»   » 'ವಿರಾಟ್' ಫಸ್ಟ್ ಡೇ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್

'ವಿರಾಟ್' ಫಸ್ಟ್ ಡೇ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್

Posted by:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ವಿರಾಟ್' ಸಿನಿಮಾ ಲೇಟಾಗಿ ಲೇಟೆಸ್ಟ್ ಆಗಿ ನಿನ್ನೆ (ಜನವರಿ 29) ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದ್ದು, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಅಂದಹಾಗೆ ಅದ್ಧೂರಿಯಾಗಿ ತೆರೆ ಕಂಡ 'ವಿರಾಟ್' ಒಂದು ದಿನದಲ್ಲಿ ಮಾಡಿದ ಕಲೆಕ್ಷನ್ಸ್ ಎಷ್ಟು ಗೊತ್ತಾ? ಬರೋಬ್ಬರಿ ಅಂದಾಜು 4 ಕೋಟಿ ರೂಪಾಯಿ. ಹೌದು ಮೊದಲ ದಿನವೇ ಇಷ್ಟರಮಟ್ಟಿಗೆ ಕಲೆಕ್ಷನ್ಸ್ ಮಾಡುವ ಮೂಲಕ ಬಾಕ್ಸಾಫೀಸ್ ಧೂಳೆಬ್ಬಿಸಿದೆ.['ವಿರಾಟ್' ವೀರಾವೇಷಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?]ಅಬ್ಬರದ ಡೈಲಾಗ್ಸ್ ಮತ್ತು ಫೈಟ್ಸ್, ಮೂವರು ಗ್ಲಾಮರ್ ಬೆಡಗಿಯರೊಂದಿಗೆ ದರ್ಶನ್ ಅವರ ಡ್ಯುಯೆಟ್, ಸಖತ್ ಕ್ಲಾಸ್ ಲುಕ್ ನಲ್ಲಿ ದರ್ಶನ್ ಅವರ ಸ್ಟೈಲ್ ಮುಂತಾದ 'ವಿರಾಟ್' ವೀರಾವೇಷಕ್ಕೆ ಅಭಿಮಾನಿಗಳು ಸೋತು ಹೋಗಿದ್ದಾರೆ.


ನಟ ದರ್ಶನ್, ನಟಿ ಸುಮಲತಾ ಅಂಬರೀಶ್, ನಟಿ ಸುಹಾಸಿನಿ, ಖಳ ನಟ ರವಿಶಂಕರ್, ನಟಿ ಇಶಾ ಚಾವ್ಲಾ, ವಿದಿಶಾ, ಚೈತ್ರ ಚಂದ್ರನಾಥ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ವಿರಾಟ್' ಚಿತ್ರ ದರ್ಶನ್ ಅಭಿಮಾನಿಗಳಿಗೆ ಮೃಷ್ಟಾನ್ನ ಭೋಜನ ಬಡಿಸಿದಂತೆ ಆಗಿತ್ತು.['ವಿರಾಟ್' ವಿಮರ್ಶೆ; ಕಡ್ಡಾಯವಾಗಿ ದರ್ಶನ್ ಅಭಿಮಾನಿಗಳಿಗೆ ಮಾತ್ರ]ಇದೀಗ ಒಂದೇ ದಿನದಲ್ಲಿ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ 'ವಿರಾಟ್' ಸಿನಿಮಾ ಅಂದಾಜು 4 ಕೋಟಿ ರೂಪಾಯಿಗಳನ್ನು ಬಾಚಿಕೊಂಡು ಬಾಕ್ಸಾಫೀಸ್ ಚಿಂದಿ ಚಿತ್ರಾನ್ನ ಮಾಡಿದೆ.

English summary
Kannada Movie 'Viraat' 1st day box office collection report. Kannada actor Darshan, Actress Isha Chawla, Actress Chaitra Chandranath, Actress Vidisha Shrivastav in the lead role. The movie is directed by H Vasu.
Please Wait while comments are loading...

Kannada Photos

Go to : More Photos