»   » 'ರಾಕೆಟ್' ಚಿತ್ರದ ರಂಗ್ ರಂಗ್ ಸಾಂಗ್ ಶೂಟ್

'ರಾಕೆಟ್' ಚಿತ್ರದ ರಂಗ್ ರಂಗ್ ಸಾಂಗ್ ಶೂಟ್

Posted by:
Subscribe to Filmibeat Kannada

ನೀನಾಸಂ ಸತೀಶ್ ಅವರ 'ರಾಕೆಟ್' ಹಾಡುಗಳು ಸಖತ್ ಸೌಂಡ್ ಮಾಡುತ್ತಿರುವ ವಿಚಾರ ನಿಮಗೆ ತಿಳಿದಿದೆ ಅಲ್ವಾ. ಬರೀ ಆಡಿಯೋ ಮಾತ್ರ ರಿಲೀಸ್ ಆಗಿ ಮಾರುಕಟ್ಟೆಯಲ್ಲಿ ಭರ್ಜರಿ ಸೇಲ್ ಆಗಿರುವ ರಾಕೆಟ್ ಚಿತ್ರದ ಎರಡು ಹಾಡುಗಳ ಶೂಟಿಂಗ್ ಈಗ ಕಂಪ್ಲೀಟ್ ಆಗಿದೆ.

ರೀಸೆಂಟಾಗಿ ಪುನೀತ್ ರಾಜ್ ಕುಮಾರ್ ಮತ್ತು ಐಶಾನಿ ಶೆಟ್ಟಿ ಹಾಡಿದ್ದ 'ತಣ್ಣಗಿದ್ವಿ ನಾವು ನಮ್ಮ ಪಾಡಿಗೆ ಮಲಿಕೊಂಡು, ಎದುರಲಿ ಬಂದ್ರಿ ನೀವು ನಗು ಚೆಲ್ಕೊಂಡು' ಹಾಡಿಗೆ ಮಿನರ್ವ ಮಿಲ್ ನಲ್ಲಿ ಸ್ಪೆಷಲ್ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ. ನೃತ್ಯ ನಿರ್ದೇಶಕ ಕಾಲೈ ಮಾಸ್ಟರ್ ಅವರ ಕೊರಿಯೋಗ್ರಫಿಯಲ್ಲಿ ಸತೀಶ್ ಹಾಗೂ ಐಶಾನಿ ಶೆಟ್ಟಿ ಹೆಜ್ಜೆ ಹಾಕಿದರು.

Kannada movie 'Rocket' two songs shoot completed

ಮ್ಯೂಸಿಕ್ ಪ್ರಿಯರಿಂದ ಜಾಸ್ತಿ ಡೌನ್ ಲೋಡ್ ಆದ 'ರಾಕೆಟ್' ಚಿತ್ರದ ಮತ್ತೊಂದು ಹಾಡು 'ರಂಗಿ ರಂಗಿ' ಹಾಡಿಗೂ ಬೆಂಗಳೂರಿನ ಹತ್ತಿರದ ಢಾಬಾ ಒಂದರಲ್ಲಿ ಸೆಟ್ ಹಾಕಿ ಶೂಟ್ ಮಾಡಲಾಗಿದೆ. ಡ್ಯಾನ್ಸ್ ಮಾಸ್ಟರ್ ಮುರಳಿ ಅವರು ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. [ನೀನಾಸಂ ಸತೀಶ್ 'ರಾಕೆಟ್'ಗೆ ಪುನೀತ್ ಪವರ್]

Kannada movie 'Rocket' two songs shoot completed

ಇದೀಗ ಇನ್ನೊಂದು ಸಾಂಗ್ ಶೂಟ್ ಬಾಕಿ ಉಳಿದಿದ್ದು, ಇದೇ ತಿಂಗಳ ಅಂತ್ಯದಲ್ಲಿ ಶೂಟಿಂಗ್ ನಡೆಸುವ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ. ಸತೀಶ್ ನೀನಾಸಂ ಚೊಚ್ಚಲ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ನವ ಪ್ರತಿಭೆ ಶಿವಶಶಿ ಆಕ್ಷನ್-ಕಟ್ ಹೇಳಿದ್ದು, ಪೂರ್ಣಚಂದ್ರ ತೇಜಸ್ವಿ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

English summary
Neenasam Satish productional venture Kannada movie 'Rocket' Two Songs Shoot has been completed. 'Rocket' movie features Kannada actor Neenasam Satish, Kannada actress Aishani Shetty. The movie is directed by Shivashashi.
Please Wait while comments are loading...

Kannada Photos

Go to : More Photos