»   » 'ಪಾತರಗಿತ್ತಿ' ಡೈಲಾಗ್ ಗಳು ಪಕ್ಕಾ ಸೂಪರ್ ಕಣೇ ಅಕ್ಕಾ

'ಪಾತರಗಿತ್ತಿ' ಡೈಲಾಗ್ ಗಳು ಪಕ್ಕಾ ಸೂಪರ್ ಕಣೇ ಅಕ್ಕಾ

Written by: ಜೀವನರಸಿಕ
Subscribe to Filmibeat Kannada

ಮಸ್ತ್ ಮಸ್ತ್ ಡೈಲಾಗ್ ಗಳು ಅಂದ್ರೆ ನೀವಂದ್ಕೊಳ್ಳೋದು, 'ಗಾಲಿ' ಅನ್ನೋ ಸಿನಿಮಾದ ಪೋಲಿ ಡೈಲಾಗ್ ಗಳೋ ಅಥವಾ ಒಂಥರಾ ಮಜವಾಗಿದೆ ಅನ್ನಿಸ್ತಿದ್ದ ಕಚಗುಳಿ ಇಡೋ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಡೈಲಾಗ್ ಗಳೋ ಅಲ್ಲ.

ಒಳ್ಳೆಯ ಸಿನಿಮಾನೇ ಕಲರ್ ಫುಲ್ಲಾಗೇ ಮಾಡಿದ್ದಾರೆ. ಕಥೇನೂ ಚೆನ್ನಾಗೇ ಇದೆ. ಆದ್ರೆ ಏನೋ ಒಂದು ವೀಕಾಗಿದೆ ಅಂಥ ತಲೆ ಕೆರೆದುಕೊಳ್ಳೋ ಕನ್ನಡ ಪ್ರೇಕ್ಷಕನಿಗೆ ನೆನಪಾಗೋ ಚಿತ್ರದಲ್ಲಿ ಒಳ್ಳೆಯ ಡೈಲಾಗ್ ಗಳಿಲ್ಲ ಅನ್ನೋದು. [ಅತ್ಯಾಚಾರಿಗಳ ಅತ್ಯಾಚಾರ ಮಾಡುತ್ತೆ 'ಪಾತರಗಿತ್ತಿ']

Paatharagithi still

ಆದ್ರೆ ಇಲ್ಲೊಂದು ಸಿನಿಮಾದ ಡೈಲಾಗ್ ಗಳೇ ಚಿತ್ರದ ಬಗೆಗಿನ ನಿರೀಕ್ಷೆಯನ್ನ ದುಪ್ಪಟ್ಟು ಮಾಡ್ತಿವೆ. ಇತ್ತೀಚೆಗೆ ಮದುವೆಯಾದ ಶ್ರೀಕಿ ಅಭಿನಯದ ಹೊಸ ಚಿತ್ರ 'ಪಾತರಗಿತ್ತಿ' ಸಿನಿಮಾದ ಫಸ್ಟ್ ಲುಕ್ ನ ಒಂದ್ಸಾರಿ ನೋಡಿದ್ರೆ ನೀವೂ ಈ ಮಾತನ್ನ ಒಪ್ಪಿಕೊಳ್ತೀರ. ಯಾಕಂದ್ರೆ ನಿರ್ದೇಶಕ ಈಶ್ವರ್ ಕೆ ಬರೆದ ಸಂಭಾಷಣೆಯಲ್ಲಿ ಅಂತಹಾ ತಾಕತ್ತಿದೆ.

ಚಿತ್ರದಲ್ಲಿ ತಬಲಾ ನಾಣಿ ಮುಖ್ಯಪಾತ್ರ ಮಾಡಿದ್ದು, ಮಿತ್ರ ಸೇರಿದಂತೆ ಹಲವು ಕಾಮಿಡಿಯನ್ ಗಳಿಂದಲೂ ಮೀನಿಂಗ್ ಫುಲ್ ಡೈಲಾಗ್ ಹೇಳಿಸಿದ್ದಾರೆ ನಿರ್ದೇಶಕ ಮತ್ತು ಸಂಭಾಷಣೆಕಾರ ಈಶ್ವರ್.ಕೆ. ಸಾಧ್ಯವಾದ್ರೆ ನೀವೂ ಒಂದ್ಸಾರಿ ಟ್ರೇಲರ್ ನೋಡಿ ಹೊಸ ವರ್ಷಕ್ಕೆ ಸಿನಿಮಾ ನೋಡೋಕೆ ರೆಡಿಯಾಗಿ.


ಚಿತ್ರದಲ್ಲಿನ ಒಂದೆರಡು ಡೈಲಾಗ್ ಗಳು ಹೀಗಿವೆ. "ಲೋ ಮಗಾ ಕತ್ತೆ ಹಿಂದೆ ಬೇಕಾದರೂ ಹೋಗು, ಒಂದ್ಸಾರಿ ಒದ್ದು ಮತ್ತೆ ನನ್ನ ಹಿಂದೆ ಬರಬೇಡ ಅಂತಾ ಸೂಚನೆ ಕೊಡುತ್ತೆ. ಆದರೆ ಹುಡುಗೀರು ಹಂಗಲ್ಲ ಕಣೋ", "ಪ್ರೀತಿಯ ಹಿಂದೆ ನೀವು ಸುತ್ತೀ ಸುತ್ತೀ ಕಡೆಗೆ ಬೀಳೋದು ಕಾಮ ಅನ್ನೋ ಹಳ್ಳಕ್ಕೇ ತಾನೆ..."

"ಈ ಹುಡ್ಗೀರ್ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು ಅಂದ್ರೆ ಅದ್ಯಾವ ಯೂನಿವರ್ಸಿಟಿಯಲ್ಲಿ ಓದಬೇಕೋ ನನಗಂತೂ ಗೊತ್ತಿಲ್ಲ". "ಗಂಡು ಜೀವ ಉರಿಯೋ ದೀಪಕ್ಕೆ ಎಣ್ಣೆ ಇದ್ದಂಗೆ, ಹೆಣ್ಣು ದೀಪ ಇದ್ದಂಗೆ, ಕೊನೆಗೆ ಖಾಲಿ ಆಗೋದು ಎಣ್ಣೆ ಸುಟ್ಟೋಗೋದು ಬತ್ತಿ ಹುಷಾರು!"

English summary
Kannada movie Paatharagithi first look trailer released. The movie had wonderful dialouges, which has Srikanth and Praju Pooviah in the lead roles. The movie is directed by K Eshwar. The film also has Shanthamma, Lucky Shankar, Tabla Nani, Bullet Prakash and Lyendra in significant roles.
Please Wait while comments are loading...

Kannada Photos

Go to : More Photos