»   » ತೆಲುಗು, ತಮಿಳು ಚಿತ್ರಗಳಿಗೆ ಸೆಡ್ಡುಹೊಡೆದ 'ನಿನ್ನಿಂದಲೇ'

ತೆಲುಗು, ತಮಿಳು ಚಿತ್ರಗಳಿಗೆ ಸೆಡ್ಡುಹೊಡೆದ 'ನಿನ್ನಿಂದಲೇ'

Written by: ಉದಯರವಿ
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರಗಳೇ ಹಾಗೆ. ಬಿಡುಗಡೆಗೂ ಮುನ್ನವೇ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿರುತ್ತವೆ. ಇನ್ನು ಬಿಡುಗಡೆಯಾದ ಬಳಿಕ ಉಂಟಾಗುವ ಗದ್ದಲವೇ ಬೇರೆ. ಈಗ ತೆರೆಕಾಣುತ್ತಿರುವ (ಜನವರಿ 16) 'ನಿನ್ನಿಂದಲೇ' ಚಿತ್ರದ ಬಗ್ಗೆಯೂ ಎಲ್ಲಿಲ್ಲದ ಉತ್ಸಾಹ, ನಿರೀಕ್ಷೆಗಳು ಇವೆ.

ಈ ಚಿತ್ರವನ್ನು ರಾಜ್ಯದಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳು ಹಾಗೂ 20 ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ತೆರೆಕಾಣುವುದಕ್ಕೂ ಮೂರು ದಿನಗಳ ಮುನ್ನವೇ ಆನ್ ಲೈನ್ ಬುಕ್ಕಿಂಗ್ ತೆರೆಯಲಾಗಿತ್ತು.

'ಸಂಕ್ರಾಂತಿ' ಸಂಭ್ರಮದ ಜೊತೆಗೆ ಚಿತ್ರ ತೆರೆಗೆ ಬರುತ್ತಿರುವುದು ಈ ಬಾರಿಯ ವಿಶೇಷ. ಈಗಾಗಲೆ ಆನ್ ಲೈನ್ ಬುಕ್ಕಿಂಗ್ ಕ್ಲೋಸ್ ಆಗಿದೆ. ಟಿಕೆಟ್ ಗಳೆಲ್ಲವೂ ಸೋಲ್ಡ್ ಔಟ್ ಆಗಿವೆ. ಕೆಲವು ಕಡೆ ಬೆಳಗಿನ ಆಟವನ್ನು 7 ಗಂಟೆಗೆ ಆರಂಭಿಸಲಾಗುತ್ತಿದೆ.

ದಾರಿಬಿಟ್ಟುಕೊಟ್ಟ ತೆಲುಗು, ತಮಿಳು ಚಿತ್ರಗಳು
  

ದಾರಿಬಿಟ್ಟುಕೊಟ್ಟ ತೆಲುಗು, ತಮಿಳು ಚಿತ್ರಗಳು

ಇನ್ನು ನಿನ್ನಿಂದಲೇ ಚಿತ್ರದ ಹವಾ ಹೇಗಿದೆ ಎಂದರೆ ಈಗಾಗಲೆ ತೆರೆಕಂಡಿರುವ ತೆಲುಗು, ತಮಿಳು ಚಿತ್ರಗಳಾದ ವೀರಂ, ಜಿಲ್ಲಾ ಹಾಗೂ 1 ನೇನೊಕ್ಕಡಿನೇ, ಎವಡು ಚಿತ್ರಗಳು ಪುನೀತ್ ಚಿತ್ರಕ್ಕೆ ದಾರಿ ಬಿಟ್ಟುಕೊಟ್ಟಿವೆ.

ಕೆಲವು ಚಿತ್ರಮಂದಿರಗಳಿಗೆ ಪುನೀತ್ ಭೇಟಿ
  

ಕೆಲವು ಚಿತ್ರಮಂದಿರಗಳಿಗೆ ಪುನೀತ್ ಭೇಟಿ

ಬಿಡುಗಡೆಯಾಗಬೇಕಿದ್ದ ಕೆಲವು ತಮಿಳು, ತೆಲುಗು ಚಿತ್ರಗಳು ಮುಂದಕ್ಕೆ ಹೋಗಿವೆ. ನಿನ್ನಿಂದಲೇ ಬಿಡುಗಡೆಯಾಗುತ್ತಿರುವ ಕೆಲವು ಚಿತ್ರಮಂದಿರಗಳಿಗೆ ಪುನೀತ್ ಅವರು ಭೇಟಿ ನೀಡುತ್ತಿದ್ದಾರೆ. ಅದೃಷ್ಟ ಇದ್ದರೆ ನೀವು ವೀಕ್ಷಿಸುತ್ತಿರುವ ಚಿತ್ರಮಂದಿರಕ್ಕೇ ಪುನೀತ್ ಭೇಟಿ ನೀಡಬಹುದು.

ಯಾವುದೇ ವಿಶೇಷ ಕಾರ್ಯಕ್ರವಿಲ್ಲ
  

ಯಾವುದೇ ವಿಶೇಷ ಕಾರ್ಯಕ್ರವಿಲ್ಲ

ಚಿತ್ರ ಬಿಡುಗಡೆಗೆ ಮುನ್ನ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ ಎಂದಿದ್ದಾರೆ ಚಿತ್ರದ ನಿರ್ಮಾಪಕ ವಿಜಯ್ ಕುಮಾರ್.

ಶ್ರೀನಿವಾಸ ಥಿಯೇಟರ್ ನಲ್ಲಿ 7ಕ್ಕೆ ಶೋ
  

ಶ್ರೀನಿವಾಸ ಥಿಯೇಟರ್ ನಲ್ಲಿ 7ಕ್ಕೆ ಶೋ

ಬೆಂಗಳೂರಿನ ಶ್ರೀನಿವಾಸ ಥಿಯೇಟರ್ ಹಾಗೂ ರಾಕ್ ಲೈನ್ ಸಿನಿಮಾಸ್ ನಲ್ಲಿ ಬೆಳಗ್ಗೆ 7 ಗಂಟೆಗೆ ಪ್ರದರ್ಶನ ಆರಂಭವಾಗಲಿದೆ.

ಬಾಕ್ಸ್ ಆಫೀಸ್ ಮೇಲೆ ಭಾರಿ ನಿರೀಕ್ಷೆಗಳು
  

ಬಾಕ್ಸ್ ಆಫೀಸ್ ಮೇಲೆ ಭಾರಿ ನಿರೀಕ್ಷೆಗಳು

ಕಳೆದ ಒಂದು ವರ್ಷದಿಂದ ಯಾವುದೇ ಸಿನಿಮಾಗಳಿಲ್ಲದೆ ಪುನೀತ್ ಅಭಿಮಾನಿಗಳು ಚಡಪಡಿಸಿದ್ದರು. ಈಗ ನಿನ್ನಿಂದಲೇ ಬಿಡುಗಡೆಯಾಗುತ್ತಿದ್ದು ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಅಳಿಸಲಿದೆ ಎಂಬ ನಿರೀಕ್ಷೆಯಲ್ಲಿ ಗಾಂಧಿನಗರ ಇದೆ.

ತೆಲುಗು, ತಮಿಳು ಚಿತ್ರಗಳಿಗೆ ಸೆಡ್ಡು
  

ತೆಲುಗು, ತಮಿಳು ಚಿತ್ರಗಳಿಗೆ ಸೆಡ್ಡು

ತೆಲುಗಿನ 1 ನೇನೊಕ್ಕಡಿನೇ, ಎವಡು ಹಾಗೂ ತಮಿಳಿನ ವೀರಂ, ಜಿಲ್ಲಾ ಚಿತ್ರಗಳಿಗೆ ಹೋಲಿಸಿದರೆ 'ನಿನ್ನಿಂದಲೇ' ಚಿತ್ರಕ್ಕೆ ಭಾರಿ ಬೇಡಿಕೆ ಇದೆ ಎನ್ನುತ್ತಾರೆ ಮಲ್ಟಿಫ್ಲೆಕ್ಸ್ ಥಿಯೇಟರ್ ಮಾಲೀಕರು.

ಆಡಿಯೋಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್
  

ಆಡಿಯೋಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್

ಈಗಾಗಲೆ ಚಿತ್ರದ ಆಡಿಯೋಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ತೆಲುಗಿನ ಜಯಂತ್ ಸಿ ಪರಾಂಜೆ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಅದ್ಭುತ ಸಾಹಸ ಸನ್ನಿವೇಶಗಳು ಈಗಾಗಲೆ ಸ್ಯಾಂಡಲ್ ವುಡ್ ನಲ್ಲಿ ತೀವ್ರ ಕುತೂಹಲ ಕೆರಳಿಸಿವೆ. ಮಣಿಶರ್ಮ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

English summary
Sandalwood Prince Puneet Rajkumar starrer Ninnindale is all set to have a grand release all over the state, tomorrow, January 16. The release of the movie, which was re-scheduled from January 9, is releasing in more than 200 single screens in Karnataka and 20 multiplex theatres in Bangalore.
Please Wait while comments are loading...

Kannada Photos

Go to : More Photos