»   » 'ಮುಂಗಾರು ಮಳೆ'ಯಲ್ಲಿ ನೆನೆದು 'ಗೋಲಿಸೋಡ' ಕುಡಿಯುವ ಅವಕಾಶ ನಿಮಗೆ

'ಮುಂಗಾರು ಮಳೆ'ಯಲ್ಲಿ ನೆನೆದು 'ಗೋಲಿಸೋಡ' ಕುಡಿಯುವ ಅವಕಾಶ ನಿಮಗೆ

Posted by:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಮುಂಗಾರು ಮಳೆ-2' ಚಿತ್ರ ಸೆಪ್ಟೆಂಬರ್ 9 ರಂದು ತೆರೆಗೆ ಬರುತ್ತಿರುವ ಸುದ್ದಿ ನಿಮಗೆ ಗೊತ್ತಿದೆ. 'ಮುಂಗಾರು ಮಳೆ-2' ಚಿತ್ರಕ್ಕೆ ಚಾಲೆಂಜ್ ಹಾಕಲು ಸ್ಟಾರ್ ಗಳಂತೂ ರೆಡಿ ಇಲ್ಲ.

ಜಗ್ಗೇಶ್, ಹರಿಪ್ರಿಯಾ ನಟಿಸಿರುವ 'ನೀರ್ ದೋಸೆ' ಈ ವಾರ (ಸೆಪ್ಟೆಂಬರ್ 2)ಕ್ಕೆ ತೆರೆಗೆ ಬರಲಿದೆ. ಇನ್ನೂ ಪುನೀತ್ ರಾಜ್ ಕುಮಾರ್ ರವರ 'ದೊಡ್ಮನೆ ಹುಡ್ಗ' ಸೆಪ್ಟೆಂಬರ್ 23ಕ್ಕೆ ಫಿಕ್ಸ್ ಆಗಿದೆ.[MM2 ಬುಕ್ಕಿಂಗ್ ಆರಂಭ: ಸಿಡ್ನಿಯಲ್ಲಿ ಬಹುತೇಕ ಸೀಟುಗಳು ಭರ್ತಿ]


Kannada Movie 'Goli Soda' releasing on September 9th

ಹೀಗಿದ್ದರೂ, 'ಮುಂಗಾರು ಮಳೆ-2' ಚಿತ್ರಕ್ಕೆ ಪೈಪೋಟಿ ನೀಡಲು ಹೊಸಬರ 'ಗೋಲಿಸೋಡ' ಸಿನಿಮಾ ಸಜ್ಜಾಗಿದೆ. ಅರ್ಥಾತ್ 'ಗೋಲಿಸೋಡ' ಸಿನಿಮಾ ಸೆಪ್ಟೆಂಬರ್ 9ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.


ತಮಿಳಿನಲ್ಲಿ ಸೂಪರ್ ಹಿಟ್ ಆದ 'ಗೋಲಿಸೋಡ' ಚಿತ್ರದ ಕನ್ನಡ ಅವತರಣಿಕೆಯೇ ಈ 'ಗೋಲಿಸೋಡ'. ರಘು ಜಯ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ 'ಮಾಣಿಕ್ಯ', 'ಪವರ್ ***' ಚಿತ್ರಗಳಿಗೆ ಬಂಡವಾಳ ಹಾಕಿದ್ದ ಕೊಲ್ಲ ಪ್ರವೀಣ್ ನಿರ್ಮಾಪಕ.


Kannada Movie 'Goli Soda' releasing on September 9th

ಅನಾಥ ಹುಡುಗರ ಸುತ್ತ ಹೆಣೆದಿರುವ 'ಗೋಲಿಸೋಡ' ಚಿತ್ರ ಕಥೆಯಲ್ಲಿ ಪ್ರಿಯಾಂಕ, ದಿವ್ಯಾ, ಹೇಮಂತ್ ಮತ್ತು ಚಂದನ್ ಪ್ರಮುಖ ಪಾತ್ರಧಾರಿಗಳು. ನಟಿ ತಾರಾ ಹಾಗೂ ಮಧುಸೂದನ್ ಕೂಡ ತಾರಾಬಳಗದಲ್ಲಿ ಇದ್ದಾರೆ. ರಾಜೇಶ್ ರಾಮನಾಥ್ ಸಂಗೀತ ಸಂಯೋಜಿಸಿರುವ 'ಗೋಲಿಸೋಡ' ಹಾಡುಗಳು ಎಲ್ಲೆಡೆ ಸದ್ದು ಮಾಡ್ತಿವೆ.


'ಮುಂಗಾರು ಮಳೆ-2' ಚಿತ್ರವನ್ನ ನೋಡಲು ಕಾತರರಾಗಿರುವ ನೀವು ಕೊಂಚ ಹೊಸಬರ 'ಗೋಲಿಸೋಡ' ಕಡೆಗೂ ತಿರುಗಿ ನೋಡಿ, ಕೃಪೆ ತೋರಿ....

English summary
Raghu Jaya Directorial Kannada Movie 'Goli Soda' is all set to hit the screens on September 9th.
Please Wait while comments are loading...

Kannada Photos

Go to : More Photos