twitter
    For Quick Alerts
    ALLOW NOTIFICATIONS  
    For Daily Alerts

    ಚೇಂಬರ್ ಚೇರ್ ಗಾಗಿ ಪ್ರೊಡ್ಯೂಸರ್ಸ್ ಫೈಟ್

    By Rajendra
    |

    Producer Munirathna
    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೋಮವಾರ (ಸೆ.30) ನಡೆದ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಸಭೆ ವಾದ-ವಿವಾದಕ್ಕೆ ಕಾರಣವಾಗಿದೆ. ಮುಂಬರುವ ನಿರ್ಮಾಪಕರ ಸಂಘದ ಚುನಾವಣೆ ಕುರಿತಂತೆ ಸರ್ವಸದಸ್ಯರ ವಿಶೇಷ ಸಭೆ ಕರೆಯಲಾಗಿತ್ತು.

    ಸಭೆಯಲ್ಲಿ ಚುನಾವಣೆ ನಡೆಸೋ ಬಗ್ಗೆ ಎರಡು ಬಣಗಳಾಗಿ ಒಂದು ಬಣ ಚುನಾವಣೆ ಬೇಡ ಅಂದ್ರೆ, ಮತ್ತೊಂದು ಬಣ ಚುನಾವಣೆ ನಡಸಲೇಬೇಕು ಅಂತ ಪಟ್ಟು ಹಿಡೀತು. ನಿರ್ಮಾಪಕರ ಸಂಘದ ಚುನಾವಣೆ ನಡೆದು ಪದಾಧಿಕಾರಿಗಳ ಆಯ್ಕೆಯಾಗಿ ಎರಡು ವರ್ಷಗಳ ಅಧಿಕಾರವಧಿ ಕೂಡ ಮುಗಿದಿದೆ.

    ಸಭೆಯಲ್ಲಿ ಈಗ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿರೋ ಮುನಿರತ್ನ ಅವರು ಮುಂದುವರಿಯಬೇಕು. ಅವರು ಅಭಿವೃಧ್ಧಿ ಕೆಲಸಗಳನ್ನ ಮಾಡಿದ್ದಾರೆ ಅಂತ ಒಂದು ಬಣದ ಸೂರಪ್ಪಬಾಬು ಹೇಳಿದರು.

    ಇದಕ್ಕೆ ವಿರುದ್ಧವಾಗಿ ಮತ್ತೊಂದು ಬಣ, ಮುನಿರತ್ನ ಅವರು ಶಾಸಕರಾಗಿದ್ದಾರೆ, ಅವರಿಗೆ ಮತ್ತೊಂದು ಜವಾಬ್ದಾರಿ ಹೊರೆಯಾಗುತ್ತೆ. ನಿಯಮಗಳಂತೆ ಚುನಾವಣೆ ನಡೆದು ಹೊಸ ಪದಾಧಿಕಾರಿಗಳ ಆಯ್ಕೆಯಾಗಬೇಕು ಅನ್ನೋ ವಾದವನ್ನ ಮುಂದಿಡಲಾಯಿತು.

    ಎರಡು ಬಣಗಳ ನಡುವೆ ಮಾತಿನ ಚಕಮುಕಿ ನಡೆದ್ರೂ ಅಂತಿಮವಾಗಿ ನೀತಿ ನಿಯಮದಂತೆ ಎರಡು ವರ್ಷಕ್ಕೊಮ್ಮೆ ಚುನಾವಣೆ ನಡೆಸುವಂತೆ ಚುನಾವಣೆಯನ್ನ ನಡೆಸುವ ನಿರ್ಧಾರವನ್ನ ನಿರ್ಮಾಪಕರ ಸಂಘದ ಸರ್ವಸದಸ್ಯರ ಸಭೆ ಕೈಗೊಳ್ಳುವುದರೊಂದಿಗೆ ಸಭೆಯ ಬರಖಾಸ್ತ್ ಆಗುವುದರ ಜೊತೆಗೆ ವಿವಾದ ಅಂತ್ಯವಾಗಿದೆ. (ಏಜೆನ್ಸೀಸ್)

    English summary
    The elections for Kannasa Film Producers Association hold the elections soon. The last elections for the association was conducted two years back and the elections was scheduled for this year. 
    Tuesday, October 1, 2013, 15:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X