»   » ಪವರ್ ಸ್ಟಾರ್ 'ಚಕ್ರವ್ಯೂಹ'ದ ಜಬರ್ದಸ್ತ್ ಫಸ್ಟ್ ಲುಕ್ ಪೋಸ್ಟರ್ ಔಟ್

ಪವರ್ ಸ್ಟಾರ್ 'ಚಕ್ರವ್ಯೂಹ'ದ ಜಬರ್ದಸ್ತ್ ಫಸ್ಟ್ ಲುಕ್ ಪೋಸ್ಟರ್ ಔಟ್

Posted by:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 25ನೇ ಬಹುನಿರೀಕ್ಷಿತ 'ಚಕ್ರವ್ಯೂಹ' ಚಿತ್ರದ ಜಬರ್ದಸ್ತ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಪವರ್ ಸ್ಟಾರ್ ಅಭಿಮಾನಿಗಳಿಗೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದಂತಾಗಿದೆ.

ತಮಿಳು ನಿರ್ದೇಶಕ ಎಮ್ ಸರವಣನ್ ಆಕ್ಷನ್-ಕಟ್ ಹೇಳಿರುವ 'ಚಕ್ರವ್ಯೂಹ' ಚಿತ್ರ ಸದ್ಯಕ್ಕೆ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಅವರು ಇದೇ ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ಅವರೊಂದಿಗೆ ಡ್ಯುಯೆಟ್ ಹಾಡುತ್ತಿದ್ದಾರೆ.[ಪವರ್ ಸ್ಟಾರ್ 'ಚಕ್ರವ್ಯೂಹ' ದಲ್ಲಿ ಖಳನಟನಾಗಿ ಅಭಿಮನ್ಯು ಸಿಂಗ್!]

ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರತಂಡ 'ಚಕ್ರವ್ಯೂಹ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದು, ಪೋಸ್ಟರ್ ನಲ್ಲಿರುವ ಪುನೀತ್ ಅವರ ಲುಕ್ ಜಬರ್ದಸ್ತ್ ಆಗಿ ಮೂಡಿಬಂದಿದೆ.[ಪ್ರಾಣಾಪಾಯದಿಂದ ಬಚಾವ್ ಆದ 'ಚಕ್ರವ್ಯೂಹ' ಕೇಡಿ ಅರುಣ್ ವಿಜಯ್]

ಈಗಾಗಲೇ ಸಾಮಾಜಿಕ ಜಾಲಾತಾಣಗಳಲ್ಲಿ ಪೋಸ್ಟರ್ ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಜೊತೆಗೆ ಈ ಚಿತ್ರಕ್ಕೆ ಕಾಲಿವುಡ್, ಬಾಲಿವುಡ್ ನ ಟಚ್ ಇದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸುತ್ತಿದೆ.

ಕಾಲಿವುಡ್ ನಟ ಅರುಣ್ ವಿಜಯ್ ಹಾಗು ಪರಭಾಷಾ ಖಳನಟ ಅಭಿಮನ್ಯು ಸಿಂಗ್ ಅವರು ಪುನೀತ್ ಅವರ 25ನೇ ಚಿತ್ರದಲ್ಲಿ ಖಳನಟರಾಗಿ ಮಿಂಚಲಿದ್ದು, ಅಪ್ಪು ಅಭಿಮಾನಿಗಳಲ್ಲಿ ಕುತೂಹಲ ಮಿತಿ ಮೀರಿ, 'ಚಕ್ರವ್ಯೂಹ' ಬಿಡುಗಡೆಯಾಗುವುದನ್ನೇ ಕಾತರದಿಂದ ಕಾಯುವಂತೆ ಮಾಡಿದೆ.

English summary
Kannada movie 'Chakravyuha' first look poster released, Kannada Actor Puneeth Rajkumar, Kannada Actress Rachita Ram in the lead role. The movie is directed by M Saravanan.
Please Wait while comments are loading...

Kannada Photos

Go to : More Photos