twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ 'ವಿರಾಟ್' ಒಂದು ವಾರದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?

    By Suneetha
    |

    ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ 'ವಿರಾಟ್' ಸಿನಿಮಾ ಭಯಂಕರ ಸೌಂಡ್ ಮಾಡುವ ಮೂಲಕ ಲೇಟೆಸ್ಟ್ ಆಗಿ ಚಿತ್ರಮಂದಿರಗಳಿಗೆ ಎಂಟ್ರಿ ಪಡೆದುಕೊಂಡಿತ್ತು. ಟ್ರೈಲರ್ ಮೂಲಕ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಹುಟ್ಟಿಸಿದ್ದರೂ, ಸಿನಿಮಾ ಮಾತ್ರ ಅಷ್ಟಾಗಿ ಮೆಚ್ಚುಗೆ ಗಳಿಸಲಿಲ್ಲ.

    ಅಂದಹಾಗೆ ದರ್ಶನ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿದ್ದ ಸಿನಿಮಾ ಯಾಕೋ ಕಲೆಕ್ಷನ್ ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಜೊತೆಗೆ ನಿರೀಕ್ಷೆಗೆ ತಕ್ಕಷ್ಟು ಕಲೆಕ್ಷನ್ ಕೂಡ ಮಾಡಿಲ್ಲ. ಅಂತೂ ಒಟ್ಟಾರೆ ಒಂದು ವಾರದ ಕಲೆಕ್ಷನ್ ಸುಮಾರು 18 ಕೋಟಿ ಅನ್ನೋದನ್ನ ವಿತರಕರು ತಿಳಿಸಿದ್ದಾರೆ.['ವಿರಾಟ್' ಫಸ್ಟ್ ಡೇ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್]

    ಆದ್ದರಿಂದ ದರ್ಶನ್ ಅವರ 'ವಿರಾಟ್' ಅತ್ತ ತುಂಬಾ ಹಿಟ್ ಸಿನಿಮಾ ಕೂಡ ಆಗದೇ, ಇತ್ತ ನೆಲಕಚ್ಚದೆ, ಸಾಧಾರಣ ಎನ್ನುವಷ್ಟರ ಮಟ್ಟಿಗೆ ವಹಿವಾಟು ನಡೆಸಿದೆ. ಮೊದಲ ದಿನ ಸುಮಾರು 5 ಕೋಟಿ ಕಲೆಕ್ಷನ್ ಮಾಡಿದ್ದನ್ನು ನೋಡಿದವರು, ಇನ್ನೇನು ಬಿಡಿ 'ವಿರಾಟ್' ದರ್ಶನ್ ಅವರಿಗೆ ಒಳ್ಳೆ ಬ್ರೇಕ್ ಕೊಡುತ್ತೆ ಅಂತ ಅಂದುಕೊಂಡಿದ್ದರು.

    ಆದರೆ ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಸದ್ಯಕ್ಕೆ ಈಗ 5.3 ಕೋಟಿ ರೂಪಾಯಿಗೆ ಇಳಿದಿದೆ. ಒಟ್ನಲ್ಲಿ ಕಲೆಕ್ಷನ್ ಗೆ ಭಾರಿ ಹೊಡೆತ ಬಿದ್ದಿದೆ ಎಂದು ಅಲ್ಲಲ್ಲಿ ಗುಸು ಗುಸು ಕೇಳಿ ಬರುತ್ತಿದೆ.['ವಿರಾಟ್' ವೀರಾವೇಷಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?]

    ಇನ್ನು ಸಿನಿಮಾದಲ್ಲಿ ಚಿತ್ರದ ಮೊದಲರ್ಧದ ದರ್ಶನ್ ಗೂ, ದ್ವಿತಿಯಾರ್ಧದ ದರ್ಶನ್ ಗೂ ಒಂದಕ್ಕೊಂದು ಹೋಲಿಕೆಯಾಗುತ್ತಿಲ್ಲ, ಕ್ಲೈಮಾಕ್ಸ್ ನಲ್ಲಿ ಪ್ರೇಕ್ಷಕ ಗಲಿಬಿಲಿ ಆಗಿದ್ದಾನೆ ಎಂದು ಸಿನಿಮಾ ನೋಡಿದ ವಿಮರ್ಶಕರು ಬರೆದುಕೊಂಡಿದ್ದರು.

    ಜೊತೆಗೆ ಒಳ್ಳೆ ಕಥೆಯನ್ನು ಸಮರ್ಪಕವಾಗಿ ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ನಿರ್ದೇಶಕರು ವಿಫಲವಾಗಿದ್ದಾರೆ. ಆದ್ರಿಂದ ಇದೇ ಕಾರಣಕ್ಕಾಗಿ ಈ ವಾರ ಒಂದಷ್ಟು ಥಿಯೇಟರ್ ಗಳು ದರ್ಶನ್ ಅವರ 'ವಿರಾಟ್' ಸಿನಿಮಾಗೆ ವಿದಾಯ ಹೇಳಲಿದ್ದಾವಂತೆ.['ವಿರಾಟ್' ವಿಮರ್ಶೆ; ಕಡ್ಡಾಯವಾಗಿ ದರ್ಶನ್ ಅಭಿಮಾನಿಗಳಿಗೆ ಮಾತ್ರ]

    ಒಟ್ಟಾರೆ ದರ್ಶನ್ ಅಭಿನಯದ 'ವಿರಾಟ್' ಸಿನಿಮಾ 'ಸಾಧಾರಣ' ಎನ್ನುವಷ್ಟರ ಮಟ್ಟಿಗೆ ಕಲೆಕ್ಷನ್ ಮಾಡಿದೆ. ಅಂತೂ ತೀರಾ ನಿರ್ಮಾಪಕರಿಗೆ ಲಾಸ್ ಆಗದಿದ್ರೂ, ಹೇಳಿಕೊಳ್ಳುವಂತಹ ಲಾಭ ಏನೂ ಮಾಡಿಲ್ಲ ಅಂತ ಸಿನಿ ಪಂಡಿತರು ನಿಟ್ಟುಸಿರು ಬಿಟ್ಟಿದ್ದಾರೆ.

    English summary
    Kannada Movie 'Viraat' one week box office collection report. Kannada actor Darshan, Actress Isha Chawla, Actress Chaitra Chandranath, Actress Vidisha Shrivastav in the lead role. The movie is directed by H Vasu.
    Wednesday, February 3, 2016, 9:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X