ಸೈಕೋ 'ಉಮೇಶ್' ಚಿತ್ರಮಂದಿರಗಳಲ್ಲಿ ಪ್ರತ್ಯಕ್ಷ

Posted by:

"ಹುಡ್ಗೀರ್ ಬಟ್ಟೆ ಹಾಕ್ಕೋಳ್ಳೋದು ಅಂದ್ರೆ ನಂಗೆ ತುಂಬಾ... ಇಷ್ಟ" ಎಂದು ವಿಚಿತ್ರ ರೀತಿಯಲ್ಲಿ ಪ್ರಚಾರ ನೀಡಿ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲು ಚಿತ್ರಮಂದಿರಗಳಿಗೆ ಬಂದಿದ್ದಾನೆ ಸೈಕೋ 'ಉಮೇಶ್'. ಇಂದಿನಿಂದ (ಸೆ.12) ರಾಜ್ಯದಾದ್ಯಂತ 'ಉಮೇಶ್' ಆಟ ಶುರುವಾಗಿದೆ.

ಅಂದು ದಂಡುಪಾಳ್ಯ ಇಂದು ಉಮೇಶ್ ಎಂಬುದು ಚಿತ್ರದ ಟ್ಯಾಗ್ ಲೈನ್. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿದೆ. ಹೊಸದಾಗಿ ನವೀಕರಣಗೊಂಡಿರುವ ಬೆಂಗಳೂರಿನ ಸ್ವಪ್ನ ಚಿತ್ರಮಂದಿರದಲ್ಲಿ ಉಮೇಶ್ ತೆರೆಕಂಡಿದೆ.


ಇದಿಷ್ಟೇ ಅಲ್ಲದೆ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಾದ ಪಿವಿಆರ್, ಗೋಪಾಲನ್ ಸಿನಿಮಾಸ್, ಸಿನೆಪೊಲಿಸ್, ಐನಾಕ್ಸ್ ಚಿತ್ರಮಂದಿರಗಳಲ್ಲೂ ತೆರೆಕಂಡಿದೆ. ರಾಜ್ಯದಾದ್ಯಂತ 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಉಮೇಶ್' ಪ್ರತ್ಯಕ್ಷವಾಗಿದ್ದಾನೆ.

ಇಷ್ಟಕ್ಕೂ ಈ ಚಿತ್ರದ ಕತೆ ಏನೆಂದರೆ. ವಿದೇಶಿ ವಿಶ್ವವಿದ್ಯಾಲಯದಲ್ಲಿ ಬಿಹೇವಿಯರಲ್ ಸೈನ್ಸ್ ಓದುತ್ತಿರುವ ವಿದ್ಯಾರ್ಥಿನಿಯರು ಭಾರತಕ್ಕೆ ಬರುತ್ತಾರೆ. ಅರೆಸ್ಟ್ ಆಗಿರುವ ಸೈಕೋಪಾತ್ 'ಉಮೇಶ್'ನನ್ನು ಸಂದರ್ಶನ ಮಾಡಲು ಹೋಗುತ್ತಾರೆ. ಉಮೇಶ್‌ಗೆ ಅವರಿಬ್ಬರ ಮೇಲೆ ಕಣ್ಣುಬೀಳುತ್ತದೆ.

ಜೈಲಿನಿಂದ ಎಸ್ಕೇಪ್ ಆಗುವ ಆತ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸುತ್ತಾನೆ. ಮುಂದೇನಾಗುತ್ತದೆ ಎಂಬುದೇ ಚಿತ್ರದ ಕತೆ. ಉಮೇಶ್ ರೆಡ್ಡಿ ಕತೆಯನ್ನು ಯಥಾವತ್ತಾಗಿ ತರದೆ ಅಲ್ಲಲ್ಲಿ ಸಿನಿಮೀಯ ಬದಲಾವಣೆಗಳು ಇರುತ್ತವೆ.

ನೈಜವಾಗಿ ಉಮೇಶ್ ರೆಡ್ಡಿ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಇಲ್ಲಿನ 'ಉಮೇಶ್'ನನ್ನು ಒಬ್ಬ ಚಲನಚಿತ್ರ ನಿರ್ದೇಶಕನಾಗಿ ತೋರಿಸಲಾಗಿದೆಯಂತೆ. ಚಿತ್ರದಲ್ಲಿ ಬಹುತೇಕ ಹೊಸಬರೇ ಇದ್ದಾರೆ. ಎಸ್.ಎಂ. ಸಿನಿಕ್ರಿಯೇಷನ್ಸ್ ಲಾಂಛನದಲ್ಲಿ ಪ್ರೇಮ್ ಕುಮಾರ್, ಅಶೋಕ್ ಕುಮಾರ್ ನಿರ್ಮಾಣದ ಚಿತ್ರವಿದು.

ಈ ಚಿತ್ರದ ನಿರ್ದೇಶನ ಅಶೋಕ್ ಕುಮಾರ್, ಛಾಯಾಗ್ರಹಣ-ಬಿನೇಂದ್ರ ಮೆನನ್ - ಹರಿನಾಯಕ್, ಸಂಗೀತ-ಶ್ಯಾಮ್ ಎಲ್.ರಾಜ್, ಸಂಕಲನ - ಬೇಬಿ ನಾಗರಾಜ್, ಸಾಹಸ - ಕೌರವ ವೆಂಕಟೇಶ್, ಟ್ವಿಸ್ಟ್ ಚಂದ್ರು, ಸಹನಿರ್ದೇಶನ-ಜ್ಯೋತಿರಾವ್ ಮೋಹಿತ್-ಅಶೋಕ್ ದೇವ್, ನಿರ್ವಹಣಿ - ಈಶ್ವರಿಬಾಬು, ತಾರಾಗಣದಲ್ಲಿ-ಜಿತೇಂದ್ರ ಸೈಮನ್,ನೀಪೋಪರ್,(ಲಂಡನ್)ವಯೋಲ, ಜೋಸೈಮನ್, ವಿಶ್ವನಾಥ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

Read more about: psycho, umesh reddy, bangalore, rape, ಉಮೇಶ್ ರೆಡ್ಡಿ, ಬೆಂಗಳೂರು, ಕ್ರೈಂ, ಸೈಕೋ, ಅತ್ಯಾಚಾರ

English summary
Kannada film on psychopath and serial killer 'Umesh' was released in multiplexes and single-screen cinema halls in Karnataka. The film is being screened over 70 plus halls in the state.
Please Wait while comments are loading...

Kannada Photos

Go to : More Photos