twitter
    For Quick Alerts
    ALLOW NOTIFICATIONS  
    For Daily Alerts

    ಈ ವಾರ ಚಿತ್ರಮಂದಿರಗಳಲ್ಲಿ ವಿಜಲ್, ಅಲೆ, ಭೈರವಿ

    By Rajendra
    |

    ಈ ವಾರ (ಜು.12) ಮೂರು ಚಿತ್ರಗಳು ತೆರೆಕಾಣುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ಪ್ರಶಾಂತ್ ರಾಜ್ ನಿರ್ದೇಶನದ 'ವಿಜಲ್' ಚಿತ್ರವೂ ಒಂದು. ಇನ್ನೆರಡು ಚಿತ್ರಗಳಲ್ಲಿ ಹ.ಸೂ.ರಾಜಶೇಖರ್ ನಿರ್ದೇಶನದ ಭೈರವಿ ಹಾಗೂ ಗೋಪಿಕಿರಣ್ ಆಕ್ಷನ್ ಕಟ್ ಹೇಳಿರುವ ಅಲೆ.

    ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅಂತರ್ಜಾಲದಲ್ಲಿ ಹೆಚ್ಚಾಗಿ ಪ್ರಚಾರ ಪಡೆದ ಚಿತ್ರ ವಿಜಲ್. ಈ ಚಿತ್ರವನ್ನು ಲವ್ ಗುರು ಖ್ಯಾತಿಯ ಪ್ರಶಾಂತ್ ರಾಜ್ ನಿರ್ದೇಶಿಸಿದ್ದಾರೆ. ನಿಮ್ಮ ಸಿನಿಮಾ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರವಿದು.

    ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ದಾರೆ. ದೀಪು.ಎಸ್.ಕುಮಾರ್ ಸಂಕಲನ, ಸಂಪತ್ ರಾಜ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಸಂಭಾಷಣೆ ಬರೆದಿದ್ದಾರೆ. ಚಿರಂಜೀವಿಸರ್ಜಾ, ಪ್ರಣೀತಾ, ಗುರುದತ್, ಗುರುಪ್ರಸಾದ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ಅಂದು ಚೆನ್ನಮ್ಮ ಐಪಿಎಸ್ ಇಂದು ಭೈರವಿ

    ಅಂದು ಚೆನ್ನಮ್ಮ ಐಪಿಎಸ್ ಇಂದು ಭೈರವಿ

    ಕರಾಟೆ ರಾಣಿ ಆಯಿಷಾ ಈ ಬಾರಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸಿಕ್ಕ ಮತ್ತೊಬ್ಬ ಮಾಲಾಶ್ರೀ ಎನ್ನಬಹುದು. ಶ್ರೀಸಂಕೇಶ್ವರ ಕಂಬೈನ್ಸ್ ಲಾಂಛನದಲ್ಲಿ ಅಮರ್ ಚಂದ್ ಜೈನ್ ಅರ್ಪಿಸುವ, ವಿಜಯ್ ಸುರಾನ ನಿರ್ಮಿಸಿರುವ ಚಿತ್ರ 'ಭೈರವಿ.

    ಮತ್ತೆ ಲಾಠಿ ಕೈಗೆತ್ತಿಕೊಂಡ ಆಯಿಷಾ

    ಮತ್ತೆ ಲಾಠಿ ಕೈಗೆತ್ತಿಕೊಂಡ ಆಯಿಷಾ

    ಹ.ಸೂ.ರಾಜಶೇಖರ್ ನಿರ್ದೇಶಿಸಿರುವ ಈ ಚಿತ್ರದ ನಾಯಕಿಯಾಗಿ ಆಯಿಷಾ ಅಭಿನಯಿಸಿದ್ದಾರೆ. ರಮೇಶ್ ಭಟ್, ಸುಚೇಂದ್ರ ಪ್ರಸಾದ್, ಮೈಕೋ ನಾಗರಾಜ್, ನೀನಾಸಂ ಅಶ್ವತ್, ಎಂ.ಎಸ್.ಉಮೇಶ್, ಮೈಕೋ ಶಿವು, ಹಂಸ, ಸಂಗೀತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ವೀರಸಮರ್ಥ್ ಸಂಗೀತ ಸಂಯೋಜನೆ

    ವೀರಸಮರ್ಥ್ ಸಂಗೀತ ಸಂಯೋಜನೆ

    ವೀರಸಮರ್ಥ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಗೌರಿವೆಂಕಟೇಶ್ ಅವರ ಛಾಯಾಗ್ರಹಣವಿದೆ. ಕೆ.ಡಿ.ವೆಂಕಟೇಶ್ ಸಾಹಸ ನಿರ್ದೇಶನ, ಬಾಬುಖಾನ್ ಕಲಾ ನಿರ್ದೇಶನವಿರುವ 'ಭೈರವಿ'ಗೆ ಶೇಷಗಿರಿ ಸಂಭಾಷಣೆ ಬರೆದಿದ್ದಾರೆ. ಮುರುಗೇಶ್ ಜವಳಿ, ರಾಜಶೇಖರ್ ಇಟಗಿ, ಪನ್ನಲಾಲ್ ಕೊಠಾರಿ ಅವರುಗಳ ಸಹ ನಿರ್ಮಾಣ ಈ ಚಿತ್ರಕ್ಕಿದೆ.

    ಚಿತ್ರಮಂದಿರದಲ್ಲಿ ಪ್ರೇಮದ 'ಅಲೆ'

    ಚಿತ್ರಮಂದಿರದಲ್ಲಿ ಪ್ರೇಮದ 'ಅಲೆ'

    Waves of Love ಎಂಬುದು ಅಲೆ ಚಿತ್ರದ ಅಡಿಬರಹ. ಚಿತ್ರದ ಕಥಾವಸ್ತು ಏನು ಎಂಬುದು ಅರ್ಥವಾಗುತ್ತದೆ. ಕೆ.ಕೆ.ಆರ್ ಮೂವೀ ಹೌಸ್ ಲಾಂಛನದಲ್ಲಿ ಕಿರಣ್ ಕುಮಾರ್ ರೆಡ್ಡಿ ಅವರು ನಿರ್ಮಿಸಿರುವ ಚಿತ್ರವಿದು.

    ಮನೋಮೂರ್ತಿ ಸಂತೀತ ನಿರ್ದೇಶನ

    ಮನೋಮೂರ್ತಿ ಸಂತೀತ ನಿರ್ದೇಶನ

    ಗೋಪಿಕಿರಣ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅದತ್ ನಿರ್ದೇಶನದ ಈ ಚಿತ್ರಕ್ಕೆ ವಿಜಯ್ ಭರಮಸಾಗರ ಸಂಭಾಷಣೆ ಬರೆದಿದ್ದಾರೆ. ಎ.ರಾಜಾ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಕೆ. ಎಂ.ಪ್ರಕಾಶ್ ಸಂಕಲನ, ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಹಾಗೂ ಬಾಬುಖಾನ್ ಕಲಾ ನಿರ್ದೇಶನ 'ಅಲೆ' ಚಿತ್ರಕ್ಕಿದೆ.

    ತನುಷ್ ಜೊತೆ ಹರ್ಷಿಕಾ ಪೂಣಚ್ಚ

    ತನುಷ್ ಜೊತೆ ಹರ್ಷಿಕಾ ಪೂಣಚ್ಚ

    ತನುಷ್ ಈ ಚಿತ್ರದ ನಾಯಕ. ಹರ್ಷಿಕಾ ಪೂಣಚ್ಚ ನಾಯಕಿ. ಚಂದ್ರಶೇಖರ್, ರಾಮಕೃಷ್ಣ, ಶಕೀಲಾ, ಸುಮನ್ ಶೆಟ್ಟಿ, ಜೊಸೈಮನ್, ಪದ್ಮಜಾರಾವ್, ತಬಲ ನಾಣಿ, ಭವಾನಿ ಪ್ರಕಾಶ್, ಪಿ.ಎನ್.ಸತ್ಯ, ಸುರೇಶ್ ಚಂದ್ರ, ಹರೀಶ್ ರಾಯ್, ಮಿತ್ರ, ಕೆಂಪೇಗೌಡ, ಬಿರಾದಾರ್, ವಿಜಯಸಾರಥಿ, ದುಬೈ ರಫೀಕ್, ಸೂರ್ಯಕಿರಣ್, ಸತೀಶ್ ಗೌಡ, ದಿಲೀಪ್ ರಮಣ, ಮಾ.ಮಂಜುನಾಥ್, ಮಾ.ಚಿರಂಜೀವಿ, ಡ್ಯಾನಿ ಕುಟ್ಟಪ್ಪ, ನವೀನ್, ಸಂಜೀವ್, ಪ್ರಸಾದ್ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    English summary
    Three Kannada films Whistle (Chiranjeevi Sarja, Pranitha), Ale (Tanush, Harshika Poonachcha) and Bhairavi (Ayesha) releasing on 12th July.
    Thursday, July 11, 2013, 19:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X