಬ ಭರವಸೆಯಲ್ಲಿದ್ದಾರೆ ಅನೀಶ್. ಚಿತ್ರದ ನಾಯಕಿ ಕ್ಯೂಟ್ ಬೆಡಗಿ ಸಿಂಧು ಲೋಕನಾಥ್.

    ರಾಮ್ ದೀಪ್ ಅವರು ಆಕ್ಷನ್ ಕಟ್ ಹೇಳಿರುವ ಚಿತ್ರ. ಹೊಸತನಕ್ಕೆ, ವಿಭಿನ್ನತೆಗೆ ಹಾತೊರೆಯುತ್ತಿರು ಪ್ರೇಕ್ಷಕರನ್ನು ತಮ್ಮ ಚಿತ್ರ ಖಂಡಿತ ನಿರಾಶೆಪಡಿಸಲ್ಲ ಎಂಬ ಭರವಸೆಯಲ್ಲಿ ಚಿತ್ರತಂಡವಿದೆ. ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ.

    ಚಿತ್ರವು ತಾಂತ್ರಿಕವಾಗಿಯೂ ಪ್ರೌಢವಾಗಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ, ಮನೋಹರ್ ಜೋಶಿ ಅವರ ಛಾಯಾಗ್ರಹಣ, ಸಂತೋಷ್ ರಾಧಾಕೃಷ್ಣ ಅವರ ಸಂಕಲನ, ಮನೋಜ್ ಗಲಗಲಿ ಸಂಭಾಷಣೆ ಹಾಗೂ ಲೋಕೇಶ್ ಅವರ ಸಹಾಯಕ ನಿರ್ದೇಶನ ಕಮ್ ಚಿತ್ರಕಥೆ ಚಿತ್ರಕ್ಕಿದೆ. ನಿವೇದಿತಾ, ವೆಂಕಟೇಶ್ ಬಾಬು, ಅನಿಲ್ ಯುವರಾಜ್ ಮತ್ತು ಜೈಪಾಲ್ ಚಿತ್ರದ ನಿರ್ಮಾಪಕರು.

    ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಹಾಗೂ ರಮೇಶ್ ಅರವಿಂದ್ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಮ್ಮ ಚಿತ್ರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗೆ ಚಿತ್ರತಂಡ ಸಖತ್ ಖುಷಿಯಾಗಿದ್ದು ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. (ಒನ್ಇಂಡಿಯಾ ಕನ್ನಡ)

    English summary
    Kannada film 'Nan Lifealli' clears censor and got U certificate. The regional censor board lauds the movie which is slated for release on 30th August or 6th Sept. The trailer rocks on Youtube has got about 178,293 views. Anish Tejeshwar and Sindhu Loknath are in the lead, written & directed by Ramdeep.
    Friday, August 9, 2013, 17:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X