»   » ಅಕ್ಟೋಬರ್ 16ಕ್ಕೆ ಜಗತ್ತಿನಾದ್ಯಂತ ಭಟ್ರ ಶಿಷ್ಯನ 'ಪ್ಲಸ್' ತೆರೆಗೆ

ಅಕ್ಟೋಬರ್ 16ಕ್ಕೆ ಜಗತ್ತಿನಾದ್ಯಂತ ಭಟ್ರ ಶಿಷ್ಯನ 'ಪ್ಲಸ್' ತೆರೆಗೆ

Posted by:
Subscribe to Filmibeat Kannada

ನಿರ್ದೇಶಕ ಯೋಗರಾಜ ಭಟ್ಟರ ಶಿಷ್ಯ ನಿರ್ದೇಶಕ ಗಡ್ಡಾ ವಿಜಿ ಅವರ ಅಪರೂಪದ ಚಿತ್ರ 'ಪ್ಲಸ್' ಇದೇ ವಾರದಲ್ಲಿ (ಅಕ್ಟೋಬರ್ 16 ರಿಂದ) ಇಡೀ ಜಗತ್ತಿನಾದ್ಯಂತ ಬಿಗ್ ಸ್ಕ್ರೀನ್ ನಲ್ಲಿ ತೆರೆ ಕಾಣುತ್ತಿದೆ.

ಡಿಫರೆಂಟ್ ಸೈಕೋಲಾಜಿಕಲ್ ಕಥೆಯನ್ನಾಧರಿಸಿದ 'ಪ್ಲಸ್' ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟ ಅನಂತ್ ನಾಗ್ ಅವರು ವಿಚಿತ್ರ ಗೆಟಪ್ ನಲ್ಲಿ ಮಿಂಚಿದ್ದು, ಡಿಫರೆಂಟ್ ರೋಲ್ ಪ್ಲೇ ಮಾಡಿದ್ದಾರೆ.

ಜೊತೆಗೆ ಬಹುತಾರಾಗಣ ಇರುವ 'ಪ್ಲಸ್' ಚಿತ್ರದಲ್ಲಿ ಮೈನಸ್ ಅನ್ನೋ ಪಾಯಿಂಟೆ ಇಲ್ವಂತೆ. ನಮ್ಮ ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಹಾಗೂ ರಾಜ್ಯಾದ್ಯಂತ ಈ ಚಿತ್ರ ತೆರೆ ಕಾಣುತ್ತಿದೆ. ಜೊತೆಗೆ ವಿಶಾಲ ಕರ್ನಾಟಕಕ್ಕೆ ಸಿನಿಮಾ ಹಂಚಿಕೆಯನ್ನು ಯೋಗರಾಜ್ ಮೂವೀಸ್ ಮಾಡುತ್ತಿದೆ.['ಪ್ಲಸ್; ಚಿತ್ರದಲ್ಲಿ ಮೈನಸ್ ಇಲ್ವೆ, ಇಲ್ವಂತೆ!! ]

ನಿರ್ದೇಶಕ ಯೋಗರಾಜ್ ಭಟ್ಟರು ಬಂಡವಾಳ ಹಾಕಿರುವ ಗಡ್ಡಾ ವಿಜಿ ಅವರ 'ಪ್ಲಸ್' ನಮ್ಮಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಕಮಾಲ್ ಮಾಡಲಿದೆ. ಆಸ್ಟ್ರೇಲಿಯಾದ ಸಿಡ್ನಿ, ಯುಎಸ್ಎ, ಯುರೋಪ್, ವಾಷಿಂಗ್ಟನ್ ಡಿಸಿ, ನ್ಯೂಜಿಲ್ಯಾಂಡ್, ಚಿಕಾಗೋ, ಸಿಂಗಾಪೂರ್, ಲಾಸ್ ಎಂಜಲ್ಸ್ ಕ್ಯಾಲಿಫೋರ್ನಿಯಾ, ಆಸ್ಟ್ರೇಲಿಯಾದ ಮೆಲ್ಬೋರ್ನ್ ಮುಂತಾದೆಡೆ ನಮ್ಮ ಭಟ್ಟರ ಶಿಷ್ಯನ ಚಿತ್ರ ಬಿಡುಗಡೆಯಾಗುತ್ತಿದೆ.['ಅನಂತ್ ನಾಗ್ ಗೆ ಡಿಫರೆಂಟ್ ಲುಕ್ ಕೊಟ್ಟ ಹೆಗ್ಗಳಿಕೆ ನನ್ನದು' ]

ಇನ್ನು ಚಿತ್ರದ ಪ್ರಮುಖ ಆಕರ್ಷಣೆ ಖ್ಯಾತ ಖಳನಟ ರವಿಶಂಕರ್. ಈ ಸಿನಿಮಾದಲ್ಲಿ ರವಿಶಂಕರ್ ರಾಕ್ಷಸನ ಪಾತ್ರದಲ್ಲಿ ಮಿಂಚಿದ್ದಾರೆ. ಇವರ ಕಾಸ್ಟ್ಯೂಮ್ ಕೂಡ ವಿಶೇಷವಾಗಿದ್ದು, ನಿರ್ದೇಶಕ ದುನಿಯಾ ಸೂರಿ ಅವರ ಪತ್ನಿ ಪಲ್ಲವಿ ಅವರು ರವಿಶಂಕರ್ ಅವರ ರಾಕ್ಷಸ ಗೆಟಪ್ ಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.[ಯೋಗರಾಜ್ ಭಟ್ರ 'ಪ್ಲಸ್' ಪಾಯಿಂಟ್ ಮೈನಸ್ ಆದಾಗ...]

ಟ್ರೈಲರ್ ಮೂಲಕ ಭಾರಿ ಕುತೂಹಲ ಹುಟ್ಟಿಸಿರುವ 'ಪ್ಲಸ್' ಚಿತ್ರದಲ್ಲಿ ಅನಂತ್ ನಾಗ್, ಚೇತನ್ ಚಂದ್ರ, ಐಶಾನಿ ಶೆಟ್ಟಿ, ರಿತೇಶ್, ರವಿಶಂಕರ್, ಸುಧಾರಾಣಿ ಮುಂತಾದವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

English summary
Kannada movie 'Plus' is all set to release on October 16th. The Movie features Kannada actor Anant Nag, Actress Aishani Shetty, Actor Chetan Chandra. Directed by Gadda Viji.
Please Wait while comments are loading...

Kannada Photos

Go to : More Photos