ಬಾಕ್ಸಾಫೀಸಲ್ಲಿ ಶಿವ ಇನ್ನೂ ಮೂರನೇ ಕಣ್ಣು ಬಿಟ್ಟಿಲ್ಲ

Posted by:
 

ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಅಪ್ಪಳಿಸಿದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಶಿವ' ಚಿತ್ರ ಬಾಕ್ಸಾಫೀಸಲ್ಲಿ ತಿಣುಕಾಡುತ್ತಿದೆ. ಒಟ್ಟು 235 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 'ಶಿವ' ಇದುವರೆಗೂ ರು.6 ಕೋಟಿ ಗಳಿಸಿದೆ.

ಇನ್ನು 'ಶಿವ' ಚಿತ್ರದ ಬಜೆಟ್ ರು.8.5 ಕೋಟಿ. ಆದರೆ ಇದುವರೆಗೂ ಕಲೆಕ್ಷನ್ ಆಗಿರುವುದು ಕೇವಲ ರು. 6 ಕೋಟಿ ಮಾತ್ರ. ಬಾಕಿ ಇನ್ನೂ ಎರಡೂವರೆ ಕೋಟಿ ಬಂದರೆ ಹಾಕಿದ ಬಂಡವಾಳ ಬರುತ್ತದೆ. ಆಗಷ್ಟೇ ಚಿತ್ರದ ನಿರ್ಮಾಪಕ ಕೆಪಿ ಶ್ರೀಕಾಂತ್ ತಲೆಮೇಲಿನ ಭಾರ ಕೊಂಚ ಇಳಿದಂತಾಗುತ್ತದೆ.

'ಶಿವ' ಚಿತ್ರ ಬಿಡುಗಡೆಯಾದ ನಾಲ್ಕು ದಿನಕ್ಕೆ ನಾಲ್ಕು ಕೋಟಿ ಕಲೆಕ್ಷನ್ ಮಾಡಿತ್ತು. ಎಲ್ಲರೂ ಇನ್ನೇನು ಹಾಕಿದ ಬಂಡವಾಳ ಬಂದೇ ಬಿಡ್ತು ಎಂದುಕೊಂಡಿದ್ದರು. ಆದರೆ ಚಿತ್ರ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಕಲೆಕ್ಷನ್ ಡಲ್ ಆಗುತ್ತಿದೆ. ಶಿವ ಚಿತ್ರವಿಮರ್ಶೆ ಓದಿ.

ಹುಬ್ಬಳಿ, ಮೈಸೂರು, ಚಿತ್ರದುರ್ಗ ಹಾಗೂ ಶಿವಮೊಗ್ಗ ಕಡೆಯಿಂದ ಸರಿಸುಮಾರು ರು. 3 ಕೋಟಿ ಕಲೆಕ್ಷನ್ ಆಗಿದೆ. ಟಿವಿ ರೈಟ್ಸ್ ನಿಂದ ರು.2.5 ಕೋಟಿ ಬಂದಿದೆ. ಹಂಗೂ ಹಿಂಗೂ ಆರು ಕೋಟಿ ಕಲೆಕ್ಷನ್ ಆಗಿದ್ದು ಇನ್ನೂ ಎರಡೂವರೆ ಕೋಟಿ ಬಂದರೆ ನಿರ್ಮಾಪಕ ಸೇಫ್.

ಎರಡನೇ ವಾರದಲ್ಲಾದರೂ ಚಿತ್ರದ ಕಲೆಕ್ಷನ್ ಚೇತರಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಆದರೆ ಮಳೆಯ ಕಾರಣ ಜನ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಥಿಯೇಟರ್ ಬಾಡಿಗೆ ಎಲ್ಲಾ ಲೆಕ್ಕಾಚಾರ ಹಾಕಿದರೆ 'ಶಿವ' ಮೂರನೇ ಕಣ್ಣು ಬಿಡುವುದು ಅನುಮಾನ.

ಕೆಪಿ ಶ್ರೀಕಾಂತ್ ನಿರ್ಮಾಣದ ಬಹುನಿರೀಕ್ಷೆಯ ಈ ಚಿತ್ರಕ್ಕೆ ಶಿವಣ್ಣರಿಗೆ ಮೊದಲ ಬಾರಿ ರಾಗಿಣಿ ನಾಯಕಿಯಾಗಿದ್ದಾರೆ. ಹತ್ತು ವರ್ಷಗಳ ಗ್ಯಾಪ್ ಬಳಿಕ ಓಂ ಪ್ರಕಾಶ್ ರಾವ್ ಡೈರೆಕ್ಷನ್ ನಲ್ಲಿ ಶಿವಣ್ಣ ಅಭಿನಯಿಸಿರುವ ಚಿತ್ರವಿದು. ಜೋಗಯ್ಯ ನಂತರ ಶಿವಣ್ಣ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿರಲಿಲ್ಲ. (ಏಜೆನ್ಸೀಸ್)

Read more about: ಶಿವರಾಜ್ ಕುಮಾರ್, ರಾಗಿಣಿ ದ್ವಿವೇದಿ, ಓಂ ಪ್ರಕಾಶ್ ರಾವ್, shivarajkumar, ragini dwivedi, om prakash rao

English summary
A source says, "Kannada film Shiva raked in around Rs 4.50 crore gross in the opening weekend and it has collected around Rs 6 crore in one week. In the week days, the occupancy was above 50% percent in the regions like Mysore, Belgaum, Hosapet. And the response for the movie in Bangalore is far better than other regions."
Please Wait while comments are loading...
Your Fashion Voice

Kannada Photos

Go to : More Photos