»   » 'ಭುಜಂಗ' ಬರ್ತಾ ಇದ್ದಾನೆ, ದಾರಿ ಬಿಡ್ರೋ!

'ಭುಜಂಗ' ಬರ್ತಾ ಇದ್ದಾನೆ, ದಾರಿ ಬಿಡ್ರೋ!

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಭರ್ಜರಿ 25ನೇ ಚಿತ್ರ 'ಭುಜಂಗ' ತೆರೆಗೆ ಬರಲು ತಯಾರಾಗಿದೆ. ಇದೀಗ ಕೊನೆಯ ಭಾಗದ ಶೂಟಿಂಗ್ ಹಂತದಲ್ಲಿರುವ ಚಿತ್ರತಂಡ, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿ ಬ್ಯುಸಿಯಾಗಿದೆ.

ರೀಸೆಂಟ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಡೈನಾಮಿಕ್ ಪ್ರಿನ್ಸ್ ಸದ್ದಿಲ್ಲದೇ 'ಭುಜಂಗ' ಚಿತ್ರದ ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ. ಜೊತೆಗೆ ಚಿತ್ರದ ಪ್ರೊಮೋಷನ್ ಕಾರ್ಯಗಳನ್ನು ಕೂಡ ಚಿತ್ರತಂಡ ಶುರು ಹಚ್ಚಿಕೊಂಡಿದೆ.

ಅಂದಹಾಗೆ 'ಭುಜಂಗ' ಸಿನಿಮಾ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಸಿನಿ ಕೆರಿಯರ್ ನಲ್ಲಿ ಒಂದು ವಿಭಿನ್ನ ಅನುಭವ ಕೊಟ್ಟ ಸಿನಿಮಾವಂತೆ. ಈ ಹಿಂದೆ ತಾವು ಮಾಡದೇ ಇರುವಂತಹ ಪಾತ್ರವನ್ನು ಪ್ರಜ್ವಲ್ ಅವರು ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಮಾಡಿದ್ದಾರೆ.

ನೆಗೆಟಿವ್ ರೋಲ್ ಮೂಲಕ ಇವರ ಎಂಟ್ರಿಯಾಗೋದು, 'ಭುಜಂಗ' ಚಿತ್ರದ ವಿಶೇಷವಂತೆ. ಇನ್ನು ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ ಕಳ್ಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅಲ್ಲದೇ ಇತ್ತೀಚೆಗಷ್ಟೇ ಈ ಚಿತ್ರದ ಸ್ಟಂಟ್ಸ್ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು.

ವಿಶೇಷವಾಗಿ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಜೀವಾ ಅವರು ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು, ಮಧು ಅವರು ಚಿತ್ರಕಥೆ ಬರೆಯುವ ಜವಾಬ್ದಾರಿ ಹೊತ್ತಿದ್ದಾರೆ. 'ಲೂಸಿಯಾ' ಖ್ಯಾತಿಯ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರ ಮ್ಯೂಸಿಕ್ ಕಂಪೋಸಿಷನ್ ಈ ಚಿತ್ರಕ್ಕಿದೆ.

ಒಟ್ನಲ್ಲಿ ಎಲ್ಲವೂ ಅಂದುಕೊಂಡಂತೆ ಬೇಗ ಬೇಗ ಮುಗಿದರೆ ಸದ್ಯದಲ್ಲೇ 'ಭುಜಂಗ' ತನ್ನನ ಪರಾಕ್ರಮವನ್ನು ತೆರೆ ಮೇಲೆ ತೋರಲಿದ್ದಾನೆ. ಅಲ್ಲದೇ ಡೈನಾಮಿಕ್ ಪ್ರಿನ್ಸ್ ಗೆ ಇದು 25ನೇ ಚಿತ್ರವಾಗಿರುವುದರಿಂದ ಸಹಜವಾಗಿ ನಿರೀಕ್ಷೆ ಕೊಂಚ ಜಾಸ್ತೀನೇ ಇದೆ ಬಿಡಿ.

English summary
Kannada Movie 'Bhujanga' is ready to release. Kannada Actor Prajwal Devaraj, Kannada Actress Meghana Raj in the lead role. The movie is directed by Jeeva.
Please Wait while comments are loading...

Kannada Photos

Go to : More Photos