»   » ಸದ್ದಿಲ್ಲದೆ ಶೂಟಿಂಗ್ ಮುಗಿಸಿದ ಶಿವಣ್ಣನ 'ಸಂತೆಯಲ್ಲಿ ನಿಂತ ಕಬೀರ'

ಸದ್ದಿಲ್ಲದೆ ಶೂಟಿಂಗ್ ಮುಗಿಸಿದ ಶಿವಣ್ಣನ 'ಸಂತೆಯಲ್ಲಿ ನಿಂತ ಕಬೀರ'

Posted by:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ 'ಸಂತೆಯಲ್ಲಿ ನಿಂತ ಕಬೀರ' ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳಲ್ಲಿ ಬ್ಯುಸಿಯಾಗಿದೆ.

ಎಪ್ರಿಲ್ ಮೊದಲ ವಾರದಲ್ಲಿ ಹಾಡುಗಳ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿರುವ ಚಿತ್ರತಂಡ ಸಕಲ ಸಿದ್ಧತೆಗಳನ್ನು ಮಾಡುತ್ತಿದೆ. ಇನ್ನು ವಿಶೇಷವಾಗಿ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿರುವ ಚಿತ್ರತಂಡದವರು ಅದ್ದೂರಿ ಸೆಟ್ ಹಾಕಿಸಿ, ಅದರಲ್ಲಿ ಸಂತ ಕಬೀರರ ಕಾಲ ಘಟ್ಟವನ್ನು ಮರು ಸೃಷ್ಟಿಸಲು ಯೋಜನೆ ಮಾಡಿದ್ದಾರೆ.[ಸಂತನಾಗಿ 'ಸಂತೆಯಲ್ಲಿ ನಿಂತ ಕಬೀರ' ಶಿವಣ್ಣ]

ನಿರ್ದೇಶಕ ಇಂದ್ರ ಬಾಬು ಅವರು ಆಕ್ಷನ್-ಕಟ್ ಹೇಳಿರುವ 'ಸಂತ ಕಬೀರ' ಚಿತ್ರ ಭೀಷ್ಮ ಸಾಹ್ನಿ ಅವರ ಕಥೆಯನ್ನು ಆಧರಿಸಿರುವ ಈ ಚಿತ್ರ ಸುಮಾರು 15ನೇ ಶತಮಾನದ ಸಂತರಾದ ಕಬೀರರ ಕುರಿತಾದ ಸಿನಿಮಾವಾಗಿದೆ.[ಯುಗಾದಿ ಹಬ್ಬದಂದು ಶಿವಣ್ಣ ಸಂತ 'ಕಬೀರ' ಶುರು]

ಚಿತ್ರದಲ್ಲಿ ಶಿವಣ್ಣ ಅವರ ಜೊತೆ ನಾಯಕಿಯಾಗಿ ನಟಿ ಸನುಷಾ ಅವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು, ಚಿತ್ರತಂಡದವರು ಡಿ.ಟಿ.ಎಸ್ ಕಾರ್ಯಗಳಲ್ಲಿ ತೊಡಗಿದ್ದಾರೆ.[ಹ್ಯಾಟ್ರಿಕ್ ಹೀರೋ 'ಕಬೀರ' ಫಸ್ಟ್ ಲುಕ್ ಔಟ್]

ಛಾಯಾಗ್ರಾಹಕ ನವೀನ್ ಕುಮಾರ್ ಅವರ ಕ್ಯಾಮರಾ ಕೈ ಚಳಕದಲ್ಲಿ ಸುಮಾರು 48 ದಿನಗಳ ಕಾಲ ಬೆಂಗಳೂರು, ಕೆ.ಆರ್.ಎಸ್ ಹಿನ್ನೀರು ಪ್ರದೇಶ, ಚಿಕ್ಕಮಗಳೂರು ಮತ್ತು ಚಾಲಾಕುಡಿಯಲ್ಲಿ ಚಿತ್ರೀಕರಣ ಮಾಡಲಾಗಿದೆ.

ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಅವರು ಮ್ಯೂಸಿಕ್ ಕಂಪೋಸ್ ಮಾಡಿರುವ ಚಿತ್ರದಲ್ಲಿ ತಮಿಳು ನಟ ಶರತ್ ಕುಮಾರ್, ದತ್ತಣ್ಣ, ಅವಿನಾಶ್, ಶರತ್ ಲೋಹಿತಾಶ್ವ, ಭಾಗೀರಥಿ ಬಾಯಿ ಕದಂ, ಪ್ರಶಾಂತ್ ಸಿದ್ದಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದಾರೆ.

English summary
Kannada Movie 'Santheyalli Nintha Kabira' Shooting Completed. Kannada Actor Shiva Rajkumar, Actress Sanusha in the lead role. The movie is directed by Indra Babu.
Please Wait while comments are loading...

Kannada Photos

Go to : More Photos