»   » ಅಂತೂ ಇಂತೂ 'ಕೃಷ್ಣ-ರುಕ್ಕು', ಸೈಲೆಂಟ್ ಆಗಿ ಡಬ್ಬಿಂಗ್ ಮುಗಿಸಿದ್ರು!

ಅಂತೂ ಇಂತೂ 'ಕೃಷ್ಣ-ರುಕ್ಕು', ಸೈಲೆಂಟ್ ಆಗಿ ಡಬ್ಬಿಂಗ್ ಮುಗಿಸಿದ್ರು!

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ 'ಕೃಷ್ಣ' ಅಂತಾನೇ ಖ್ಯಾತಿ ಗಳಿಸಿರುವ ನಟ ಅಜೇಯ್ ರಾವ್ ಅವರ ಕೃಷ್ಣ-ರುಕ್ಕು ಚಿತ್ರದ ಡಬ್ಬಿಂಗ್ ಮುಗಿದಿದ್ದು, ನಟ ಅಜೇಯ್ ರಾವ್ ಹಾಗೂ ನಟಿ ಅಮೂಲ್ಯಾ ಅವರು ಡಬ್ಬಿಂಗ್ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ಇದೀಗ ಡಬ್ಬಿಂಗ್ ಮುಗಿಸಿರುವ ಚಿತ್ರತಂಡ ರೀ-ರೇಕಾರ್ಡಿಂಗ್ ಮಾಡಲು ತಯಾರಿ ನಡೆಸುತ್ತಿದೆ. ಸಿನಿಮಾದಲ್ಲಿ ಸದಾ ಕಿತ್ತಾಡುವ 'ಕೃಷ್ಣ ರುಕ್ಕು', ಡಬ್ಬಿಂಗ್ ಮಾತ್ರ ಸೈಲೆಂಟ್ ಆಗಿ ಮುಗಿಸಿಕೊಟ್ಟಿದ್ದಾರೆ.[ಬ್ಯಾಂಕಾಕ್ ನಲ್ಲಿ ಅಜೇಯ್ ರಾವ್ ಮತ್ತು ಅಮೂಲ್ಯಾ]

'ದಿಲ್ ವಾಲಾ' ಖ್ಯಾತಿಯ ನಿರ್ದೇಶಕ ಅನಿಲ್ ಆಕ್ಷನ್-ಕಟ್ ಹೇಳಿರುವ 'ಕೃಷ್ಣ-ರುಕ್ಕು' ಚಿತ್ರದಲ್ಲಿ ಅಜೇಯ್ ರಾವ್ ಅವರೊಂದಿಗೆ ನಟಿ ಅಮೂಲ್ಯಾ ಅವರು ಸಖತ್ ಆಗಿ ರೋಮ್ಯಾನ್ಸ್ ಮಾಡಿದ್ದಾರೆ.

ಈಗಾಗಲೇ ಚಿತ್ರದ ಹಾಡುಗಳ ಶೂಟಿಂಗ್ ಕೂಡ ವಿದೇಶದಲ್ಲಿ ಮುಗಿಸಿ ವಾಪಸಾಗಿರುವ ಚಿತ್ರತಂಡ, ಸದ್ಯದಲ್ಲೇ 'ಕೃಷ್ಣ-ರುಕ್ಕು' ಅವರನ್ನು ತೆರೆಯ ಮೇಲೆ ತರಲು ಯೋಚನೆ ಮಾಡಿದ್ದಾರೆ.['ಕೃಷ್ಣ' ಅಜೇಯ್ ರಾವ್ ಗೆ ಬೇಬಿ ಡಾಲ್ ಅಮೂಲ್ಯ 'ರುಕ್ಕು']

ನಿರ್ಮಾಪಕ ಉದಯ್ ಕೆ ಮೆಹ್ತಾ ಅವರು ಬಂಡವಾಳ ಹೂಡಿರುವ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನಟ ಅಜೇಯ್ ರಾವ್, ಬೇಬಿ ಡಾಲ್ ಅಮೂಲ್ಯಾ ಅವರೊಂದಿಗೆ ಗಿರಿಜಾ ಲೋಕೇಶ್, ಶೋಭರಾಜ್ ಮುಂತಾದವರು ಮುಖ್ಯ ಪಾತ್ರ ವಹಿಸುತ್ತಿದ್ದಾರೆ.

ಹಿಟ್ ಸಿನಿಮಾ 'ಕೃಷ್ಣಲೀಲಾ' 100 ದಿನದ ಸಂಭ್ರಮಾಚರಣೆ ಮಾಡಿರುವ ಖುಷಿಯಲ್ಲಿರುವ ನಟ ಅಜೇಯ್ ರಾವ್ ಅವರಿಗೆ 'ಕೃಷ್ಣ-ರುಕ್ಕು' ಮತ್ತೊಂದು ಬ್ರೇಕ್ ನೀಡುತ್ತಾ ಅಂತ ಕಾದು ನೋಡಬೇಕಿದೆ.

English summary
Kannada movie 'Krishna Rukku' starring Ajay Rao and Amulya has completed the dubbing and is now ready for Re-recording. The movie is directed by 'Dilwala' fame Anil.
Please Wait while comments are loading...

Kannada Photos

Go to : More Photos