»   » ಹುಟ್ಟುಹಬ್ಬದ ದಿನ ಏನಿದು ರಾದ್ಧಾಂತ ಚಾಲೆಂಜಿಂಗ್ ಸ್ಟಾರ್?

ಹುಟ್ಟುಹಬ್ಬದ ದಿನ ಏನಿದು ರಾದ್ಧಾಂತ ಚಾಲೆಂಜಿಂಗ್ ಸ್ಟಾರ್?

Written by: ಹರಾ
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇವತ್ತು ಸಂಭ್ರಮದ ಹಬ್ಬ. 38ನೇ ಹುಟ್ಟುಹಬ್ಬದ ಸಡಗರವನ್ನ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ ಎಲ್ಲರ ಪ್ರೀತಿಯ 'ದಾಸ'.

ಆದ್ರೆ, ಇದನ್ನ ಸೆರೆಹಿಡಿದು ರಾಜ್ಯದ ಮೂಲೆ ಮೂಲೆಯಲ್ಲೂ ಪ್ರಸಾರ ಮಾಡುವುದಕ್ಕೆ ಇಂದು ಮಾಧ್ಯಮ ಮಿತ್ರರು ತಯಾರಿಲ್ಲ.


ದರ್ಶನ್ ಬರ್ತಡೆ ಸಂಭ್ರಮ ಮತ್ತು ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಇಂದು ಸೆಟ್ಟೇರುತ್ತಿರುವ 'ಜಗ್ಗು ದಾದಾ' ಮುಹೂರ್ತವನ್ನ ಮಾಧ್ಯಮ ಪ್ರತಿನಿಧಿಗಳು ಬಹಿಷ್ಕರಿಸಿದ್ದಾರೆ.


ಮಾಧ್ಯಮದವರ ಇಂತಹ ನಡೆಗೆ ನಿನ್ನೆ ರಾತ್ರಿ ದರ್ಶನ್ ಮನೆಯಲ್ಲಿ ನಡೆದ ರಾದ್ಧಾಂತ ಕಾರಣ. ಅಸಲಿಗೆ ದರ್ಶನ್ ಮನೆಯಲ್ಲಿ ಮಧ್ಯರಾತ್ರಿ ನಡೆದದ್ದಾರೂ ಏನು? ಮುಂದೆ ಓದಿ......


ದರ್ಶನ್ ಮನೆಯ ಮುಂದೆ ಅಭಿಮಾನಿಗಳ ದಂಡು

ದರ್ಶನ್ ಮನೆಯ ಮುಂದೆ ಅಭಿಮಾನಿಗಳ ದಂಡು

ದರ್ಶನ್ ಬರ್ತಡೆ ಅಂದ್ರೆ, ಮಧ್ಯರಾತ್ರಿ 12 ಗಂಟೆಯಿಂದಲೇ ಸೆಲೆಬ್ರೇಷನ್ ಶುರುವಾಗುತ್ತೆ. ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆ ಮುಂದೆ ಅಭಿಮಾನಿಗಳ ದಂಡೇ ಜಮಾಯಿಸಿರುತ್ತೆ. ನಿನ್ನೆ ಮಧ್ಯರಾತ್ರಿ ಕೂಡ, ರಾಜ್ಯದ ವಿವಿಧ ಕಡೆಯಿಂದ ದರ್ಶನ್ ಅಭಿಮಾನಿಗಳ ಬಳಗ ಅಲ್ಲಿ ನೆರೆದಿತ್ತು. [ಟ್ರ್ಯಾಕ್ ಬದಲಾಯಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್!]


ಮಧ್ಯರಾತ್ರಿ ಮಾಧ್ಯಮದವರು ಹಾಜರ್

ಮಧ್ಯರಾತ್ರಿ ಮಾಧ್ಯಮದವರು ಹಾಜರ್

ರಾತ್ರಿಯಿಂದಲೇ ದರ್ಶನ್ ಹುಟ್ಟುಹಬ್ಬವನ್ನ ಸೆರೆಹಿಡಿಯುವುದಕ್ಕೆ ಪ್ರತಿವರ್ಷದಂತೆ ಈ ಬಾರಿಯೂ ಎಲ್ಲಾ ಸುದ್ದಿ ವಾಹಿನಿಗಳ ಪ್ರತಿನಿಧಿಗಳು ರಾತ್ರಿ 11 ಗಂಟೆ ಸುಮಾರಿಗೆ ದರ್ಶನ್ ಮನೆಗೆ ತೆರಳಿದ್ದಾರೆ. 12 ಗಂಟೆ ಆಗ್ತಿದ್ದಂತೆ ಸಂಭ್ರಮ ಜೋರಾಗಿದೆ. ಇದನ್ನೆಲ್ಲಾ ಶೂಟ್ ಮಾಡಿದ ನಂತ್ರ, ಖಾಸಗಿ ವಾಹಿನಿಯ ವರದಿಗಾರರೊಬ್ಬರು ದರ್ಶನ್ ಪ್ರತಿಕ್ರಿಯೆ ಕೇಳಿದ್ದಾರೆ.


ಪ್ರತಿಕ್ರಿಯೆ ಕೇಳಿದ್ದೇ ತಪ್ಪಾ?

ಪ್ರತಿಕ್ರಿಯೆ ಕೇಳಿದ್ದೇ ತಪ್ಪಾ?

ದರ್ಶನ್ ಬೈಟ್ (ಪ್ರತಿಕ್ರಿಯೆ) ನೀಡುವುದಕ್ಕೆ 'ಹ್ಹೂಂ' ಅನ್ನುವ ಮೊದಲೇ, ಅಲ್ಲೇ ಇದ್ದ ದರ್ಶನ್ 'ಭಕ್ತ'ರೊಬ್ಬರು ''ಅಭಿಮಾನಿಗಳು ಮೊದಲು'' ಅಂತ ಅಭಿಮಾನದ ಪರಾಕಾಷ್ಟೆ ಮೆರೆದಿದ್ದಾರೆ. ನೋಡುನೋಡುತ್ತಿದ್ದಂತೆ, ಸುತ್ತಮುತ್ತಲಿದ್ದ ದರ್ಶನ್ 'ಭಕ್ತವೃಂದ' ಮಾಧ್ಯಮದವರ ಮೇಲೆ ಕಲ್ಲುತೂರಾಟ ನಡೆಸಿದೆ. [ದರ್ಶನ್ ಮನೆ ಮುಂದೆ ಆ ರಾತ್ರಿ ನಡೆದಿದ್ದಾದರೂ ಏನು?]


ಮಾಧ್ಯಮದವರ ಮೇಲೆ ದರ್ಶನ್ 'ಭಕ್ತ'ರ ಹಲ್ಲೆ

ಮಾಧ್ಯಮದವರ ಮೇಲೆ ದರ್ಶನ್ 'ಭಕ್ತ'ರ ಹಲ್ಲೆ

ಖಾಸಗಿ ವಾಹಿನಿಯ ವರದಿಗಾರ ಮತ್ತು ಕ್ಯಾಮರಾಮೆನ್ ಮೇಲೆ ದರ್ಶನ್ ಅಭಿಮಾನಿಗಳು ಹಲ್ಲೆ ನಡೆಸಿದ್ದಾರೆ. ಇದರ ಜೊತೆಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಖಾಸಗಿ ವಾಹಿನಿಯ ಓ.ಬಿ. ವ್ಯಾನ್ ಜಖಂಗೊಂಡಿದೆ.


''ನಂಗೇನೂ ಗೊತ್ತಿಲ್ಲ'' ಅಂತಾರೆ ದರ್ಶನ್!

''ನಂಗೇನೂ ಗೊತ್ತಿಲ್ಲ'' ಅಂತಾರೆ ದರ್ಶನ್!

ಇಷ್ಟಾದರೂ, ಬೆಳ್ಳಗೆ ಎಂದಿನಂತೆ ದರ್ಶನ್ ಹುಟ್ಟುಹಬ್ಬ ಮತ್ತು 'ಜಗ್ಗು ದಾದಾ' ಮುಹೂರ್ತ ಸಮಾರಂಭಕ್ಕೆ ಎಲ್ಲಾ ಮಾಧ್ಯಮ ಪ್ರತಿನಿಧಿಗಳು ತೆರಳಿದ್ದಾರೆ. ರಾತ್ರಿ ನಡೆದ ಘಟನೆ ಬಗ್ಗೆ ದರ್ಶನ್ ಪ್ರತಿಕ್ರಿಯೆಗಾಗಿ ಕಾದು ಕುಳಿತಿದ್ದಾರೆ. ಆದರೆ ದರ್ಶನ್ ಕೊಟ್ಟ ಪ್ರತಿಕ್ರಿಯೆ ಎಲ್ಲಾ ಮಾಧ್ಯಮದವರ ವೃತ್ತಿಪರತೆಗೆ ಬೇಸರ ಉಂಟುಮಾಡಿದೆ.


ದರ್ಶನ್ ಬರ್ತಡೆ ಬಹಿಷ್ಕಾರ!

ದರ್ಶನ್ ಬರ್ತಡೆ ಬಹಿಷ್ಕಾರ!

ಆದ ಘಟನೆ ಬಗ್ಗೆ ಇಂದು ಬೆಳ್ಳಗ್ಗೆ ಮಾತನಾಡಿದ ದರ್ಶನ್, ''ನನಗೇನೂ ಗೊತ್ತಿಲ್ಲ. ಈ ದಿನ ಅಭಿಮಾನಿಗಳಿಗಾಗಿ ಮೀಸಲು. ನಾನು ಇಲ್ಲಿ ಬಿಜಿಯಿದ್ದೀನಿ'' ಅಂತ ಹೇಳಿಕೆ ನೀಡಿದ್ದಾರೆ. ನಡೆದ ಘಟನೆಯ ಸಂಪೂರ್ಣ ವಿವರ ದರ್ಶನ್ ಗೆ ಗೊತ್ತಿದ್ದರೂ, ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿರುವುದಕ್ಕೆ ಬೇಸೆತ್ತ ಮಾಧ್ಯಮ ಮಿತ್ರರು ದರ್ಶನ್ ಬರ್ತಡೆಯನ್ನ ಬಹಿಷ್ಕರಿಸಿದ್ದಾರೆ.


English summary
Challenging Star Darshan Celebrating his 38th birthday today (Feb 16th) with much fanfare. Due to the havoc created by Darshan Fans last night, Kannada Electronic Media have boycotted the Actor's Birthday Celebrations and New movie 'Jaggu Dada' Launch
Please Wait while comments are loading...

Kannada Photos

Go to : More Photos