ನಯನಾ ಕೃಷ್ಣ 'ಚಪ್ಪಲಿ'ಯಲ್ಲಿ ಹೊಡೆದ ಸುದ್ದಿಗೋಷ್ಠಿ ಚಿತ್ರಗಳು

Posted by:

ಕನ್ನಡ ಚಿತ್ರ 'ಕೊಟ್ಲಲ್ಲಪ್ಪೋ ಕೈ' ನಾಯಕಿ ನಟಿ ನಯನಾ ಕೃಷ್ಣ ಅವರು ನಿನ್ನೆ (03 ನವೆಂಬರ್ 2012) ತಮ್ಮ ಕೊಟ್ಲಲ್ಲಪ್ಪೋ ಕೈ ಚಿತ್ರದ ಸುದ್ದಿಗೋಷ್ಠಿ ವೇಳೆ ನಿರ್ದೇಶಕ ರಿಷಿ ಅವರಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ನಂತರ ಈ ಸಂಬಂಧ ನಿರ್ದೇಶಕ ಪಕ್ಕದಲ್ಲಿಯೇ ಇದ್ದ ಉಪ್ಪಾರ ಠಾಣೆ ಪೊಲೀಸ್ ಸ್ಟೇಷನ್ನಿನಲ್ಲಿ ದೂರು ದಾಖಲಿಸಿದ್ದರಿಂದ ನಟಿ ನಯನಾ ಕೃಷ್ಣರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ. ನಿನ್ನೆ ಚಿತ್ರದ ಸುದ್ದಿಗೋಷ್ಠಿಯಲ್ಲಿ ತಮ್ಮಿಂದ ತೆಗೆದುಕೊಂಡ ಹಣವನ್ನು ವಾಪಸ್ ನೀಡಿಲ್ಲ ಎಂಬ ಕಾರಣಕ್ಕೆ ನಟಿ ನಯನಾ ಕೃಷ್ಣ ನಿರ್ದೇಶಕ ರಿಷಿಗೆ ಚಪ್ಪಲಿಯಿಂದ ಹೊಡೆದಿದ್ದರು,

ಪ್ರಾರಂಭವಾದಾಗಿನಿಂದಲೂ ಆಗಾಗ ವಿವಾದದ ಸುಳಿಯಲ್ಲಿಯೇ ಸಿಲುಕಿದ್ದ 'ಕೊಟ್ಲಲ್ಲಪ್ಪೋ ಕೈ' ಚಿತ್ರಕ್ಕೆ ಬರೋಬ್ಬರಿ 10 ರಿಂದ 12 ಜನ ನಿರ್ಮಾಪಕರು ಎಂಬುದೇ ಸಾಕಷ್ಟು ಅಚ್ಚರಿಯ ಸಂಗತಿಯಾಗಿದೆ. ಚಿತ್ರದ ನಾಯಕಿ ನಯನಾ ಕೃಷ್ಣ ಅವರು ಚಿತ್ರದ ನಿರ್ದೇಶಕ ರಿಷಿ ಅವರಿಗೆ ಚಿತ್ರಕ್ಕಾಗಿ ರು. 8 ಲಕ್ಷ ನೀಡಿದ್ದರಂತೆ. ಆಗ, ಹಣ ವಾಪಸ್ ನೀಡಬೇಕು ಅಥವಾ ಅದಕ್ಕೆ ಪ್ರತಿಯಾಗಿ ಕೆಲವು ಏರಿಯಾದ ವಿತರಣೆ ಹಕ್ಕನ್ನು ನೀಡಬೇಕೆಂದು ಷರತ್ತು ವಿಧಿಸಿದ್ದರು ಎನ್ನಲಾಗಿದೆ.

ಆದರೆ ಚಿತ್ರೀಕರಣ ಮುಗಿದು ಸೆನ್ಸಾರ್ ಆಗಿ, ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದರೂ ತಮಗೆ ಬರಬೇಕಿದ್ದ ಹಣ ವಾಪಸ್ ಬಂದಿಲ್ಲ, ಏರಿಯಾ ಹಕ್ಕನ್ನೂ ನೀಡುತ್ತಿಲ್ಲ. ಕೇಳಿದರೆ ಹೆಣ್ಣು ಮಗಳು ಎಂಬ ಅನುಕಂಪವೂ ಇಲ್ಲದೇ ಬಾಯಿಗೆ ಬಂದಂತೆ ಅಸಭ್ಯವಾಗಿ ಮಾತನಾಡುತ್ತಾರೆ ನಿರ್ದೇಶಕ ರಷಿ ಎಂಬುದು ನಿನ್ನೆ ಸುದ್ದಿಗೋಷ್ಠಿಯಲ್ಲಿ ನಟಿ ನಯನಾ ಕೃಷ್ಣ ಮಾಡಿದ ಆರೋಪ. ಅಲ್ಲಿಯೇ ನಡೆದ ಸಾಕಷ್ಟು ವಾದವಿವಾದಗಳ ನಂತರ ನಿನ್ನೆ ಈ 'ಚಪ್ಪಲಿ ಸೇವೆ' ರಾದ್ಧಾಂತ ನಡೆದಿತ್ತು. ಈ ಸುದ್ದಿಗೋಷ್ಠಿಯ ಚಿತ್ರಗಳನ್ನು ನೋಡಿ...

ರಿಷಿಗೆ ಚಪ್ಪಲಿ ಏಟು ನೀಡುವ ಮೊದಲು ನಯನಾ ಕೃಷ್ಣ

ನಿನ್ನೆ ನಡೆದ 'ಕೊಟ್ಲಲ್ಲಪ್ಪೋ ಕೈ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸಹನಟ ಯತಿರಾಜ್ ಜೊತೆ ನಟಿ ನಯನಾ ಕೃಷ್ಣ ಹೀಗೆ ಕುಳಿತಿದ್ದರು. ತಮ್ಮ ಮಾತನಾಡುವ ಸರದಿ ಬಂದ ತಕ್ಷಣ ನಿರ್ದೇಶಕ ರಿಷಿ ಮೇಲೆ ಆರೋಪಗಳ ಸುರಿಮಳೆ ಸುರಿಸಿದ ನಯನಾ ಕೃಷ್ಣ ಕೈಗೆ ತಮ್ಮ ಚಪ್ಪಲಿ ತೆಗೆದುಕೊಂಡರು.

ನಿರ್ದೇಶಕ ರಿಷಿಯೊಂದಿಗೆ ಸುದ್ದಿಗೋಷ್ಠಿಯಲ್ಲಿ ನಾಯಕ ಧನುಷ್

ನಿನ್ನೆ ನಡೆದ 'ಕೊಟ್ಲಲ್ಲಪ್ಪೋ ಕೈ' ಚಿತ್ರದ ಸುದ್ದಿಗೋಷ್ಠಿ ವೇಳೆ ವಿವಾದಕ್ಕೆ ಮೊದಲು ನಿರ್ದೇಶಕ ರಿಷಿಯೊಂದಿಗೆ ಚಿತ್ರದ ನಾಯಕ ನಟ ಧನುಷ್ ಹೀಗೆ ಕುಳಿತಿದ್ದರು. ನಂತರ ನಟಿ ನಯನಾ ಕೃಷ್ಣ ಮಾತನಾಡಿ ಬಳಿಕ ಚಪ್ಪಲಿಯಲ್ಲಿ ನಿರ್ದೇಶಕ ರಿಷಿಗೆ ಹೊಡೆದರು.

ಸುದ್ದಿಗೋಷ್ಠಿಯಲ್ಲಿ ಅಳುತ್ತಾ ಮಾತನಾಡಿದ ನಯನಾ ಕೃಷ್ಣ

ತಮ್ಮ ಚಿತ್ರ ಕೊಟ್ಲಲ್ಲಪ್ಪೋ ಕೈ ಸುದ್ದಿಗೋಷ್ಠಿಯಲ್ಲಿ ಅಳುತ್ತಾ ಮಾತನಾಡಿದ ನಯನಾ ಕೃಷ್ಣ, ತಮಗೆ ನಿರ್ದೇಶಕ ರಿಷಿ ಮೊಬೈಲ್ ಮೂಲಕ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದನ್ನು ಮಾಧ್ಯಮದವರಿಗೆ ರೆಕಾರ್ಡ್ ಮಾಡಿದ್ದ ಸಂಭಾಷಣೆ ತೋರಿಸಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಾಯಕರಾದ ಧನುಷ್ ಹಾಗೂ ಯತಿರಾಜ್

ಸಂತೋಷ ಹಂಚಿಕೊಳ್ಳಲು ಸುದ್ದಿಗೋಷ್ಠಿಗೆ ಆಗಮಿಸಿದ್ದ ಚಿತ್ರದ ನಾಯಕ ನಟರಾದ ಧನುಷ್ ಹಾಗೂ ಯತಿರಾಜ್ ಆಕಸ್ಮಿಕವಾಗಿ ನಡೆದ ಘಟನೆ ವೇಳೆ ಚರ್ಚೆಯಲ್ಲಿ ತೊಡಗಿಕೊಂಡರು. ಸುದ್ದಿಗೋಷ್ಠಿಯಲ್ಲಿ ನಾಯಕರಾದ ಧನುಷ್ ಹಾಗೂ ಯತಿರಾಜ್ ತಾವಿ ಹೀಗಾಗಿದ್ದರಿಂದ ಅವಮಾನ ಅನುಭವಿಸಿದ್ದೇವೆ ಎಂದರು.

ಪಾರಾಗುವ ಯತ್ನದಲ್ಲಿ ಚಪ್ಪಲಿ ಏಟು ತಿಂದ ನಿರ್ದೇಶಕ ರಿಷಿ

ಸುದ್ದಿಗೋಷ್ಠಿ ನಡೆಯುತ್ತಿದ್ದಾಗ ಚಿತ್ರದ ನಾಯಕಿ ನಟಿ ನಯನಾ ಕೃಷ್ಣರಿಂದ ಚಪ್ಪಲಿ ಏಟು ತಿಂದ ನಿರ್ದೇಶಕ ರಿಷಿ, ಅಲ್ಲಿಂದ ಪಾರಾಗಿ ಪಕ್ಕದಲ್ಲಿದ್ದ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ತೆರಳುವ ಯತ್ನದಲ್ಲಿರುವುದು. ಅಲ್ಲೂ ಬಿಡದೆ ಅವರನ್ನು ಥಳಿಸಲಾಯತ್ತು.

ದೂರು ದಾಖಲಿಸಲು ತೆರೆಳುವಾಗ ಗುಂಪಿನ ಮಧ್ಯೆ ರಿಷಿ

ನಿರ್ದೇಶಕ ರಿಷಿ ಅನಿರೀಕ್ಷಿತ ಆಘಾತವನ್ನು ಎದುರಿಸುವ ನಿಟ್ಟಿನಲ್ಲಿ ಪೊಲೀಸ್ ಸ್ಟೇಷನ್ ಕಡೆ ಪ್ರಯಾಣ ಬೆಳೆಸುತ್ತಿರುವುದು. ಜೊತೆಯಲ್ಲಿ ನಿರ್ದೇಶಕರ ಕೆಲವು ಸ್ನೇಹಿತರಿದ್ದರು.

ನಯನಾ ಕೃಷ್ಣರಿಂದ ವಂಚನೆ ಆರೋಪ

ನಟಿ ನಯನಾ ಕೃಷ್ಣ ತಮಗಾದ ಅನ್ಯಾಯವನ್ನು ಸುದ್ದಿಗೋಷ್ಠಿಯಲ್ಲಿ ಸವಿಸ್ತಾರವಾಗಿ ವಿವರಿಸಿದ ಕ್ಷಣ...

See next photo feature article

ಚಪ್ಪಲಿ ಏಟು ಬೀಳುವ ಮೊದಲು ಸುದ್ದಿಗೋಷ್ಠಯಲ್ಲಿ ರಿಷಿ

ನಿರ್ದೇಶಕ ರಿಷಿ ತಮಗೆ ಚಪ್ಪಲಿ ಏಟು ಬೀಳುವ ಮೊದಲು ನಿರ್ದೇಶಕರಾಗಿ ಚಿತ್ರದ ಬಗ್ಗೆ ಮಾತನಾಡಲು ಪತ್ರಿಕಾಗೋಷ್ಠಿಯಲ್ಲಿ ಈ ರೀತಿ ಕುಳಿತಿದ್ದರು. ಚಿತ್ರ ಪ್ರಾರಂಭವಾದ ಸ್ವಲ್ಪ ದಿನಗಳಲಲ್ಲೇ ನಾಯಕಿ ನಟಿ ನಯನಾ ಕೃಷ್ಣ ಹಾಗೂ ರಿಷಿ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದು ಅವರಿಬ್ಬರ ಸಂಬಂಧ ಹಳಸಿತ್ತು.

Read more about: ನಯನ ಕೃಷ್ಣ, ಸುದ್ದಿಗೋಷ್ಠಿ, ವಿವಾದ, ಫೋಟೋ ಫೀಚರ್, nayana krishna, press meet, controversy, photo feature

English summary
Everybody is now aware of Kannada Movie Kottlallappo Kai controversy. Here are some 'Press Meet' Controversy Stills to watch. Actress Nayana Krishna has beaten the movie Director Rishi by her footwear.
Please Wait while comments are loading...

Kannada Photos

Go to : More Photos