»   » ಪ್ರೇಕ್ಷಕರ ಇಷ್ಟದಂತೆ 'ಯುಎಸ್ಎ'ನಲ್ಲಿ 'ಇಷ್ಟಕಾಮ್ಯ' ರೀ-ರಿಲೀಸ್

ಪ್ರೇಕ್ಷಕರ ಇಷ್ಟದಂತೆ 'ಯುಎಸ್ಎ'ನಲ್ಲಿ 'ಇಷ್ಟಕಾಮ್ಯ' ರೀ-ರಿಲೀಸ್

Written by:
Subscribe to Filmibeat Kannada

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮ್ಯೂಸಿಕಲ್ ಹಿಟ್ ಸಿನಿಮಾ 'ಇಷ್ಟಕಾಮ್ಯ' ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ. ಪ್ರೇಕ್ಷಕರ ಒತ್ತಾಯದ ಮೆರೆಗೆ 'ಯುಎಸ್ಎ'ನಲ್ಲಿ 'ಇಷ್ಟಕಾಮ್ಯ' ಚಿತ್ರ ರೀ-ರಿಲೀಸ್ ಆಗುತ್ತಿದೆ.[ಅಂದು 'ಅಮೆರಿಕಾ! ಅಮೆರಿಕಾ!!' ಇಂದು 'ಇಷ್ಟಕಾಮ್ಯ']

ಫೆಬ್ರವರಿ 26 ರಂದು (ಭಾನುವಾರ) ಯುಎಸ್ ನ ''ಸ್ಯಾನ್ ಹೋಸೆ ಟೌನ್-3 ಸಿನಿಮಾಸ್ 1433'' ಚಿತ್ರಮಂದಿರದಲ್ಲಿ ಮಧ್ಯಾಹ್ನ 2 ಗಂಟೆಗೆ ಕನ್ನಡದ 'ಇಷ್ಟಕಾಮ್ಯ' ಚಿತ್ರ ಪ್ರದರ್ಶನವಾಗುತ್ತಿದೆ.[ವಿಮರ್ಶೆ: 'ಇಷ್ಟಕಾಮ್ಯ', ಕನ್ನಡ ಮಣ್ಣಿನ ರಮ್ಯ ಪ್ರೇಮಕಾವ್ಯ]

Kannada Movie 'Ishtakamya' Re-Releaseing In USA

ಅಂದ್ಹಾಗೆ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಿದ್ದ 'ಇಷ್ಟಕಾಮ್ಯ' ಕಳೆದ ವರ್ಷ ಮೇ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಅಗ್ನಿಸಾಕ್ಷಿ ಖ್ಯಾತಿಯ ವಿಜಯ ಸೂರ್ಯ, ಮಯೂರಿ, ಕಾವ್ಯ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನವನ್ನ ಒಳಗೊಂಡಿತ್ತು.[ಒನ್ ಇಂಡಿಯಾ ಜೊತೆ 'ಇಷ್ಟಕಾಮ್ಯ' ಯಶಸ್ಸು ಆಚರಿಸಿಕೊಂಡ ಮಯೂರಿ]

ಒಟ್ನಲ್ಲಿ, ಒಂದು ವರ್ಷದ ನಂತರ ಪ್ರೇಕ್ಷಕರ ಇಷ್ಟದಂತೆ 'ಯುಎಸ್ಎ'ನಲ್ಲಿ ಮತ್ತೆ ಸಿನಿಮಾ ಬಿಡುಗಡೆಯಾಗುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಚಾರ.

English summary
Kannada Director Nagathihalli chandrashekar Directed Kannada Movie 'Ishtakamya' Re-Releaseing In USA on Public Demand. 'San Jose Town3 Cinemas' 1433, The Alameda, San Jose, CA 95126 On Feb 26th Sunday 2PM.
Please Wait while comments are loading...

Kannada Photos

Go to : More Photos