twitter
    For Quick Alerts
    ALLOW NOTIFICATIONS  
    For Daily Alerts

    ಅರ್ಜುನ್ ಸರ್ಜಾ 'ಅಭಿಮನ್ಯು' ಜನಭರಿತ ಐವತ್ತರ ಪ್ರದರ್ಶನ

    By Rajendra
    |

    ಕಾಡುಗಳ್ಳ ವೀರಪ್ಪನ್ ಕಥೆಯಾಧಾರಿತ 'ಅಟ್ಟಹಾಸ' ಚಿತ್ರದಲ್ಲಿ ಡಿಜಿಪಿ ವಿಜಯ್ ಕುಮಾರ್ ಪಾತ್ರದಲ್ಲಿ ಅರ್ಜುನ್ ಸರ್ಜಾ ಖಡಕ್ ಅಭಿನಯ ನೀಡಿದ್ದರು. ಅದಾದ ಬಳಿಕ ಅವರು ಸ್ಯಾಂಡಲ್ ವುಡ್ ನಲ್ಲಿ ಅಭಿನಯಿಸಿದ ಚಿತ್ರ 'ಅಭಿಮನ್ಯು'. ಈ ಚಿತ್ರ ಈಗ ಜನಭರಿತ ಐವತ್ತು ದಿನಗಳನ್ನು ಪೂರೈಸಿದೆ.

    ಬೆಂಗಳೂರಿನ ಶಾರದ, ಬಿಡದಿಯ ದೀಪಕ್, ಮುದ್ದೇಬಿಹಾಳದ ಗಿರಿಜಾಶಂಕರ್, ಬ್ಯಾಡಗಿಯ ಪಾಂಡುರಂಗ, ಅಮೀನಗಢದ ಲಕ್ಷ್ಮಿ ಸೇರಿದಂತೆ ಒಟ್ಟು 13 ಕೇಂದ್ರಗಳಲ್ಲಿ ಯಶಸ್ವಿ ಐವತ್ತು ದಿನಗಳನ್ನು ಪೂರೈಸಿದೆ ಅಭಿಮನ್ಯು. [ಅಭಿಮನ್ಯು ಚಿತ್ರ ವಿಮರ್ಶೆ]

    Nothing is Impossible ಎಂಬುದು ಚಿತ್ರದ ಅಡಿಬರಹ. ಈ ಚಿತ್ರದ ವಿಶಾಲ ಕರ್ನಾಟಕ ಹಂಚಿಕೆದಾರರು ಕಲ್ಯಾಣಿ ಫಿಲಂಸ್. ಭಾರತೀಯ ಶಿಕ್ಷಣ ವ್ಯವಸ್ಥೆ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ 'ಅಭಿಮನ್ಯು'ವಿನ ಹೋರಾಟವನ್ನು ಕಾಣಬಹುದು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

    kannada movie abhimanyu completes 50 days

    ಆಕ್ಷನ್ ಹೀರೋ ಅರ್ಜುನ್ ಸರ್ಜಾ ಅವರು ನಟಿಸಿ, ನಿರ್ದೇಶಿಸಿ ಜೊತೆಗೆ ಕಥೆ ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ಮಾಣ ಮಾಡಿರುವ ಚಿತ್ರವಿದು. ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿದೆ, ಹೇಗಾಗಬೇಕು, ಬದಲಾವಣೆ ತರಲು ಏನೆಲ್ಲಾ ಮಾಡಬೇಕು ಎಂಬ ಕಮರ್ಷಿಯಲ್ ಅಂಶಗಳನ್ನು ತುಂಬಿ ಕಥೆ ಹೆಣೆಯಲಾಗಿದೆ. ಕಥೆ ಕಮರ್ಷಿಯಲ್ ದೃಷ್ಟಿಕೋನದಲ್ಲಿ ಸಾಗಿದರೂ ವಾಸ್ತವಕ್ಕೆ ತುಂಬಾ ಹತ್ತಿರವಾಗಿದ್ದು ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ.

    ಶ್ರೀರಾಂ ಫಿಲಂಸ್ ಇಂಟರ್ ನ್ಯಾಷನಲ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ 'ಅಭಿಮನ್ಯು' ಚಿತ್ರಕ್ಕೆ ಬೆಂಗಳೂರು ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣವಿದೆ.

    ಕೆ.ಕೆ ಸಂಕಲನ, ಶಶಿಧರ್ ಅಡಪ ಕಲಾನಿರ್ದೇಶನ, ರಾಜುಸುಂದರಂ ನೃತ್ಯ ನಿರ್ದೇಶನ ಹಾಗೂ ಶಿವಾರ್ಜುನ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಅರ್ಜುನ್ ಸರ್ಜಾ, ಸುರ್ವಿನ್ ಚಾವ್ಲಾ, ರವಿಕಾಳೆ, ಸಿಮ್ರಾನ್ ಕಪೂರ್, ರಾಹುಲ್ ದೇವ್, ಬಿರಾದಾರ್, ಜಹಂಗೀರ್, ವಿನಯಾಪ್ರಸಾದ್, ಸತೀಶ್ ಮುಂತಾದವರಿದ್ದಾರೆ. (ಫಿಲ್ಮಿಬೀಟ್ ಕನ್ನಡ)

    English summary
    Action King Arjun Sarja's Magnum opus 'Abhimanyu' completes 50 days in 13 centres. The issue-based movie talks about the education system in India, and it is dedicated to Dr Abdul Kalam.
    Friday, December 26, 2014, 17:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X