»   » ಈ ವಾರ ತೆರೆಯ ಮೇಲೆ ಅರುಣ್ ಸಾಗರ್ 'ರಿಂಗ್ ಮಾಸ್ಟರ್'

ಈ ವಾರ ತೆರೆಯ ಮೇಲೆ ಅರುಣ್ ಸಾಗರ್ 'ರಿಂಗ್ ಮಾಸ್ಟರ್'

Posted by:
Subscribe to Filmibeat Kannada

ಸಕಲ ಕಲಾ ವಲ್ಲಭ ಎಂದು ಹೇಳಲು ಅಡ್ಡಿ ಇಲ್ಲದ ನಟ ಅರುಣ್ ಸಾಗರ್ ಅವರ ಹೊಸ ಚಿತ್ರ 'ರಿಂಗ್ ಮಾಸ್ಟರ್' ಸುಮಾರು ಒಂದು ವರ್ಷದ ಹಿಂದೆ ಸೆಟ್ಟೇರಿದ್ದು, ಇದೀಗ ಚಿತ್ರ ಬಿಡುಗಡೆಗೆ ತಯಾರಾಗಿ ನಿಂತಿದೆ.

ಉಪ್ಪಿ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಅರುಣ್ ಸಾಗರ್ ಅವರ 'ರಿಂಗ್ ಮಾಸ್ಟರ್' ಅಕ್ಟೋಬರ್ 9 ರಾಜ್ಯಾದ್ಯಂತ ತೆರೆ ಮೇಲೆ ಅಪ್ಪಳಿಸುತ್ತಿದೆ. ಇನ್ನೇನು ಇದೇ ವಾರದಲ್ಲಿ ನಮ್ಮ ಬೆಂಗಳೂರಿನ ಕೆ.ಜಿ ರಸ್ತೆಯ ಪ್ರಮುಖ ಚಿತ್ರಮಂದಿರಗಳಲ್ಲಿ 'ರಿಂಗ್ ಮಾಸ್ಟರ್' ಆಟ ಶುರುವಾಗಲಿದೆ.[ಅರುಣ್ ಸಾಗರ್ 'ಭಂಗಿರಂಗ' ಭಯಂಕರ ಅವತಾರ]

Kannada Movie  Ring Master releasing on October 9th

ಟಿವಿ ನಿರೂಪಕಿ ಕಮ್ ನಟಿ ಅನುಶ್ರೀ ಅವರು 'ಬೆಂಕಿಪಟ್ಣ' ಚಿತ್ರದ ನಂತರ ಇದೀಗ ಅರುಣ್ ಸಾಗರ್ ಜೊತೆ 'ರಿಂಗ್ ಮಾಸ್ಟರ್' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಬೆಂಕಿಪಟ್ಣ' ಚಿತ್ರದಲ್ಲಿ ಅಷ್ಟಾಗಿ ಯಶಸ್ಸು ಗಳಿಸದ ನಿರೂಪಕಿ ಅನುಶ್ರೀ ಅವರು ರಿಂಗ್ ಮಾಸ್ಟರ್ ಮೂಲಕ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.[ಅರುಣ್ ಸಾಗರ್ ಈಗ 'ರಿಂಗ್ ಮಾಸ್ಟರ್']

ನವಪ್ರತಿಭೆ ನಿರ್ದೇಶಕ ವಿಶ್ರುತ್ ನಾಯಕ್ ಆಕ್ಷನ್-ಕಟ್ ಹೇಳಿರುವ ಅರುಣ್ ಸಾಗರ್ ಅವರ 'ರಿಂಗ್ ಮಾಸ್ಟರ್' ಮೊದಲ ನೋಟಕ್ಕೆ ಥ್ರಿಲ್ಲರ್ ಚಿತ್ರದಂತೆ ಕಂಡರೂ ಕೂಡ ಇದು ಪಕ್ಕಾ ಮನೋರಂಜನಾತ್ಮಕ ಫ್ಯಾಮಿಲಿ ಎಂರ್ಟಟೈನರ್ ಜೊತೆಗೆ ಕಾಮಿಡಿ ಸಖತ್ ಪಂಚ್ ನೀಡುವ ಚಿತ್ರವಂತೆ.

Kannada Movie  Ring Master releasing on October 9th

ಒಂದು ಇಡೀ ರಾತ್ರಿ ನಡೆಯುವ ಕಥೆ ಇದಾಗಿದ್ದು, ಚಿತ್ರಕ್ಕೆ 'ಉಗ್ರಂ' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಇನ್ನು ಚಿತ್ರದ 'ಮೋಹ ಮೀರಿ ನಿಲುವಂಗೆ, ದೇಹವೆಂಬುದು ನಿಲುವಂಗಿ. ಭತ್ತಿಲಿಂಗನ ಸಂಘದೊಳು, ಸಕಲವೂ ಸರಸಂಗಿ', ಎಂಬ ಹಾಡಿಗೆ ಸ್ವತಃ ಅರುಣ್ ಸಾಗರ್ ಅವರೇ ಧ್ವನಿಯಾಗಿರೋದು ವಿಶೇಷ.[ಚಿತ್ರ ವಿಮರ್ಶೆ : ಕಿಚ್ಚು ಹಚ್ಚದ 'ಬೆಂಕಿಪಟ್ಣ']

ಅದೇನೇ ಇರಲಿ ಬಹುಮುಖ ಪ್ರತಿಭೆ ಕಾಮಿಡಿ ಕಿಲ್ಲರ್ ಅರುಣ್ ಅವರು ಪೂರ್ಣ ಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಂಡಿರುವ 'ರಿಂಗ್ ಮಾಸ್ಟರ್' ಕೈ ಹಿಡಿದು ನಡೆಸುತ್ತಾನ?, ಅನ್ನೋ ಪ್ರೇಕ್ಷಕರ ಪ್ರಶ್ನೆಗೆ ಇದೇ ವಾರದಲ್ಲಿ ಉತ್ತರ ದೊರೆಯಲಿದೆ.

English summary
Kannada movie 'Ring Master' is all set to release on October 9th. The Movie features Kannada Actor Arun Sagar, Kannada Actress Anushree, directed by Vishruth Naik.
Please Wait while comments are loading...

Kannada Photos

Go to : More Photos