»   » ಬೆಚ್ಚಿಬೀಳಿಸಲು ಬರುತ್ತಿದೆ ಮತ್ತೊಂದು ಹಾರರ್ ಚಿತ್ರ!

ಬೆಚ್ಚಿಬೀಳಿಸಲು ಬರುತ್ತಿದೆ ಮತ್ತೊಂದು ಹಾರರ್ ಚಿತ್ರ!

Posted by:
Subscribe to Filmibeat Kannada

'ಸಂಯುಕ್ತ-2'....ಸದ್ಯ ಕನ್ನಡದಲ್ಲಿ ಮೋಷನ್ ಪೋಸ್ಟರ್ ನಿಂದ ಕುತೂಹಲ ಮೂಡಿಸಿರುವ ಚಿತ್ರ. ಚೇತನ್ ಚಂದ್ರ ಈ ಚಿತ್ರದ ನಾಯಕ. ಚೇತನ್ ಜೊತೆಯಲ್ಲಿ ಸಂಜಯ್ ಮತ್ತು ಪ್ರಭು ಸೂರ್ಯ ಕೂಡ ನಾಯಕರಾಗಿ ಅಭಿನಯಿಸಿದ್ದಾರೆ. ನೇಹಾ ಪಾಟೀಲ್ ಚಿತ್ರದ ನಾಯಕಿಯಾಗಿದ್ದಾರೆ.

'ಸಂಯುಕ್ತ-2' ಸಸ್ಪೆನ್ಸ್ ಹಾರರ್ ಎನಿಸಿದ್ರೂ, ಅದಕ್ಕೂ ಮೀರಿದ ವಿಚಾರಗಳು ಈ ಚಿತ್ರದಲ್ಲಿವೆ ಅಂತಿದೆ ಚಿತ್ರತಂಡ. ಅದಕ್ಕೆ ತಕ್ಕಂತೆ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ನಟ ಚೇತನ್ ಚಂದ್ರ ಸಿಕ್ಸ್ ಪ್ಯಾಕ್ ಬಾಡಿಯಿಂದ ಮಿಂಚಿದ್ದಾರೆ.

Kannada Movie Samyuktha2 Motion Poster Release

ಅಂದ್ಹಾಗೆ, 'ಸಂಯುಕ್ತ-2' ಚಿತ್ರಕ್ಕೆ ಕಥೆ, ಚಿತ್ರಕಥೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನ ಹೊತ್ತಿರುವುದು ಅಭಿರಾಮ್. ಕೆ.ರವಿಚಂದ್ರ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಮಂಜುನಾಥ್ ಡಿ, ಸಂಜಯ್, ನಾರಾಯಣ ಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ.

Kannada Movie Samyuktha2 Motion Poster Release

ಇನ್ನೂ 20 ವರ್ಷಗಳ ಹಿಂದೆ ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಸಂಯುಕ್ತ' ಚಿತ್ರಕ್ಕೂ ಈಗ ತಯಾರಾಗುತ್ತಿರುವ 'ಸಂಯುಕ್ತ-2' ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಕೇವಲ ಶೀರ್ಷಿಕೆಯನ್ನ ಮಾತ್ರ ಬಳಿಸಿಕೊಳ್ಳಲಾಗಿದೆ.

English summary
kannada Actor Chethan Chandra, sanjay, Prabhu surya Starring Knnada movie samyuktha-2 motion poster release. The movie directed by abhiram.
Please Wait while comments are loading...

Kannada Photos

Go to : More Photos