»   » ನವೆಂಬರ್ 6 ರಂದು ನಿಮ್ಮೆಲ್ಲರ ಮುಂದೆ 'ವಂಶೋದ್ಧಾರಕ' ಬರಲಿದ್ದಾನೆ!

ನವೆಂಬರ್ 6 ರಂದು ನಿಮ್ಮೆಲ್ಲರ ಮುಂದೆ 'ವಂಶೋದ್ಧಾರಕ' ಬರಲಿದ್ದಾನೆ!

Posted by:
Subscribe to Filmibeat Kannada

ಚಂದನವನದ ಪ್ರೀತಿಯ 'ಚಿನ್ನಾರಿ ಮುತ್ತಾ' ವಿಜಯ್ ರಾಘವೇಂದ್ರ ಅವರ ಹೊಸ ಚಿತ್ರ 'ವಂಶೋದ್ಧಾರಕ' ನವೆಂಬರ್ 6 ರಂದು ಕರ್ನಾಟಕದಾದ್ಯಂತ ಎಲ್ಲೆಡೆ ಭರ್ಜರಿಯಾಗಿ ತೆರೆಗೆ ಅಪ್ಪಳಿಸುತ್ತಿದೆ.

ಸಂಪೂರ್ಣ ಫ್ಯಾಮಿಲಿ ಸೆಂಟಿಮೆಂಟ್ ಕಥೆಯನ್ನಾಧರಿಸಿದ 'ವಂಶೋದ್ಧಾರಕ' ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಈಗಾಗಲೇ ಯು, ಅರ್ಹತಾ ಪ್ರಮಾಣ ಪತ್ರ ನೀಡುವ ಮೂಲಕ ಚಿತ್ರ ಬಿಡುಗಡೆ ಸಮ್ಮತಿ ಸೂಚಿಸುವುದರೊಂದಿಗೆ, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.[ತೆರೆಗೆ ಸಿದ್ಧವಾಗಿದೆ ವಿಜಯ ರಾಘವೇಂದ್ರ 'ವಂಶೋದ್ಧಾರಕ']

ಓಂ ಶ್ರೀ ಕಾಳಿಕಾಮಾತಾ ಪ್ರೊಡಕ್ಷನ್ಸ್ ಲಾಂಛನದಡಿ ಮೂಡಿ ಬರುತ್ತಿರುವ 'ವಂಶೋದ್ಧಾರಕ' ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರ ಜೊತೆ ನಟಿ ಮೇಘನಾ ಸುಂದರ್ ರಾಜ್ ಅವರು ಪಕ್ಕಾ ಸಂಪ್ರದಾಯ ಬದ್ಧ ಕಾಸ್ಟ್ಯೂಮ್ ನಲ್ಲಿ ಡ್ಯುಯೆಟ್ ಹಾಡಲಿದ್ದಾರೆ.

ಕಾಮಿಡಿ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಇರುವ ಈ ಚಿತ್ರದಲ್ಲಿ ನಟಿ ಲಕ್ಷ್ಮಿ, ಶ್ರೀನಿವಾಸ ಮೂರ್ತಿ, ವಿನಯಾ ಪ್ರಸಾದ್, ವೀಣಾ ಸುಂದರ್, ರಂಗಾಯಣ ರಘು, ನವೀನ್ ಕೃಷ್ಣ, ಸಾಧುಕೋಕಿಲ, ಸಂಕೇತ್ ಕಾಶಿ, ಬಿರಾದಾರ್, ಹೊನ್ನವಳ್ಳಿ ಕೃಷ್ಣ ಮತ್ತು ಬ್ಯಾಂಕ್ ಜನಾರ್ಧನ್ ಮುಂತಾದವರು ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ.['ವಂಶೋದ್ಧಾರಕ'ನಿಗೆ ನಾಯಕಿ ಮೇಘನಾ ರಾಜ್]

ನಿರ್ದೇಶಕ ಆದಿತ್ಯ ಚಿಕ್ಕಣ್ಣ ಅವರು ಆಕ್ಷನ್-ಕಟ್ ಹೇಳಿರುವ 'ವಂಶೋದ್ಧಾರಕ' ನಿಗೆ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಅಂದಹಾಗೆ ಚಿತ್ರದಲ್ಲಿ ನಾಯಕನ ಪಾತ್ರ ಮಾಡಿರುವ ವಿಜಯ್ ರಾಘವೇಂದ್ರ ಅವರು ಪಟ್ಟಣದಲ್ಲಿ ವಿದ್ಯಾಭ್ಯಾಸ ಮುಗಿಸಿ ಹಳ್ಳಿಗೆ ಬರುವ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿ-ನಟಿ ಮೇಘನಾ ಅವರು ಸಾಮಾಜಿಕ ಕಾರ್ಯಕರ್ತೆಯ ಪಾತ್ರದಲ್ಲಿ ಮಿಂಚಿದ್ದಾರೆ.

English summary
Vijay Raghavendra-Meghana Raj starrer 'Vamshoddaraka' is all set to be released on the 06th of November. 'Vamshoddaraka' is directed by Aditya Chikkanna
Please Wait while comments are loading...

Kannada Photos

Go to : More Photos