twitter
    For Quick Alerts
    ALLOW NOTIFICATIONS  
    For Daily Alerts

    ಅಬ್ಬಾ.! ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದ 'ರಂಗಿತರಂಗ'

    By Suneetha
    |

    'ರಂಗಿತರಂಗ' ಎಂಬ ಸಿನಿಮಾ 250 ದಿನಗಳನ್ನು ಪೂರೈಸಿದರೂ ಈಗಲೂ ಕೂಡ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನವ ನಿರ್ದೇಶಕ ಅನುಪ್ ಭಂಡಾರಿ ಅವರು ಆಕ್ಷನ್-ಕಟ್ ಹೇಳಿರುವ ಕಲರ್ ಫುಲ್ ಕೋಲ್ಮಿಂಚು ಸದಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತದೆ.

    ಅಂದಹಾಗೆ ಈ ಬಾರಿ ಸುದ್ದಿ ಮಾಡಿರುವುದು ಫ್ರಾನ್ಸ್ ನಲ್ಲಿ ಇದೇ ಮೊದಲ ಬಾರಿಗೆ ಸಿನಿಮಾ ಪ್ರದರ್ಶನ ಆಗುವ ಮೂಲಕ. ಜೊತೆಗೆ ಫ್ರೆಂಚ್ ಭಾಷೆಯಲ್ಲಿ ಸಬ್ ಟೈಟಲ್ ಇರುವ ಹೊಸ ಕಾಪಿಯೊಂದಿಗೆ 'ರಂಗಿತರಂಗ' ಸಿನಿಮಾ ವಿದೇಶಕ್ಕೆ ಕಾಲಿಟ್ಟಿದೆ.[ಕಲರ್ಸ್ ಕನ್ನಡದಲ್ಲಿ 'ರಂಗಿತರಂಗ' 225 ದಿನದ ಸಂಭ್ರಮಾಚರಣೆ]

    ಈ ಸಂತಸದ ಸುದ್ದಿಯ ಜೊತೆಗೆ ಇನ್ನೊಂದು ವಿಶೇಷ ಖುಷಿ ಏನಪ್ಪಾ ಅಂದ್ರೆ ನಮ್ಮ ವಿಶೇಷ ನಿರ್ದೇಶಕ ಅನುಪ್ ಭಂಡಾರಿ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಳ್ಳುತ್ತಿದ್ದಾರೆ.

    ಈಗಾಗಲೇ ಇಡೀ ದೇಶ ಪರ್ಯಟನೆ ಮಾಡುತ್ತಿರುವ 'ರಂಗಿತರಂಗ' ಇದೀಗ ಫ್ರಾನ್ಸ್ ದೇಶಕ್ಕೆ ಬಂದು ಮುಟ್ಟಿದೆ. ಇನ್ನು ಫ್ರೆಂಚ್ ಭಾಷೆಯ ಸಬ್ ಟೈಟಲ್ ಜೊತೆಗೆ ಫ್ರಾನ್ಸ್ ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ 'ರಂಗಿ' ಪಾತ್ರವಾಗಿದೆ.[ಭಂಡಾರಿ ಬ್ರದರ್ಸ್ 'ರಂಗಿತರಂಗ'ಕ್ಕೆ ಭಾರಿ ಕಂಟಕ]

    ಮಾರ್ಚ್ 13 ರಂದು ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಆ ದೇಶದ ಪತ್ರಕರ್ತರು ಮತ್ತು ಅಲ್ಲಿನ ಸಿನಿಪ್ರೀಯರು ಅನುಪ್ ಭಂಡಾರಿ ಅವರ 'ರಂಗಿತರಂಗ' ಸಿನಿಮಾವನ್ನು ವೀಕ್ಷಿಸಲಿದ್ದಾರೆ. ಫ್ರೆಂಚ್ ಭಾಷೆಯಲ್ಲಿ ಸಬ್ ಟೈಟಲ್ ಇರುವ 'ರಂಗಿತರಂಗ' ಚಿತ್ರದ ಹೊಸ ಟ್ರೈಲರ್ ಇಲ್ಲಿದೆ ನೋಡಿ...

    ಎಲ್ಲಾ ಹೊಸಬರೇ ಸೇರಿಕೊಂಡು ಮಾಡಿರುವ 'ರಂಗಿತರಂಗ' ಸಿನಿಮಾ 2015ರ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾವಾಗಿ ಹೊರಹೊಮ್ಮಿದೆ. ಭರ್ಜರಿ 225 ದಿನಗಳನ್ನು ಪೂರೈಸಿದ್ದ ಸಂದರ್ಭದಲ್ಲಿ ಕಲರ್ ಫುಲ್ ಚಿತ್ರದ ಬಗ್ಗೆ ಇಡೀ ಚಿತ್ರರಂಗವೇ ಮೆಚ್ಚುಗೆ ವ್ಯಕ್ತಪಡಿಸಿತ್ತು.

    ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರು ಅದ್ಭುತ ಅಭಿನಯ ನೀಡಿದ್ದು, ಇಲ್ಲಿಯವರೆಗೆ ಕಾಣಿಸಿಕೊಳ್ಳದ ಪಾತ್ರದಲ್ಲಿ ಮಿಂಚಿದ್ದರು. ಅಲ್ಲದೇ ಹೊಸ ಪ್ರತಿಭೆಗಳಾದ ನಟ ನಿರುಪ್ ಭಂಡಾರಿ, ನಟಿ ರಾಧಿಕಾ ಚೇತನ್, ನಟಿ ಆವಂತಿಕಾ ಶೆಟ್ಟಿ ಮುಂತಾದವರು ತಮ್ಮ ಅಭಿನಯದ ಮೂಲಕ ಎಲ್ಲರ ಮನಸೆಳೆದಿದ್ದರು.[29 ವರ್ಷಗಳ ನಂತರ ಶಿವಣ್ಣ ಅವರ ದಾಖಲೆ ಮುರಿದ 'ರಂಗಿ' ನಟ ನಿರುಪ್ ಭಂಡಾರಿ.!]

    ಒಟ್ನಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ 'ರಂಗಿತರಂಗ' ಸಿನಿಮಾ ಹೈದರಾಬಾದ್ ನಲ್ಲಿ ನಡೆದ ಐಐಎಎಫ್ ಪ್ರಶಸ್ತಿ ಸಮಾರಂಭದಲ್ಲೂ ಬರೋಬ್ಬರಿ 6 ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಂಡಿತ್ತು.[ಚಿತ್ರಗಳು: ಐಐಎಫ್ಎ ಪ್ರಶಸ್ತಿ ಸಮಾರಂಭದಲ್ಲಿ ರಂಗೇರಿದ 'ರಂಗಿತರಂಗ']

    ಇನ್ನು ಫ್ರಾನ್ಸ್ ನಲ್ಲಿ ಪ್ರದರ್ಶನವಾಗುತ್ತಿರುವ ಮೊದಲ ಕನ್ನಡ ಚಿತ್ರ 'ರಂಗಿತರಂಗ' ಎಂಬ ಖುಷಿಯನ್ನು ಚಿತ್ರದ ನಿರ್ದೇಶಕ ಅನುಪ್ ಭಂಡಾರಿ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ.

    ಫ್ರಾನ್ಸ್ ನಲ್ಲಿ ಮೊದಲ ಕನ್ನಡ ಚಿತ್ರ - ರಂಗಿತರಂಗ! I had thought that my next update should be about our next project but this...

    Posted by Anup Bhandari on Tuesday, March 1, 2016

    English summary
    RangiTaranga creates another milestone. The movie directed by Anup Bhandari flies to France for french audiences. Interestingly, in the recent times of Kannada film industry, RangiTaranga becomes the first & foremost film to be screened in France.
    Wednesday, March 2, 2016, 11:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X