»   » ಶಂಕರ್ ನಾಗ್ ಹುಟ್ಟೂರಿನ ಕಥೆ ಹೇಳುತ್ತಾ 'ನಾಗರಕಟ್ಟೆ'?

ಶಂಕರ್ ನಾಗ್ ಹುಟ್ಟೂರಿನ ಕಥೆ ಹೇಳುತ್ತಾ 'ನಾಗರಕಟ್ಟೆ'?

Written by: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ದಿಲ್ಲದೇ 'ನಾಗರಕಟ್ಟೆ' ಸಿನಿಮಾ ಇವತ್ತು (ಮಾ.16) ಸೆಟ್ಟೇರಿದೆ. ಅನೀಶ್ ತೇಜೇಶ್ವರ್ ನಟನೆಯ ಚಿತ್ರ 'ನಾಗರಕಟ್ಟೆ'. ಸಾಮಾನ್ಯವಾಗಿ ನಾಗರಕಟ್ಟೆ ಅಂದ್ರೆ ಅಷ್ಟು ಬೇಗನೆ ನಮ್ಗೆ ನೆನಪಾಗೋದಿಲ್ಲ. ಆದ್ರೆ ನೆನಪಿರಲಿ ನಾಗರಕಟ್ಟೆ ಎಂಬುದು ಶಂಕರ್ ನಾಗ್ ಅವರ ಹುಟ್ಟೂರು.

ಸ್ಯಾಂಡಲ್ ವುಡ್ ನಲ್ಲಿ ಅಲ್ಪ ಕಾಲದಲ್ಲೇ ಮರೆಯಲಾಗದಷ್ಟು ಸಾಧನೆ ಮಾಡಿ ಹೋದ ಸ್ಯಾಂಡಲ್ ವುಡ್ ನ ಮೊದಲ ಕನಸುಗಾರ ಶಂಕರ್ ನಾಗ್ ಹೆಸರಿನ ಜೊತೆಗೇ 'ನಾಗರಕಟ್ಟೆ' ಅನ್ನೋ ಊರು ಸೇರಿಕೊಂಡಿದೆ. ಇದು ಉತ್ತರಕನ್ನಡದ ಹೊನ್ನಾವರ ತಾಲೂಕಿನ ಒಂದು ಹಳ್ಳಿ. [ಅನೀಶ್ ತೇಜಸ್ವರ್ 'ಅಕಿರಾ' ಕುರುಸೋವಾನಾ?]

kannada-movie-titled-as-shankar-nagarkatte

ಕನ್ನಡ ಚಿತ್ರರಂಗದ ನಟ ಚತುರ ಅನಂತ್ ನಾಗ್ ಕರಾಟೆಕಿಂಗ್ ಶಂಕರ್ ನಾಗ್ ಇಬ್ಬರೂ ಆಡಿ ಬೆಳೆದ ನೆನಪುಗಳು ನಾಗರಕಟ್ಟೆಯಲ್ಲಿವೆ. ಈ ಇಬ್ಬರು ದಿಗ್ಗಜರನ್ನ ಸಿನಿಮಾ ರಂಗಕ್ಕೆ ನೀಡಿದ ಊರಿನ ಹೆಸರು ಈಗ ಸಿನಿಮಾ ಟೈಟಲ್ ಆಗಿದೆ.

ಆದ್ರೆ ಇಲ್ಲಿ ಶಂಕರ್ ನಾಗ್, ಅನಂತ್ ನಾಗ್ ಕಥೆ ಇರುತ್ತಾ? ಇದು ಅದೇ ನಾಗರಕಟ್ಟೇನಾ ಅಥವಾ ಬೇರೇನಾ ಗೊತ್ತಿಲ್ಲ. ಆದ್ರೆ ನಾಗರಕಟ್ಟೆ ಅನ್ನೋ ಹೆಸರಿಗೊಂದು ಶಕ್ತಿ ಇರೋದಂತೂ ನಿಜ. ಅನೀಶ್ ತೇಜಸ್ವರ್ ಅವರು ಒಳ್ಳೆಯ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ.

ನನ್ ಲೈಫ್ ಅಲ್ಲಿ ಹಾಗೂ ಎಂದೆಂದಿಗೂ ನಿನಗಾಗಿ ಚಿತ್ರಗಳ ಬಳಿಕ ಅನೀಶ್ ತೇಜೇಶ್ವರ್ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. ನಾಗರಕಟ್ಟೆಯಲ್ಲಿ ನಾಯಕಿ ಯಾರಾಗುತ್ತಾರೆ, ಉಳಿದ ಪಾತ್ರವರ್ಗ, ತಾಂತ್ರಿಕ ಬಳಗದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕು.

English summary
Anish Tejeshwar's new movie titled as 'Shaknar Nagarkatte', means Varsatile actor, director late Shankar Nag's original name. 'Nagarkatte' is also a birth place of Shankar Nag.
Please Wait while comments are loading...

Kannada Photos

Go to : More Photos