twitter
    For Quick Alerts
    ALLOW NOTIFICATIONS  
    For Daily Alerts

    ರಂಗಿತರಂಗ ಚಿತ್ರಮಂದಿರಕ್ಕೆ ಲೊಡ್ಡೆ ಎಂಟ್ರಿ, ಏನಿದು ಕಿರಿಕ್?

    By Suneetha
    |

    ಇತ್ತೀಚೆಗೆ ಸ್ಯಾಂಡಲ್ ವುಡ್ ಹಾಸ್ಯ ನಟ ಕೋಮಲ್ ಕುಮಾರ್ ಅವರ ಗ್ರಹಚಾರ ಯಾಕೋ ನೆಟ್ಟಗಿಲ್ಲಾ ಅಂತ ಕಾಣಿಸುತ್ತಿದೆ. ಯಾಕಂತೀರಾ? ಕೋಮಲ್ ಕುಮಾರ್ ಅಭಿನಯದ 'ಲೊಡ್ಡೆ' ಚಿತ್ರಕ್ಕೆ ಒಂದಲ್ಲ ಒಂದು ಸಮಸ್ಯೆಗಳು ಕಾಡ್ತಾನೇ ಇದೆ.

    ಎಸ್. ವಿ. ಸುರೇಶ್ ಆಕ್ಷನ್-ಕಟ್ ಹೇಳಿರುವ ಕೋಮಲ್ ಹಾಗೂ ಆಕಾಂಕ್ಷಪುರಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಲೊಡ್ಡೆ' ಚಿತ್ರ ಜುಲೈ 31 ರಂದು ಕರ್ನಾಟಕದಾದ್ಯಂತ ತೆರೆ ಕಾಣುತ್ತಿದ್ದು, ಸದ್ಯಕ್ಕೆ 'ಲೊಡ್ಡೆ' ಚಿತ್ರಕ್ಕೆ ಥಿಯೇಟರ್ ಸಮಸ್ಯೆ ಶುರುವಾಗಿದೆ. [ಜುಲೈ 31ಕ್ಕೆ ಕೋಮಲ್ 'ಲೊಡ್ಡೆ' ಭರ್ಜರಿ ಓಪನಿಂಗ್]

    Kannada movie 'Lodde' is in Trouble Now!

    ಜುಲೈ 31 ರಂದು ತ್ರಿಭುವನ್ ಚಿತ್ರಮಂದಿರದಲ್ಲಿ 'ಲೊಡ್ಡೆ' ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿತ್ತು ಚಿತ್ರತಂಡ. ಆದರೆ ಇದೀಗ ತ್ರಿಭುವನ್ ಚಿತ್ರಮಂದಿರದಲ್ಲಿ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ 'ರಂಗಿತರಂಗ' ಪ್ರದರ್ಶನವಾಗುತ್ತಿದೆ.[ವಿಷ್ಣು ಫ್ಯಾನ್ 'ಲೊಡ್ಡೆ' ಕೋಮಲ್ ಗೆ ಜಗ್ಗೇಶ್ ವಿಶ್]

    ಈ ನಡುವೆ 'ರಂಗಿತರಂಗ' ಕಪಾಲಿ ಥಿಯೇಟರ್ ನಿಂದ ತ್ರಿಭುವನ್ ಚಿತ್ರಮಂದಿರಕ್ಕೆ ಶಿಫ್ಟ್ ಆಗಿ ಕೇವಲ ಒಂದೇ ವಾರಗಳಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ 'ರಂಗಿತರಂಗ' ಚಿತ್ರವನ್ನು ತ್ರಿಭುವನ್ ಚಿತ್ರಮಂದಿರದಿಂದ ತೆಗೆಯುವುದು ಅಸಾಧ್ಯವಾಗಿದೆ.

    Kannada movie 'Lodde' is in Trouble Now!

    ಇದೀಗ 'ಲೊಡ್ಡೆ' ಚಿತ್ರತಂಡಕ್ಕೆ ಪ್ರಾಬ್ಲಂ ಏನಪ್ಪಾ ಅಂದ್ರೆ ತ್ರಿಭುವನ್ ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ 'ರಂಗಿತರಂಗ' ಚಿತ್ರವನ್ನು ತೆಗೆದು 'ಲೊಡ್ಡೆ' ರಿಲೀಸ್ ಮಾಡುವುದೋ ಅಥವಾ ಹಾಗೆ ಬಿಡುವುದೋ ಅನ್ನೋ ಕನ್ ಫ್ಯೂಶನ್ ಮಾಡಿಕೊಂಡಿದೆ ಚಿತ್ರತಂಡ. [ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದ ಕೋಮಲ್ 'ಲೊಡ್ಡೆ']

    ಒಟ್ನಲ್ಲಿ ಅತ್ತ ನುಂಗಲಾರದೇ ಇತ್ತ ಉಗುಳಲಾರದ ಪರಿಸ್ಥಿತಿಯಲ್ಲಿ ನಮ್ಮ ಕೋಮಲ್ 'ಲೊಡ್ಡೆ' ಇದೆ. ಇದೀಗ ಈ ಮೊದಲೇ ಜಾಹೀರಾತು ನೀಡಿದಂತೆ, ಹೇಳಿದ ಡೇಟ್ ಗೆ 'ಲೊಡ್ಡೆ' ಸೇಮ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತೋ ಇಲ್ವೋ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

    English summary
    Kannada movie 'Lodde' facing theater problem. The film was supposed to be release in Tribhvan and other theaters from 31st of July. 'Lodde' feature Kannada actor Komal Kumar, Actress Akanksha Puri in the lead role. The movie is directed by S.V. Suresh.
    Tuesday, July 28, 2015, 16:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X