ಬಚ್ಚನ್ ಚಿತ್ರದ ಮೊದಲ ಎಂಟು ದಿನದ ಗಳಿಕೆ: Exclusive

Posted by:
 
Share this on your social network:
   Facebook Twitter Google+    Comments Mail

ಶಶಾಂಕ್ ನಿರ್ದೇಶನದ, ಕಿಚ್ಚ ಸುದೀಪ್ ಅಭಿನಯದ ಬಚ್ಚನ್ ಚಿತ್ರ ರಾಜ್ಯದಲ್ಲಿ ಅಲ್ಲದೇ ದೂರದ ಮಧ್ಯಪ್ರಾಚ್ಯ ರಾಷ್ಟಗಳಲ್ಲೂ ಹವಾ ಎಬ್ಬಿಸುತ್ತಿದೆ. ತೀರಾ ಅಪರೂಪ ಎನಿಸುವಂತೆ ದುಬೈ, ಶಾರ್ಜಾ ಮತ್ತು ಅಬುದಾಬಿ ನಗರದಲ್ಲಿ ನಿರೀಕ್ಷೆಗೂ ಮೀರಿ ಚಿತ್ರಕ್ಕೆ ಜನ ಹರಿದು ಬರುತ್ತಿದ್ದಾರೆ.

ಚಿತ್ರವನ್ನು ಮೂರು ಭಾಷೆಗಳಲ್ಲಿ ವಾಯ್ಸ್ ಡಬ್ ಮಾಡಲು ಈ ಹಿಂದೆ ನಿರ್ಧರಿಸಿದ್ದ ಚಿತ್ರತಂಡ, ಸದ್ಯಕ್ಕೆ ಅದರಿಂದ ಹಿಂದಕ್ಕೆ ಸರಿದಿದೆ. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಮಾತ್ರ ಡಬ್ ಮಾಡಲು ನಿರ್ಧರಿಸಿದೆ.

ಚಿತ್ರದ ಹಿಂದಿ ರಿಮೇಕ್ ರೈಟ್ಸಿಗೆ ಭಾರೀ ಡಿಮಾಂಡ್ ಬಂದಿರುವ ಹಿನ್ನಲೆಯಲ್ಲಿ ಡಬ್ ಮಾಡದೇ ರಿಮೇಕ್ ರೈಟ್ಸ್ ಮಾರಾಟ ಮಾಡಲು ಮಾತುಕತೆಗಳು ನಡೆಯುತ್ತಿದೆ. ಬಾಲಿವುಡ್ ನಿರ್ದೇಶಕ ಚೇತನ್ ರಾವಲ್ ರೈಟ್ಸ್ ಪಡೆದುಕೊಳ್ಳಲು ಮುಂದೆ ಬಂದಿದ್ದಾರೆ.

ಅಜಯ್ ದೇವಗನ್ ಅವರ ಡೇಟ್ಸ್ ಹೊಂದಿರುವ ಚೇತನ್ ಬಚ್ಚನ್ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ನಿರ್ಮಾಪಕ ಉದಯ್ ಮೆಹ್ತಾ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ಒನ್ ಇಂಡಿಯಾಗೆ ಬಚ್ಚನ್ ಚಿತ್ರದ ನಿರ್ಮಾಪಕ ಉದಯ್ ಮೆಹ್ತಾ ನೀಡಿದ ಮೊದಲ ಎಂಟು ದಿನದ area wise ಬಾಕ್ಸ್ ಆಫೀಸ್ ವರದಿ ಇಂತಿದೆ.

ಎಲ್ಲೆಲ್ಲೂ ಬಚ್ಚನ್ ಹವಾ

ಯುಗಾದಿ ಹಬ್ಬದ ದಿನದಂದು ಬಿಡುಗಡೆಯಾದ ಚಿತ್ರಕ್ಕೆ ಎಲ್ಲಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರವನ್ನು ಗೆಲ್ಲಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಮೊದಲ ಎಂಟು ದಿನದಲ್ಲಿನ ಒಟ್ಟು ಗಳಿಕೆ 8 ಕೋಟಿ. ಅದರಲ್ಲಿ ನಮ್ಮ ಷೇರು 5.5 ಕೋಟಿ.

ಎಲ್ಲೆಲ್ಲೂ ಬಚ್ಚನ್ ಹವಾ

ಟಿಕೆಟ್ ಬೆಲೆ ಏರಿಸದೇ ನಮಗೆ ಬಂದ ಷೇರು ಇತ್ತೀಚಿನ ದಿನಗಳಲ್ಲಿ ಯಾವುದೇ ಕನ್ನಡ ಚಿತ್ರಕ್ಕೆ ಬಂದಿಲ್ಲ. ಬಿಕೆಟಿ (ಬೆಂಗಳೂರು, ಕೋಲಾರ, ತುಮಕೂರು) ಪ್ರಾಂತ್ಯದಿಂದ ಬಂದ ಷೇರು 2.25 ಕೋಟಿ.

ಎಲ್ಲೆಲ್ಲೂ ಬಚ್ಚನ್ ಹವಾ

ಮೈಸೂರು ಮತ್ತು ಹುಬ್ಬಳ್ಳಿಯಲ್ಲೂ ಚಿತ್ರದ ಗಳಿಕೆ ಚೆನ್ನಾಗಿದೆ. ಮೈಸೂರಿನಲ್ಲಿ 1.10 ಕೋಟಿ ಮತ್ತು ಹುಬ್ಬಳ್ಳಿಯಲ್ಲಿ 90 ಲಕ್ಷ ನಮ್ಮ ಷೇರು.

ಎಲ್ಲೆಲ್ಲೂ ಬಚ್ಚನ್ ಹವಾ

ಚಿತ್ರದುರ್ಗ ಮತ್ತು ಬಳ್ಳಾರಿ ಪ್ರಾಂತ್ಯದಿಂದ ಐವತ್ತು ಲಕ್ಷ ಷೇರು ಬಂದಿದೆ.

ಎಲ್ಲೆಲ್ಲೂ ಬಚ್ಚನ್ ಹವಾ

ಐಪಿಎಲ್ ಮತ್ತು ಚುನಾವಣೆಯ ನಡುವೆಯೂ ಚಿತ್ರ ಗಳಿಕೆಯಲ್ಲಿ ಮುನ್ನಡೆಯುತ್ತಿದೆ. ಹೈದರಾಬಾದ್ ಕರ್ನಾಟಕ ಭಾಗದಿಂದ 40 ಲಕ್ಷ ಮತ್ತು ಮಂಗಳೂರು ಭಾಗದಿಂದ 35 ಲಕ್ಷ ಷೇರು ಬಂದಿದೆ ಎಂದು ಉದಯ್ ಮೆಹ್ತಾ ತಿಳಿಸಿದ್ದಾರೆ.

Topics: sudeep, shashank, box office report, bhavana, tulip joshi, ಸುದೀಪ್, ಭಾವನಾ, ಶಶಾಂಕ್, ಬಾಕ್ಸ್ ಆಫೀಸ್ ಗಳಿಕೆ

English summary
Shashank directed Kichcha Sudeep starrer 'Bachchan' first eight days Box office exclusive report.

Kannada Photos

Go to : More Photos