»   » ದಿಗಂತ್-ಭಾಮಾ 'ಬರ್ಫಿ'ಯ ಬಣ್ಣಬಣ್ಣದ ಫೋಟೋಗಳು

ದಿಗಂತ್-ಭಾಮಾ 'ಬರ್ಫಿ'ಯ ಬಣ್ಣಬಣ್ಣದ ಫೋಟೋಗಳು

Posted by:
Subscribe to Filmibeat Kannada

ಕನ್ನಡದ ಹ್ಯಾಂಡ್ ಸಮ್ ಹೀರೋ ದಿಗಂತ್ ಹಾಗೂ ಮಲಯಾಳಂ ಬೆಡಗಿ ಭಾಮಾ ಜೋಡಿಯ 'ಬರ್ಫಿ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇಂಡಿಯಾದ ಸಾಕಷ್ಟು ಸುಂದರ ತಾಣಗಳಲ್ಲಿ 'ಬರ್ಫಿ'ಗಾಗಿ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಹಾಡಿನ ಚಿತ್ರೀಕರಣಕ್ಕಾಗಿ ವಿಶೇಷ ಸ್ಥಳವನ್ನು ಆಯ್ಕೆ ಮಾಡಿಕೊಂಡಿದೆಯಂತೆ. ನಿರ್ದೇಶಕ ರಾಜಶೇಖರ್ ಈ ಚಿತ್ರವನ್ನು ತುಂಬಾ ಅದ್ದೂರಿಯಾಗಿ ತೆರೆಗೆ ತರಲು ನಿರ್ಧರಿಸಿದ್ದಾರೆ.

ಈ ಮೊದಲು 'ಅಮೃತವಾಣಿ' ಹಾಗೂ 'ಪೆರೋಲ್' ಚಿತ್ರವನ್ನು ನಿರ್ದೇಶಿಸಿದ್ದ ರಾಜಶೇಖರ್, ಇದೀಗ 'ಬರ್ಫಿ' ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ದೂದ್ ಪೇಡಾ ಖ್ಯಾತಿಯ ದಿಗಂತ್ ಹಾಗೂ 'ಶೈಲೂ' ಖ್ಯಾತಿಯ ಮಲಯಾಳಂ ಬೆಡಗಿ ಭಾಮಾ ಜೋಡಿಯನ್ನು ತಮ್ಮ ಚಿತ್ರಕ್ಕೆ ನಾಯಕ-ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರವು ಬಾಲಿವುಡ್ ನಲ್ಲಿ ಬಿಡುಗಡೆಯಾಗಿರುವ 'ಬರ್ಫಿ' ರೀಮೇಕ್ ಅಲ್ಲವೆಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ನಿರ್ದೇಶಕ ರಾಜಶೇಖರ್ ಪ್ರಕಾರ, ಈ ಚಿತ್ರವು ಸ್ವೀಟ್ ರೊಮ್ಯಾಂಟಿಕ್ ಲವ್ ಸ್ಟೋರಿ. ಮುಖ್ಯವಾಗಿ ಕಾಲೇಜ್ ಹುಡುಗರಿಗೆ ಇಷ್ಟವಾಗಬಹುದಾದ ಕಥೆ ಇದಾಗಿದ್ದರೂ ಎಲ್ಲಾ ವರ್ಗದವರೂ ನೋಡಿ ಖುಷಿಪಡಬಹುದಾದ ಚಿತ್ರವಾಗಿ 'ಬರ್ಫಿ' ಮೂಡಿಬರಲಿದೆ ಎಂದಿದ್ದಾರೆ. ಈ ಚಿತ್ರವನ್ನು ಭಾರಿ ಬಜೆಟ್ ಹಾಕಿ ನಿರ್ಮಿಸಲಾಗುತ್ತಿದೆ ಎಂಬ ಗುಟ್ಟನ್ನೂ ರಟ್ಟು ಮಾಡಿದ್ದಾರೆ ರಾಜಶೇಖರ್.

ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗಿರುವ 'ಬರ್ಫಿ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಬರುವ ವರ್ಷ, 2013 ರಲ್ಲಿ ಆರಂಭದಲ್ಲಿ ಚಿತ್ರ ತೆರೆಕಾಣಲಿದೆ. ಈ ಚಿತ್ರದ ಕೆಲವು ಫೋಟೋಗಳು ನಿಮಗಾಗಿ ಇಲ್ಲಿವೆ, ನೋಡಿ...

ಬರ್ಫಿ ಚಿತ್ರದಲ್ಲಿ ಭಾಮಾ ಜೊತೆ ದಿಗಂತ್ ರೊಮಾನ್ಸ್!

ಬರ್ಫಿ ಚಿತ್ರದಲ್ಲಿ ಭಾಮಾ ಜೊತೆ ದಿಗಂತ್ ರೊಮಾನ್ಸ್!

ಚಿತ್ರೀಕರಂದ ಹಂತದಲ್ಲಿರುವ ಬರ್ಫಿ ಚಿತ್ರದಲ್ಲಿ ದೂದ್ ಪೇಡಾ ದಿಗಂತ್ ಅವರಿಗೆ ಜೋಡಿಯಾಗಿ ಮಲಯಾಳಂ ಬೆಡಗಿ ಭಾಮಾ ನಟಿಸಿದ್ದಾರೆ. ಇದೇ ಮೊದಲಬಾರಿಗೆ ಈ ಜೋಡಿ ತೆರೆಯ ಮೇಲೆ ಕಾಣಿಸಿಕೊಂಡಿದೆ.

ದಿಗಂತ್ ಭಾಮಾ ಜೋಡಿಗೆ ರಾಜಶೇಖರ್ ಆಕ್ಷನ್ ಕಟ್

ದಿಗಂತ್ ಭಾಮಾ ಜೋಡಿಗೆ ರಾಜಶೇಖರ್ ಆಕ್ಷನ್ ಕಟ್

ದಿಗಂತ್ ಹಾಗೂ ಭಾಮಾ ಜೋಡಿಯ ಈ ಚಿತ್ರವನ್ನು ರಾಜಶೇಖರ್ ನಿರ್ದೇಶಿಸುತ್ತಿದ್ದಾರೆ. ಅವರು ಈ ಮೊದಲು ಅಮೃತವಾನೀ ಹಾಗೂ ಪೆರೋಲ್ ಚಿತ್ರವನ್ನು ನಿರ್ದೇಶಿಸಿದ್ದರು.

ಸುಂದರ ತಾಣಗಳಲ್ಲಿ ಸಾಗಿದ ಬರ್ಫಿ ಚಿತ್ರೀಕರಣ

ಸುಂದರ ತಾಣಗಳಲ್ಲಿ ಸಾಗಿದ ಬರ್ಫಿ ಚಿತ್ರೀಕರಣ

ಇಂಡಿಯಾದ ಸಾಕಷ್ಟು ಸುಂದರ ತಾಣಗಳಲ್ಲಿ 'ಬರ್ಫಿ'ಗಾಗಿ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಹಾಡಿನ ಚಿತ್ರೀಕರಣಕ್ಕಾಗಿ ವಿಶೇಷ ಸ್ಥಳವನ್ನು ಆಯ್ಕೆ ಮಾಡಿಕೊಂಡಿದೆಯಂತೆ. ನಿರ್ದೇಶಕ ರಾಜಶೇಖರ್ ಈ ಚಿತ್ರವನ್ನು ತುಂಬಾ ಅದ್ದೂರಿಯಾಗಿ ತೆರೆಗೆ ತರಲು ನಿರ್ಧರಿಸಿದ್ದಾರೆ.

ಕನ್ನಡದ 'ಬರ್ಫಿ'ಬಾಲಿವುಡ್ ರೀಮೇಕ್ ಅಲ್ಲ; ರಾಜಶೇಖರ್

ಕನ್ನಡದ 'ಬರ್ಫಿ'ಬಾಲಿವುಡ್ ರೀಮೇಕ್ ಅಲ್ಲ; ರಾಜಶೇಖರ್

ಈ ಬರ್ಫಿ ಚಿತ್ರವು ಬಾಲಿವುಡ್ ನಲ್ಲಿ ಬಿಡುಗಡೆಯಾಗಿರುವ 'ಬರ್ಫಿ' ರೀಮೇಕ್ ಅಲ್ಲವೆಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ರಾಜಶೇಖರ್ ಪ್ರಕಾರ, ಈ ಚಿತ್ರವು ಸ್ವೀಟ್ ರೊಮ್ಯಾಂಟಿಕ್ ಲವ್ ಸ್ಟೋರಿ. ಮುಖ್ಯವಾಗಿ ಕಾಲೇಜ್ ಹುಡುಗರಿಗೆ ಇಷ್ಟವಾಗಬಹುದಾದ ಕಥೆ ಇದಾಗಿದ್ದರೂ ಎಲ್ಲಾ ವರ್ಗದವರೂ ನೋಡಿ ಖುಷಿಪಡಬಹುದಾದ ಚಿತ್ರವಾಗಿ 'ಬರ್ಫಿ' ಮೂಡಿಬರಲಿದೆ ಎಂದಿದ್ದಾರೆ.

ಬಿಗ್ ಬಜೆಟ್ಟಿನ ಅದ್ದೂರಿ ಚಿತ್ರವಾಗಿ ತೆರೆಗೆ ಬರಲಿರುವ ಬರ್ಫಿ

ಬಿಗ್ ಬಜೆಟ್ಟಿನ ಅದ್ದೂರಿ ಚಿತ್ರವಾಗಿ ತೆರೆಗೆ ಬರಲಿರುವ ಬರ್ಫಿ

ದಿಗಂತ್ ಹಾಗೂ ಭಾಮಾ ಜೋಡಿಯ 'ಬರ್ಫಿ' ಚಿತ್ರವು ಭಾರಿ ಬಜೆಟ್ ಹಾಕಿ ನಿರ್ಮಿಸಲಾಗುತ್ತಿರುವ ಬಹು ಅದ್ದೂರಿ ಚಿತ್ರವೆಂಬ ಎಂಬ ಗುಟ್ಟನ್ನು ರಟ್ಟು ಮಾಡಿದ್ದಾರೆ ನಿರ್ದೇಶಕ ರಾಜಶೇಖರ್.

ಮುಂದಿನ ವರ್ಷದ ಪ್ರಾರಂಭದಲ್ಲಿ ತೆರೆಕಾಣಲಿರುವ ಬರ್ಫಿ

ಮುಂದಿನ ವರ್ಷದ ಪ್ರಾರಂಭದಲ್ಲಿ ತೆರೆಕಾಣಲಿರುವ ಬರ್ಫಿ

ದಿಗಂತ್ ಹಾಗೂ ಭಾಮಾ ಜೋಡಿಯ ಈ ಚಿತ್ರವು ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಶೂಟಿಂಗ್ ಪ್ರಾರಂಭಿಸಿದ್ದು ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಚಿತ್ರವು ಬರುವ ವರ್ಷ, 2013 ರ ಆರಂಭದಲ್ಲಿ ತೆರೆಕಾಣಲಿದೆ.

English summary
Kannada Movie Barfi is in Shooting stage. Diganth and Bhama are in lead role in this Rajashekar directed movie. Here, some of the photos are to see...
Please Wait while comments are loading...

Kannada Photos

Go to : More Photos