»   » ಕಲಾಸಾಮ್ರಾಟ್ 'ದಕ್ಷ' ಚಿತ್ರ ಗಿನ್ನಿಸ್ ದಾಖಲೆ ಮಾಡಿದ್ದೇಗೆ?

ಕಲಾಸಾಮ್ರಾಟ್ 'ದಕ್ಷ' ಚಿತ್ರ ಗಿನ್ನಿಸ್ ದಾಖಲೆ ಮಾಡಿದ್ದೇಗೆ?

Written by: ಜೀವನರಸಿಕ
Subscribe to Filmibeat Kannada

ರಾತ್ರಿ 10.45 ನಿಮಿಷಕ್ಕೆ ಕಲಾಸಾಮ್ರಾಟ್ ಎಸ್ ನಾರಾಯಣ್ ಆಕ್ಷನ್ ಅಂದಾಗ ಶೂಟಿಂಗ್ ಶುರುವಾಗಿ ಮಧ್ಯರಾತ್ರಿ 1.05ಕ್ಕೆ ನಾರಾಯಣ್ ರ ಕಟ್ ಅನ್ನೋ ದನಿಯೊಂದಿಗೆ ಒಂದೇ ಶಾಟ್ ನಲ್ಲಿ ಶೂಟ್ ಆದ ಚಿತ್ರ ಇದು.

ದುನಿಯಾ ವಿಜಯ್ ಹಾಗೂ ಎಸ್ ನಾರಾಯಣ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ದಕ್ಷ' ಚಿತ್ರ ಕನ್ನಡದ ಚಿತ್ರವಾಗಿ ಗಿನ್ನಿಸ್ ದಾಖಲೆ ಪುಟ ಸೇರಿ ಕನ್ನಡಿಗರಿಗೆ ಹೆಮ್ಮೆ ಮೂಡಿಸ್ತಿದೆ. ಒಂದೇ ಶಾಟ್ ನಲ್ಲಿ ಸಿನಿಮಾ ಮುಗಿಸಿ ರಿಲೀಸ್ ಮಾಡೋ ದಕ್ಷತೆ ಇರೋದು ಎಸ್ ನಾರಾಯಣ್ ಗೆ ಮಾತ್ರ ಅಂತಿದೆ ಗಾಂಧಿನಗರ. [ಗಿನ್ನಿಸ್ ಜಾಗತಿಕ ದಾಖಲೆಗೆ ಎಸ್ ನಾರಾಯಣ್ ಚಿತ್ರ]


ಇನ್ನು ಎಸ್ ನಾರಾಯಣ್ ಚಿತ್ರದ ಕ್ರೆಡಿಟ್ಟನ್ನು ಟೋಟಲ್ ಟೀಂಗೆ ಹಂಚ್ತಾರೆ. ಎಲ್ಲರ ಪ್ರಯತ್ನದಿಂದ ಶ್ರಮ ಸಾರ್ಥಕವಾಗಿದೆ ಅಂತಾರೆ. ಕಲಾಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿರೋ ಚಿತ್ರ ಇದು.


ದಕ್ಷ ಚಿತ್ರ ಯಾವ ಕಮರ್ಷಿಯಲ್ ಸಿನಿಮಾಗಿಂತಲೂ ಕಡಿಮೆಯಿಲ್ಲದಂತೆ ಶೂಟ್ ಆಗಿದೆ. ಚಿತ್ರಕ್ಕೆ ನಾಲ್ಕು ಕ್ಯಾಮೆರಾಮನ್ ಗಳು ಶ್ರಮಿಸಿದ್ದು ಐದು ಜನರೇಟರ್ ಗಳ ಸಹಾಯದಿಂದ ರಾತ್ರಿ ಚಿತ್ರೀಕರಣವನ್ನ ಮಾಡಿದ್ದ 'ದಕ್ಷ' ಚಿತ್ರ ಮುಂದಿನವಾರ (ಏ.24) ತೆರೆಗೆ ಬರ್ತಿದೆ. ಒಂದೇ ಶಾಟ್ ನಲ್ಲಿ ಸಿನಿಮಾ ತೆಗೆಯೋಕೆ ಸಾಧ್ಯವಾಗಿದ್ದು ಹೇಗೆ .. ಅನ್ನೋ ಇಂಟರೆಷ್ಟಿಂಗ್ ಮಾಹಿತಿ ಇಲ್ಲಿದೆ.


 ನಿಜವಾದ 'ದಕ್ಷ' ವಿಜಯ್

ನಿಜವಾದ 'ದಕ್ಷ' ವಿಜಯ್

ಇಲ್ಲಿ 'ದಕ್ಷ' ಅಂದ್ರೆ ದುನಿಯಾ ವಿಜಯ್. ಆದ್ರೆ ದುನಿಯಾ ವಿಜಯ್ ನಿಜಕ್ಕೂ 'ದಕ್ಷ' ಅಂತಾರೆ ಎಸ್ ನಾರಾಯಣ್. ಇಂತಹಾ ಒಂದು ಪ್ರಯತ್ನಕ್ಕೆ ಕೈ ಹಾಕೋಕು ಗುಂಡಿಗೆ ಬೇಕು. ಆ ಛಾತಿ ತೋರಿಸಿದ ವಿಜಿಗೆ ನಾರಾಯಣ್ ಶಹಬ್ಬಾಸ್ ಅಂದಿದ್ದಾರೆ.


ದೆವ್ವ ಬಂದಂತೆ ನಟಿಸ್ತಾರೆ ವಿಜಿ

ದೆವ್ವ ಬಂದಂತೆ ನಟಿಸ್ತಾರೆ ವಿಜಿ

ಕಮಾಂಡೋ ಪಾತ್ರದಲ್ಲಿ ಕಾಣಿಸಿಕೊಂಡಿರೋ ವಿಜಯ್ ಅಭಿನಯಕ್ಕೆ ಡಾ.ರಾಜ್, ವಿಷ್ಣುರಂತಹಾ ದಿಗ್ಗಜರನ್ನ ನಿರ್ದೇಶನ ಮಾಡಿರೋ ಕಲಾಸಾಮ್ರಾಟ್ ಬೆರಗಾಗಿದ್ದಾರೆ. ವಿಜಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡ್ತಾರೆ. ಅದು ಅಸಾಮಾನ್ಯ ಕಲಾವಿದನ ಲಕ್ಷಣ ಅಂತಾರೆ. ಕೊನೆಯ ಹದಿನೈದು ನಿಮಿಷಗಳಂತೂ ಡೈಲಾಗ್ ನ ಬೆಂಕಿಯುಂಡೆ ಸಿಡಿಸೋ ವಿಜಿ ಸತತವಾಗಿ ಪುಟಗಟ್ಟಲೇ ಡೈಲಾಗ್ ಹೇಳಿದ್ದಾರೆ. ನೆನಪಿರಲಿ ಇದೆಲ್ಲವೂ ಒಂದೇ ಟೇಕ್ ನಲ್ಲಿ.


 ವಿಜಿಯ ಅಭಿನಯಕ್ಕೆ ಪಂಕಜ್ ಗೆ ಭಯ

ವಿಜಿಯ ಅಭಿನಯಕ್ಕೆ ಪಂಕಜ್ ಗೆ ಭಯ

ವಿಜಿಯ ದಕ್ಷ ಪಾತ್ರದ ಜೊತೆ ತಾನೂ ಚಿತ್ರದುದ್ದಕ್ಕೂ ಇದ್ದು ಮುಖ್ಯ ಪಾತ್ರ ಮಾಡಿರೋದು ಎಸ್ ನಾರಾಯಣ್ ಪುತ್ರ ಪಂಕಜ್. ವಿಜಿ ನಟಿಸ್ತಾ ಇದ್ರೆ ಪಕ್ಕದಲ್ಲಿದ್ದ ಪಂಕಜ್ ಗೆ ಗಢ ಗಢ ನಡುಕ ಶುರುವಾಗಿತ್ತಂತೆ. ಕಮಾಂಡೋ ಆಗಿ ವಿಜಿ ಅಬ್ಬರಿಸ್ತಿದ್ದ ರೀತಿ ಹಾಗಿತ್ತಂತೆ.


ರೇಣುಕುಮಾರ್ ಕ್ಯಾಮೆರಾ ಕೈಚಳಕ

ರೇಣುಕುಮಾರ್ ಕ್ಯಾಮೆರಾ ಕೈಚಳಕ

ಒನ್ ಟೇಕ್ ಸಿನಿಮಾದ ನಿಜವಾದ ಕರಾಮತ್ತು ಇರೋದು ಕ್ಯಾಮೆರಾಮೆನ್ ಕೈಯ್ಯಲ್ಲಿ. ಇಲ್ಲಿ ಕ್ಯಾಮೆರಾ ತಂಡದ ಹೆಡ್ ಆಗಿದ್ದು ಎಸ್ ನಾರಾಯಣ್ ರಿಗೆ ಚೆಲುವಿನ ಚಿತ್ತಾರ, ಮತ್ತು ಚೈತ್ರದ ಚಂದ್ರಮ ಸಿನಿಮಾಗಳಲ್ಲಿ ಸಾಥ್ ಕೊಟ್ಟಿದ್ದ ರೇಣುಕುಮಾರ್.


ಮುಖ್ಯಪಾತ್ರಗಳಲ್ಲಿ ಕಲಾವಿದರ ದಂಡು

ಮುಖ್ಯಪಾತ್ರಗಳಲ್ಲಿ ಕಲಾವಿದರ ದಂಡು

30ಕ್ಕೂ ಹೆಚ್ಚು ಕಲಾವಿದರು 40ಕ್ಕೂ ಹೆಚ್ಚು ಫೈಟರ್ ಗಳಿರುವ ಚಿತ್ರ ಇದು. ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ರಂಗಾಯಣ ರಘು, ಬುಲೆಟ್ ಪ್ರಕಾಶ್, ನೇಹಾಪಾಟೀಲ್, ಸುಚೇಂದ್ರಪ್ರಸಾದ್, ಅಭಿಜಿತ್ ಸೇರಿದಂತೆ ಹಲವು ನಟ ನಟಿಯರಿದ್ದಾರೆ.


ತಪ್ಪುಗಳಿದ್ರೆ ಸರ್ಟಿಫಿಕೇಟ್ ಸಿಕ್ಕಲ್ಲ

ತಪ್ಪುಗಳಿದ್ರೆ ಸರ್ಟಿಫಿಕೇಟ್ ಸಿಕ್ಕಲ್ಲ

ಗಿನ್ನಿಸ್ ದಾಖಲೆ ಆಗಬೇಕಾದ್ರೆ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ನೋಡಬಹುದಾದ ಗುಣಮಟ್ಟದ ಚಿತ್ರ ಅನ್ನೋ ಸರ್ಟಿಫಿಕೇಟ್ ನೀಡಲೇಬೇಕು. ಈಗ ಅದು ಸಿಕ್ಕಿರೋದ್ರಿಂದ ಚಿತ್ರ ಗಿನ್ನಿಸ್ ದಾಖಲೆ ಪುಟ ಸೇರೋದು ಪಕ್ಕಾ. ಮೂರು ವಾರದಲ್ಲಿ ಗಿನ್ನಿಸ್ ಪ್ರಮಾಣಪತ್ರ ಕೂಡ ನಿಮ್ಮ ಮುಂದೆ ತರ್ತಾರೆ, ದಕ್ಷ ನಿರ್ದೇಶಕ ಎಸ್ ನಾರಾಯಣ್.


ಒಂದು ಕಟ್ ಕೂಡಾ ಮಾಡದೆ ಹಾಗೇ ಬಳಸಿದ್ದಾರೆ

ಒಂದು ಕಟ್ ಕೂಡಾ ಮಾಡದೆ ಹಾಗೇ ಬಳಸಿದ್ದಾರೆ

ನೀವು ಥಿಯೇಟರ್ ನಲ್ಲಿ ಕುಳಿತು ನೋಡುವ 2 ಗಂಟೆ 22 ನಿಮಿಷದ ಈ ಸಿನಿಮಾದ ಶೂಟಿಂಗ್ ನಡೆದಿರೋದು ಕೂಡ ಅಷ್ಟೇ ಸಮಯ. ಅದನ್ನ ಒಂದು ಕಟ್ ಕೂಡ ಮಾಡದೇ ಹಾಗೆ ಬಳಸಿದ್ದಾರೆ. ಇನ್ನು ಸೆನ್ಸಾರ್ ಮಂಡಳಿ ಕೂಡ ಚಿತ್ರ ನೋಡಿ ಸರ್ಟಿಫಿಕೇಟ್ ನೀಡಿದೆ.


English summary
Kannada movie 'Daksha' gets nominated for Guinness World Records. How it is possible to made a such record for director 'Kala Samrat' S Narayan? What are the highlights of the movie? Duniya Vijay and Pankaj lead movie has a many interesting things.
Please Wait while comments are loading...

Kannada Photos

Go to : More Photos