»   » ಈ ದಸರಾ ಹಬ್ಬಕ್ಕೆ ಧನಂಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಈ ದಸರಾ ಹಬ್ಬಕ್ಕೆ ಧನಂಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ

Posted by:
Subscribe to Filmibeat Kannada

'ಸ್ಪೆಷಲ್ ಹೀರೋ' ಧನಂಜಯ್ ಮತ್ತು ನಟಿ ಸಂಚಿತಾ ಶೆಟ್ಟಿ ಕಾಣಿಸಿಕೊಂಡಿರುವ 'ಬದ್ಮಾಶ್' ಚಿತ್ರದ ಬಗ್ಗೆ ಅಭಿಮಾನಿಗಳು ಭಾರಿ ಕುತೂಹಲ ಇಟ್ಟುಕೊಂಡಿದ್ದಾರೆ. ಟ್ರೈಲರ್ ಮತ್ತು ಹಾಡುಗಳಿಂದ ಕಾತರತೆ ಹೆಚ್ಚಿಸಿರುವ 'ಬದ್ಮಾಶ್' ಯಾವಾಗ ತೆರೆ ಕಾಣುತ್ತೆ ಅಂತ ಸಿನಿ ಪ್ರಿಯರು ಪ್ರಶ್ನೆ ಮಾಡುತ್ತಿದ್ದಾರೆ.

ಇದೀಗ 'ಬದ್ಮಾಶ್' ಬಿಡುಗಡೆಗೆ ಘಳಿಗೆ ಕೂಡಿ ಬಂದಿದ್ದು, ಕೊನೆಗೂ ಚಿತ್ರವನ್ನು ತೆರೆಯ ಮೇಲೆ ತರಲು ಚಿತ್ರತಂಡದವರು ಮನಸ್ಸು ಮಾಡಿದ್ದಾರೆ. ಅದೂ ವಿಶೇಷ ದಿನದಂದು ಸಿನಿಮಾ ಬಿಡುಗಡೆ ಮಾಡಲಿದ್ದಾರೆ.


Kannada movie 'Badmaash' to release on 'Dasara'

ಅತ್ಯಂತ ದೊಡ್ಡ ಹಬ್ಬವಾದ 'ನಾಡಹಬ್ಬ' ದಸರಾದಂದು ಧನಂಜಯ್ ಮತ್ತು ಸಂಚಿತಾ ಶೆಟ್ಟಿ ಅಭಿನಯದ 'ಬದ್ಮಾಶ್' ತೆರೆಗೆ ಬರುತ್ತಿದೆ. ರಿಲೀಸ್ ಡೇಟ್ ಇನ್ನೂ ಫಿಕ್ಸ್ ಆಗದಿದ್ದರೂ, ಅಕ್ಟೋಬರ್ ತಿಂಗಳಿನಲ್ಲಿ ಹಬ್ಬದ ಸಮಯದಲ್ಲಿ, ಚಿತ್ರಮಂದಿರಗಳಲ್ಲಿ 'ಬದ್ಮಾಶ್' ಅಬ್ಬರಿಸೋದು ಪಕ್ಕಾ.[ಸಲ್ಮಾನ್ ರೀಮೇಕ್ ಮಾಡುತ್ತಿರುವ ಕನ್ನಡದ ಚಿತ್ರ ಯಾವುದು?]


Kannada movie 'Badmaash' to release on 'Dasara'

ಚಿತ್ರಕ್ಕೆ ರವಿ ಕಶ್ಯಪ್ ಬಂಡವಾಳ ಹೂಡಿದ್ದು, ಆಕಾಶ್ ಶ್ರೀವತ್ಸ ಅವರು ನಿರ್ದೇಶನ ಮಾಡಿದ್ದಾರೆ. ಇನ್ನು ಈ ಚಿತ್ರದ ಟ್ರೈಲರ್ ನೋಡಿ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು ಮೆಚ್ಚಿಕೊಂಡಿದ್ದರು ಅನ್ನೋದು, ಈ ಚಿತ್ರತಂಡದ ಕಿರೀಟಕ್ಕೆ ಸಿಕ್ಕ ಮತ್ತೊಂದು ಗರಿ.

English summary
Kannada movie 'Badmaash' all set to release on 'Dasara'. Kannada Actor Dhananjay, Actress Sanchita Shetty in the lead role. The movie is directed by Akash Srivatsa.
Please Wait while comments are loading...

Kannada Photos

Go to : More Photos