»   » 'ಕಿರಿಕ್ ಪಾರ್ಟಿ'ಗೆ ಸಾಮಾಜಿಕ ಜಾಲತಾಣಗಳಿಂದಲೇ ಕಿರಿಕ್

'ಕಿರಿಕ್ ಪಾರ್ಟಿ'ಗೆ ಸಾಮಾಜಿಕ ಜಾಲತಾಣಗಳಿಂದಲೇ ಕಿರಿಕ್

Posted by:
Subscribe to Filmibeat Kannada

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಕಿರಿಕ್ ಪಾರ್ಟಿ' ಸಿನಿಮಾ 50 ದಿನಗಳನ್ನು ಪೂರೈಸಿ, ಇನ್ನೂ ಸಹ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಲ್ಲದೇ ವಿದೇಶ‍ಗಳಲ್ಲೂ ತೆರೆ ಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ. ಹೀಗಿರುವಾಗ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಹೊಸ ಕಿರಿಕ್ ಒಂದು ಶುರುವಾಗಿದೆ.[ಸ್ಯಾಂಡಲ್ ವುಡ್ ನಲ್ಲಿ 'ಕಿರಿಕ್ ಪಾರ್ಟಿ'ಯ ಹೊಸ ದಾಖಲೆ ಇದು..!]

'ಕಿರಿಕ್ ಪಾರ್ಟಿ' ಚಿತ್ರದ ಹಾಡು ಮತ್ತು ಕೆಲವು ದೃಶ್ಯಗಳನ್ನು ಸಾರ್ವಜನಿಕರು ಆನ್ ಲೈನ್ ನಲ್ಲಿ ಹರಿಯಬಿಡುತ್ತಿದ್ದು, ಸಿನಿಮಾ ನಿರ್ಮಾಣ ಸಂಸ್ಥೆಗೆ ಲಾಸ್ ಆಗುತ್ತಿದೆಯಂತೆ. ಈ ಬಗ್ಗೆ ಪೊಲೀಸ್ ಸ್ಟೇಷನ್ ನಲ್ಲಿಯೂ ದೂರು ದಾಖಲಿಸಲಾಗಿದೆ ಎಂದು ಬಲ್ಲ ಮೂಲಗಳ ಪ್ರಕಾರ ತಿಳಿದುಬಂದಿದೆ.


'ಕಿರಿಕ್ ಪಾರ್ಟಿ'ಗೆ ಸಾಮಾಜಿಕ ತಾಣಗಳಿಂದಲೇ ಕಿರಿಕ್

'ಕಿರಿಕ್ ಪಾರ್ಟಿ'ಗೆ ಸಾಮಾಜಿಕ ತಾಣಗಳಿಂದಲೇ ಕಿರಿಕ್

ಅಂದಹಾಗೆ ಚಿತ್ರ ಬಿಡುಗಡೆಗೂ ಮುನ್ನವೇ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ 'ಕಿರಿಕ್ ಪಾರ್ಟಿ' ಸಿನಿಮಾಗೆ ಈಗ ಸಾಮಾಜಿಕ ಜಾಲತಾಣಗಳಿಂದಲೇ ಸಮಸ್ಯೆ ಎದುರಾಗಿದೆ.


ಕಂಪನಿಗೆ ನಷ್ಟ ಎದುರಾಗಿದೆ..

ಕಂಪನಿಗೆ ನಷ್ಟ ಎದುರಾಗಿದೆ..

ರಕ್ಷಿತ್ ಶೆಟ್ಟಿ ಪರಂವಾಹ್ ಸ್ಟುಡಿಯೋ ಪ್ರೊಡಕ್ಷನ್ ಕಂಪನಿ ಅಡಿಯಲ್ಲಿ 'ಕಿರಿಕ್ ಪಾರ್ಟಿ' ಚಿತ್ರ ನಿರ್ಮಾಣ ಮಾಡಿದ್ದರು. ಈಗ ಅಪರಿಚಿತ ವ್ಯಕ್ತಿಗಳು ಸಿನಿಮಾದ ಹಾಡುಗಳು, ಡೈಲಾಗ್ ಗಳು ಮತ್ತು ವಿಡಿಯೋಗಳನ್ನು ಫೇಸ್ ಬುಕ್, ಯೂಟ್ಯೂಬ್ ತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದು, ಕಂಪನಿ ನಷ್ಟ ಆಗುತ್ತಿರುವ ಬಗ್ಗೆ ದೂರು ನೀಡಿದೆ ಎಂದು ತಿಳಿಯಲಾಗಿದೆ.


ಕಾಪಿ ರೈಟ್ಸ್ ಉಲ್ಲಂಘನೆ ಮಾಡಿರುವುದಾಗಿ ದೂರು..

ಕಾಪಿ ರೈಟ್ಸ್ ಉಲ್ಲಂಘನೆ ಮಾಡಿರುವುದಾಗಿ ದೂರು..

ಚಿತ್ರದ ಹಾಡುಗಳು, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹರಿಯಬಿಟ್ಟಿರುವ ಹಿನ್ನೆಲೆಯಲ್ಲಿ ಪರಂವಾಹ್ ಸ್ಟುಡಿಯೋ 'ಕಾಪಿ ರೈಟ್ಸ್ ಉಲ್ಲಂಘನೆ ಮಾಡಿರುವುದಾಗಿ ದೂರು ನೀಡಿದೆ.


ವಿಡಿಯೋ ಅಪ್ ಲೋಡ್ ಮಾಡಿದವರ ಮಾಹಿತಿಗಾಗಿ ಮನವಿ

ವಿಡಿಯೋ ಅಪ್ ಲೋಡ್ ಮಾಡಿದವರ ಮಾಹಿತಿಗಾಗಿ ಮನವಿ

'ಕಿರಿಕ್ ಪಾರ್ಟಿ' ಚಿತ್ರದ ವಿಡಿಯೋಗಳನ್ನು ಸೈಬರ್ ಕಾನೂನಿಗೆ ವಿರುದ್ಧವಾಗಿ ಅಪ್‌ ಲೋಡ್ ಮಾಡಿದವರ ಮಾಹಿತಿ ನೀಡಲು ಆನ್ ಲೈನ್ ವೇದಿಕೆಗಳಲ್ಲಿ ದೂರು ದಾಖಲಿಸಿದ್ದು, ಕಾಪಿ ರೈಟ್ಸ್ ಉಲ್ಲಂಘನೆ ಮಾಡಿ ವಿಡಿಯೋ ಅಪ್ ಲೋಡ್ ಮಾಡಿರುವುದನ್ನು ತೆಗೆದುಹಾಕಲು ಮನವಿ ಮಾಡಲಾಗಿದೆ.


ಅಮೆರಿಕ ಪ್ರವಾಸದಲ್ಲಿ ರಕ್ಷಿತ್ ಶೆಟ್ಟಿ

ಅಮೆರಿಕ ಪ್ರವಾಸದಲ್ಲಿ ರಕ್ಷಿತ್ ಶೆಟ್ಟಿ

ಸದ್ಯದಲ್ಲಿ ರಕ್ಷಿತ್ ಶೆಟ್ಟಿ ಅಮೆರಿಕ ಪ್ರವಾಸದಲ್ಲಿರುವ ಕಾರಣ, ಪರಂವಾಹ್ ಸ್ಟುಡಿಯೋ ನಿರ್ಮಾಣ ಸಂಸ್ಥೆಯ ಪರವಾಗಿ ಕಿರಣ್ ಕುಮಾರ್ ಅವರು ಕೆ.ಎಸ್ ಲೇಔಟ್ ಪೊಲೀಸ್ ಸ್ಟೇಷನ್ ನಲ್ಲಿ ಕಾಪಿ ರೈಟ್ ಉಲ್ಲಂಘನೆ ಅಡಿಯಲ್ಲಿ ದೂರು ನೀಡಿದ್ದಾರೆ. ದೂರು ನೀಡಿ ಎರಡು ದಿನಗಳಾದರು ಯಾವುದೇ ಮಾಹಿತಿ ದೊರೆತಿಲ್ಲ ಎಂದು ನಿರ್ಮಾಣ ಸಂಸ್ಥೆಯ ಪ್ರತಿನಿಧಿಗಳು ಹೇಳಿದ್ದಾರೆ.


English summary
Paramvah Studios Pvt Ltd, producers and owners of copyright to the Kannada feature film ‘Kirik Party’, has filed a complaint against unidentified people for violation of their copyright.
Please Wait while comments are loading...

Kannada Photos

Go to : More Photos