»   » ಯಾವುದೇ ಕಟ್ಸ್ ಇಲ್ಲದೆ ಸೆನ್ಸಾರ್ ಪಾಸ್ ಆದ ಭಟ್ರ 'ಪರಪಂಚ'

ಯಾವುದೇ ಕಟ್ಸ್ ಇಲ್ಲದೆ ಸೆನ್ಸಾರ್ ಪಾಸ್ ಆದ ಭಟ್ರ 'ಪರಪಂಚ'

Posted by:
Subscribe to Filmibeat Kannada

ಕ್ರಿಷ್ ಜೋಶಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ನಿರ್ದೇಶಕ ಯೋಗರಾಜ ಭಟ್ರ ಬ್ಯಾನರ್ ನ 'ಪರಪಂಚ' ಚಿತ್ರ ಸೆನ್ಸಾರ್ ಮಂಡಳಿಯಿಂಧ ಕ್ಲೀನ್ ಚಿಟ್ ಪಡೆದುಕೊಂಡಿದೆ.

ಸ್ಯಾಂಡಲ್ ವುಡ್ ನ ದೂದ್ ಪೇಡಾ ದಿಗಂತ್, ತುಪ್ಪದ ಬೆಡಗಿ ರಾಗಿಣಿ ದ್ವೀವೇದಿ, ಹಿರಿಯ ನಟ ಅನಂತ್ ನಾಗ್, ನಟ ಲೂಸ್ ಮಾದ ಯೋಗೇಶ್, ಭಾವನಾ, ರಂಗಾಯಣ ರಘು, ನಿರ್ದೇಶಕ ಯೋಗರಾಜ್ ಭಟ್ ಮತ್ತು ಅಶೋಕ್ ಅವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ 'ಪರಪಂಚ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪ್ರಮಾಣ ಪತ್ರ ನೀಡುವ ಮೂಲಕ ಗೋ ಅಹೆಡ್ ಎಂದಿದೆ.[ಭಟ್ಟರ ಹೊಸ 'ಪರಪಂಚ'ದಲ್ಲಿ ದೂದ್ ಪೇಡ ದಿಗಂತ್]

ಯಾವುದೇ ಸಿಂಗಲ್ ಕಟ್ ಗಳಿಲ್ಲದೆ ಸೆನ್ಸಾರ್ ಪಾಸ್ ಆಗಿದ್ದು, 'ಪರಪಂಚ' ಚಿತ್ರದ ವಿಶೇಷ. ಸುಮಾರು 2 ಘಂಟೆ 18 ನಿಮಿಷಗಳು ಚಿತ್ರ ಓಡಲಿದ್ದು, ಈಗಾಗಲೇ ಚಿತ್ರದ ಆಡಿಯೋ ಸೂಪರ್ ಹಿಟ್ ಆಗಿದೆ. ಜೊತೆಗೆ ಮಾರ್ಕೆಟ್ ನಲ್ಲಿ ಉತ್ತಮ ರೆಸ್ಪಾನ್ಸ್ ಕೂಡ ಗಿಟ್ಟಿಸಿಕೊಳ್ಳುತ್ತಿದೆ.

ಈಗಾಗಲೇ 'ಹೆಲ್ತು ಇಂಪಾರ್ಟೆಂಟು' ಹಾಗೂ 'ಬಾಯಿ ಬಸಳೆ ಸೊಪ್ಪು' ಎಂಬ ಎರಡು ಹಾಡುಗಳು ಸಖತ್ ಹಿಟ್ ಆಗುವ ಜೊತೆಗೆ ಎಲ್ಲೆಡೆ ಟ್ರೆಂಡಿಂಗ್ ಆಗುತ್ತಿದೆ.[ಅಲೌಕಿಕ ತಲೆಗೇರಿದಾಗ ನೀರಮಲು ಹಾಲಮಲು 'ಪರಪಂಚ' ಅಮಲು]

ಮೂಲಗಳ ಪ್ರಕಾರ 'ಪರಪಂಚ' ಬಿಡುಗಡೆ ದಿನಾಂಕ ಇನ್ನು ಪಕ್ಕಾ ಆಗಿಲ್ಲ. ಆದರೂ ನವೆಂಬರ್ ತಿಂಗಳಿನಲ್ಲಿ ಯಾವುದೇ ಸಂದರ್ಭದಲ್ಲೂ ಬೇಕಾದರೂ ಸಿನಿಮಾ ತೆರೆ ಮೇಲೆ ಅಪ್ಪಳಿಸಬಹುದು ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಫನ್ನು ಅನ್ ಲಿಮಿಟೆಡ್ ಇರುವ 'ಪರಪಂಚ'ಕ್ಕೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಒಟ್ಟಾರೆ ಇವರೆಲ್ಲರ 'ಪರಪಂಚ'ದಲ್ಲಿ ಇನ್ಯಾವ ಪ್ರಪಂಚ ಇದೆ ಅಂತ ಚಿತ್ರ ತೆರೆ ಕಂಡ ಮೇಲೆ ತಿಳಿಯಬೇಕಿದೆ.

English summary
Kannada movie 'Parapancha' gets U/A Certificate from the Censor Board. 'Parapancha' features Kannada actor
Please Wait while comments are loading...

Kannada Photos

Go to : More Photos