»   » ಈ ವಾರ 2 ಸಿನಿಮಾ ರಿಲೀಸ್, ನಿಮ್ಮ ಆಯ್ಕೆ ಯಾವುದು?

ಈ ವಾರ 2 ಸಿನಿಮಾ ರಿಲೀಸ್, ನಿಮ್ಮ ಆಯ್ಕೆ ಯಾವುದು?

Posted by:
Subscribe to Filmibeat Kannada

'ರಿಕ್ಕಿ' :

ಎಸ್.ವಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಎಸ್.ವಿ.ಬಾಬು ಅವರು ನಿರ್ಮಿಸಿರುವ 'ರಿಕ್ಕಿ' ಸಿನಿಮಾ ರಾಜ್ಯಾದ್ಯಂತ ಈ ಶುಕ್ರವಾರ (ಜನವರಿ 22) ರಂದು ಭರ್ಜರಿಯಾಗಿ ತೆರೆ ಕಾಣುತ್ತಿದೆ.

ನಿರ್ದೇಶಕ ರಿಷಬ್ ಶೆಟ್ಟಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ರಿಕ್ಕಿ' ಚಿತ್ರಕ್ಕೆ ವೆಂಕಟೇಶ್ ಅಂಗುರಾಜ್ ಅವರು ಕ್ಯಾಮರಾ ಕೈ ಚಳಕ ತೋರಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದು ವಿಶ್ವ ಅವರು ಸಂಕಲನ ಮಾಡಿದ್ದಾರೆ.

ಕ್ರೈಮ್ ಥ್ರಿಲ್ಲರ್ ಕಥೆಯಾಧರಿತ 'ರಿಕ್ಕಿ' ಚಿತ್ರಕ್ಕೆ ಎಸ್.ವಿ ಬಾಬು ಅವರು ಬಂಡವಾಳ ಹೂಡಿದ್ದಾರೆ. 'ನಕ್ಸಲಿಸಮ್' ಕಥೆಯಾಧರಿತ ಸಿನಿಮಾದಲ್ಲಿ ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಮತ್ತು 'ಉಗ್ರಂ' ಬೆಡಗಿ ಹರಿಪ್ರಿಯಾ ಅವರು ಮಿಂಚಿದ್ದಾರೆ.

ಇನ್ನುಳಿದಂತೆ ರವಿಕಾಳೆ, ವೀಣಾ ಸುಂದರ್, ಶಶಿಕಲಾ, ಅಚ್ಯುತ್ ಕುಮಾರ್, ಸಾಧುಕೋಕಿಲ, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ರಘು ಪಾಂಡೇಶ್ವರ್ ಮುಂತಾದವರು ಪ್ರಮುಖವಾಗಿ ಮಿಂಚಿದ್ದಾರೆ.[ಇದಪ್ಪಾ ರಕ್ಷಿತ್ ಶೆಟ್ಟಿ ಅಲಿಯಾಸ್ 'ರಿಕ್ಕಿ' ವರಸೆ ಅಂದ್ರೆ]

'ಮಸ್ತ್ ಮೊಹಬ್ಬತ್':

ಮಾನಸ ಮೂವೀಸ್ ಲಾಂಛನದಲ್ಲಿ ನಿರ್ಮಾಪಕ ವಿ.ಶೇಖರ್ ಅವರು ನಿರ್ಮಿಸಿರುವ 'ಮಸ್ತ್ ಮೊಹಬ್ಬತ್' ಚಿತ್ರ ಜನವರಿ 22 ಶುಕ್ರವಾರ ತೆರೆ ಕಾಣುತ್ತಿದೆ.

ನಿರ್ದೇಶಕ ಮೋಹನ್ ಮಾಳಗಿ ಆಕ್ಷನ್-ಕಟ್ ಹೇಳಿರುವ ಪಕ್ಕಾ ರೊಮ್ಯಾಂಟಿಕ್ ಕಥೆಯಾಧರಿತ 'ಮಸ್ತ್ ಮೊಹಬ್ಬತ್' ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಪರಭಾಷಾ ನಟಿ ಪೂನಂ ಭಾಜ್ವಾ ಅವರು ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.[ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ - ರಿಕ್ಕಿ ಟ್ರೈಲರ್ ನೋಡಿ]

ಸಂಗೀತ ನಿರ್ದೇಶಕ ಮನೋಮೂರ್ತಿ ಅವರು ಮ್ಯೂಸಿಕ್ ಕಂಪೋಸ್ ಈ ಚಿತ್ರಕ್ಕಿದ್ದು, ಕಾಮಿಡಿ ನಟ ಚಿಕ್ಕಣ್ಣ, ನವೀನ್ ಕೃಷ್ಣ, ರಾಜು ತಾಳಿಕೋಟೆ, ಶಕೀಲ, ಸ್ವಯಂವರ ಚಂದ್ರು ಮುಂತಾದವರು ಪ್ರಮುಖ ತಾರಾಗಣದಲ್ಲಿ ಮಿಂಚಿದ್ದಾರೆ.

ಚಿತ್ರದ ಹಾಡುಗಳಿಗೆ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯವಿದ್ದು, 'ಹ್ಯಾಪಿ ಡೇಸ್' ಚಿತ್ರದ ಖ್ಯಾತಿಯ ವಿಜಯ್ ಸಿ.ಕುಮಾರ್ ಅವರು ಕ್ಯಾಮರಾ ಕೈ ಚಳಕ ತೋರಿದ್ದಾರೆ.

English summary
Kannada Actor Rakshit Shetty starrer Kannada Movie 'Ricky' and Kannada Actor Prem starrer Kannada Movie 'Mast Mohabbath' are releasing this week (January 22nd).
Please Wait while comments are loading...

Kannada Photos

Go to : More Photos