»   » ರೆಡಿಯಾಗಿದೆ ಹೀರೋಗಳೇ ಇಲ್ಲದ ಫ್ಲಾಪ್ ಸಿನಿಮಾ

ರೆಡಿಯಾಗಿದೆ ಹೀರೋಗಳೇ ಇಲ್ಲದ ಫ್ಲಾಪ್ ಸಿನಿಮಾ

Posted by:
Subscribe to Filmibeat Kannada

ಈ ಸಿನಿಮಾದ ಹೆಸರೇ 'ಫ್ಲಾಪ್'. ಇದೇನಿದು ಈ ರೀತಿ ಟೈಟಲ್ ಇಟ್ಟಿದ್ದಾರೆ ಎಂದು ಕೆಲವರು ತಲೆಕೆರೆದುಕೊಂಡರೆ, ಇನ್ನೂ ಕೆಲವರು ಚಿತ್ರದ ಶೀರ್ಷಿಕೆ ವಿಚಿತ್ರವಾಗಿದೆ ಎಂದು ಹುಬ್ಬೇರಿಸಿದ್ದಾರೆ. ಕರಣ್ ಕುಮಾರ್ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರ ಇದು.

"ಸಿನಿಮಾ ಮಾಡ್ತೀನಿ ಅಂತ ಅಲೆಸಿ ಕೈ ಕೊಟ್ಟ ನಿರ್ಮಾಪಕರಿಗೆ ಹಾಗೂ ಅನ್ಯಭಾಷಾ ಸಿನಿಮಾಗಳ ಹಾವಳಿಯಲ್ಲೂ ಕನ್ನಡ ಸಿನಿಮಾ ಪ್ರೀತಿಸುವ ನಿಮಗೆ" ಎಂದು ಕೃತಜ್ಞತೆಗಳನ್ನೂ ಚಿತ್ರತಂಡ ವಿಭಿನ್ನವಾಗಿ ಸಲ್ಲಿಸಿದೆ.

Flop movie still

ಇದೊಂದು ಹೀರೋ ಇಲ್ಲದ ಸಿನಿಮಾ. ಇದರಲ್ಲಿ ಮೂವರು ವಿಲನ್ ಗಳು ಮಾತ್ರ ಇರುತ್ತಾರೆ. ಚಿತ್ರದ ಏಕೈಕ ನಾಯಕಿ ಸುಕೃತಾ ವಾಗ್ಲೆ. ಈಗಾಗಲೆ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ. ಇನ್ನೇನಿದ್ದರೂ ಥಿಯೇಟರ್ ಗೆ ಬರುವುದಷ್ಟೇ ಬಾಕಿ ಇದೆ. [ಹೊಸ ವಿವಾದಕ್ಕೆ ನಾಂದಿ ಹಾಡಿದ 'ಫ್ಲಾಪ್' ಸಿನಿಮಾ]

ಪುಣ್ಯ ಕೋಟಿ ಸಿನಿಕೆಫೆ ಲಾಂಛನದಲ್ಲಿ ದೇವರಾಜ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ. ಕರಣ್ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಛಾಯಾಗ್ರಹಣ-ಕನಕದರ್ಶನ್, ಸಂಗೀತ-ಎ.ಎನ್. ಶಾಸ್ತ್ರಿ, ನೃತ್ಯ-ಹೈಟ್ ಮಂಜ, ನಾಯಕನಿಲ್ಲದ ಈ ಚಿತ್ರದಲ್ಲಿ ಸುಕೃತವಾಗ್ಳೆ ಇವರ ಜೊತೆಯಲ್ಲಿ ವಿಜೇತ್, ಸಂದೀಪ್, ಅಖಿಲ್, ಹರಿಣಿ, ಮುಂತಾದವರಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Kannada movie 'Flop' is ready for release in December, 2014. It is a totally comedy oriented movie with catchy dialogues and humorous scenes. Karan Kumar is the director who is making his debut.
Please Wait while comments are loading...

Kannada Photos

Go to : More Photos