»   » 'ಜೈ ಮಾರುತಿ 800' ಫುಲ್ ಕಾಮಿಡಿ ಸಿನಿಮಾ: ಎ ಹರ್ಷ

'ಜೈ ಮಾರುತಿ 800' ಫುಲ್ ಕಾಮಿಡಿ ಸಿನಿಮಾ: ಎ ಹರ್ಷ

Posted by:
Subscribe to Filmibeat Kannada

ಖ್ಯಾತ ನಿರ್ದೇಶಕ ಎ ಹರ್ಷ ಅವರು ತಮ್ಮ ಹೊಸ ಪ್ರಾಜೆಕ್ಟ್ 'ಜೈ ಮಾರುತಿ 800' ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಶೇ 60 ರಷ್ಟು ಭಾಗದ ಚಿತ್ರೀಕರಣ ಮುಗಿಸಿದ್ದಾರೆ.

ಈಗಾಗಲೇ ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಚಿತ್ರತಂಡ ಹಾಗೂ ನಿರ್ದೇಶಕರು, 'ಜೈ ಮಾರುತಿ 800' ಚಿತ್ರದ ಕೆಲವಾರು ರಹಸ್ಯಗಳನ್ನು ನಿರ್ದೇಶಕ ಎ ಹರ್ಷ ಅವರು ಬಿಚ್ಚಿಟ್ಟಿದ್ದಾರೆ.

ಹಿಟ್ ಚಿತ್ರಗಳಾದ 'ಭಜರಂಗಿ', 'ವಜ್ರಕಾಯ', ಸಿನಿಮಾಗಳಿಗೆ ಆಕ್ಷನ್-ಕಟ್ ಹೇಳಿರುವ ನಿರ್ದೇಶಕ ಹರ್ಷ ಅವರು 'ಜೈ ಮಾರುತಿ 800' ನಲ್ಲಿ ಹೆಚ್ಚು ಹಾಸ್ಯಕ್ಕೆ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಹಾಗೆಯೇ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಕಲಾವಿದರ ದಂಡೇ ಇದೆ. ಸುಮಾರು 20ಕ್ಕೂ ಹೆಚ್ಚು ಚಂದನವನದ ಕಲಾವಿದರು ಜೈ ಮಾರುತಿ 800ಗೆ ಬಣ್ಣ ಹಚ್ಚಿದ್ದಾರೆ.[ಹರ್ಷ 'ಮಾರುತಿ 800' ನಲ್ಲಿ ಶರಣ್ ಜೊತೆ ಶ್ರುತಿ ಹರಿಹರನ್]

ಇಬ್ಬರು ಖಳನಾಯಕರು, ಜೊತೆಗೆ ಹಾಸ್ಯ ನಟ ಸಾಧುಕೋಕಿಲ, ನಟ ಅರುಣ್ ಸಾಗರ್, ಕಾಮಿಡಿ ನಟ ಜಹಂಗೀರ್, ಕುರಿ ಪ್ರತಾಪ್ ಸೇರಿದಂತೆ ಹಲವಾರು ಹಾಸ್ಯ ನಟರ ದಂಡು 'ಜೈ ಮಾರುತಿ' ಎಂದಿದೆ. ಜೊತೆಗೆ ಹಾಸ್ಯವೇ ಈ ಸಿನಿಮಾದಲ್ಲಿ ಸಖತ್ ಹೈಲೈಟ್ ಆಗೋದು. ಅಂತ ಹರ್ಷ ನುಡಿದಿದ್ದಾರೆ.

ನಿರ್ಮಾಪಕ ಜಯಣ್ಣ ಕಂಬೈನ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಜೈ ಮಾರುತಿ 800' ಚಿತ್ರದಲ್ಲಿ ಚಂದನವನದ ಕಾಮಿಡಿ ಕಿಂಗ್ ಶರಣ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಲೂಸಿಯಾ ಬೆಡಗಿ ಹರಿಪ್ರಿಯಾ ಹಾಗೂ ನಟಿ ಶುಭಾ ಪೂಂಜಾ ಅವರು ಶರಣ್ ಜೊತೆ ಡ್ಯುಯೆಟ್ ಹಾಡಿದ್ದಾರೆ.[ಹರ್ಷ 'ಮಾರುತಿ 800' ಗೆ ಶುಭಾ ಪೂಂಜಾ ಸೇರ್ಪಡೆ]

ಈಗಾಗಲೇ ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ ನಡೆಸಿರುವ ನಿರ್ದೇಶಕ ಹರ್ಷ ಅವರು ಇನ್ನು ಸುಮಾರು 10 ದಿನಗಳ ಶೂಟಿಂಗ್ ಗಾಗಿ ಬೆಳಗಾಂ ಗೆ ಪ್ರಯಾಣ ಬೆಳೆಸಲಿದ್ದಾರೆ. ಒಟ್ನಲ್ಲಿ ಎಲ್ಲವೂ ಸಾವಕಾಶವಾಗಿ ನಡೆದರೆ 'ಜೈ ಮಾರುತಿ 800' ಚಿತ್ರವನ್ನು 2016ಕ್ಕೆ ತೆರೆಯ ಮೇಲೆ ತರಲು ಪ್ಲಾನ್ ಮಾಡುತ್ತಿದ್ದಾರೆ.

English summary
Director Harsha is a man of few words when it comes to talking about his films. A strict perfectionist, he has been reticent about his next Jai Maruthi 800. Now, having completed sixty percent of the shoot, the director gave a glimpse into the film.
Please Wait while comments are loading...

Kannada Photos

Go to : More Photos