twitter
    For Quick Alerts
    ALLOW NOTIFICATIONS  
    For Daily Alerts

    ಯಡಿಯೂರಪ್ಪ ಕೆಜೆಪಿ ಪಕ್ಷಕ್ಕೆ ನಿರ್ಮಾಪಕ ಕೆ ಮಂಜು?

    By Rajendra
    |

    K Manju
    ಕನ್ನಡ ಚಿತ್ರಗಳ 'ಗಂಡುಗಲಿ' ಖ್ಯಾತಿಯ ನಿರ್ಮಾಪಕ ಕೆ ಮಂಜು ಅಲಿಯಾಸ್ ಕೊಬ್ರಿ ಮಂಜು ಅವರು ರಾಜಕೀಯ ಕ್ಷೇತ್ರಕ್ಕೆ ಧುಮಕಲು ತೀರ್ಮಾನಿಸಿದ್ದಾರೆ. ಬರಲಿರುವ 2013ರ ವಿಧಾಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿಬರುತ್ತಿವೆ.

    ಬಹುಶಃ ಅವರು ಈಗಷ್ಟೇ ಕಣ್ಣು ಬಿಡುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸೇರುವ ಸಾಧ್ಯತೆಗಳಿಗೆ. ಅವರ ಸ್ವಸ್ಥಳ ತುರುವೇಕೆರೆಯಿಂದ ಚುನಾವಣಾ ಕಣಕ್ಕಿಳಿಯಲಿದ್ದಾರೆ ಎನ್ನುತ್ತವೆ ಮೂಲಗಳು.

    ಈಗಾಗಲೆ ಕೆ ಮಂಜು ಅವರು ವಿಜಯೇಂದ್ರ ಅವರನ್ನು ಸಂಪರ್ಕಿಸಿದ್ದು ಈ ಬಗ್ಗೆ ಮಾತುಕತೆಯೂ ನಡೆಸಿದ್ದಾರಂತೆ. ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ ತುರುವೇಕೆರೆ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ್ದೇ ಮೇಲುಗೈ. ಇದನ್ನು ಉದ್ದೇಶವಾಗಿಟ್ಟುಕೊಂಡೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೆ ಮಂಜು ಅವರಿಗೆ ಕೆಜೆಪಿ ಟಿಕೆಟ್ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ತುರುವೇಕೆರೆ ಕ್ಷೇತ್ರದಿಂದ ಕೊಬ್ರಿ ಮಂಜು ಏನಾದರೂ ಕಣಕ್ಕಿಳಿದರೆ ಬಿಜೆಪಿ ಪಕ್ಷವೇನು ಕೈಕಟ್ಟಿ ಕೂರುವುದಿಲ್ಲ. ನವರಸ ನಾಯಕ ಜಗ್ಗೇಶ್ ಅವರನ್ನು ಮಂಜು ವಿರುದ್ಧ ಕಣಕ್ಕಳಿಸಲಿದೆ. ಸದ್ಯಕ್ಕೆ ಜೆಡಿ(ಎಸ್) ಭದ್ರಕೋಟೆಯಾಗಿರುವ ತುರುವೇಕೆರೆ ಕ್ಷೇತ್ರದಲ್ಲಿ ಎಂ.ಟಿ.ಕೃಷ್ಣಪ್ಪ ವಿರುದ್ಧ ಸೆಣೆಸುವುದು ಕೆಜೆಪಿ ಹಾಗೂ ಬಿಜೆಪಿ ಇಬ್ಬರಿಗೂ ಸವಾಲಿನ ಪ್ರಶ್ನೆ. (ಏಜೆನ್ಸೀಸ್)

    English summary
    Kannada films producer K Manju want to contest Karnataka assembly elections from his native place of Turuvekere ( Tumkur District) He is likely to join Karnataka Janata Party (KJP) headed by former Chief Minister B.S. Yeddyurappa.
    Monday, November 19, 2012, 11:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X