»   » ಐಡಿಯಾ ಫಿಲಂಫೇರ್ ಪ್ರಶಸ್ತಿಗೆ ಕನ್ನಡ ನಾಮಿನೇಶನ್

ಐಡಿಯಾ ಫಿಲಂಫೇರ್ ಪ್ರಶಸ್ತಿಗೆ ಕನ್ನಡ ನಾಮಿನೇಶನ್

Posted by:
Subscribe to Filmibeat Kannada

ಫಿಲಂಫೇರ್ ಪ್ರಶಸ್ತಿ ಸಮಾರಂಭದ ಸಂಘಟಕರು 2013ರ ಸಾಲಿನ '61ನೇ ದಕ್ಷಿಣ ಐಡಿಯಾ ಫಿಲಂಫೇರ್ ಪ್ರಶಸ್ತಿ'ಗಾಗಿ ಕನ್ನಡದ ನಾಮಿನೇಶನ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ಸೋತು ಹೈರಾಣವಾಗಿದ್ದ ಕನ್ನಡ ಚಿತ್ರರಂಗ ಕಳೆದ ಮೂರ್ಲಾಲ್ಕು ವರ್ಷಗಳಿಂದ ಒಟ್ಟಾರೆ ಆಶಾದಾಯಕ ಸಾಧನೆ ತೋರುತ್ತಿರುವುದು ಉತ್ತಮ ಬೆಳವಣಿಗೆ. ಹೊಸಬರ, ಯುವಕರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುತ್ತಿರುವುದು ವಿಶೇಷ.

ಚಿತ್ರದ ಪ್ರಚಾರ, ಪ್ರೋಮೋಗಳ ಮೇಲೆ ಸ್ಯಾಂಡಲ್ ವುಡ್ ಹೆಚ್ಚಿನ ಗಮನ ಹರಿಸುತ್ತಿರುವುದರಿಂದ ಬಿಡುಗಡೆಗೆ ಮುನ್ನವೇ ಚಿತ್ರ ಹೈಪ್ ಹುಟ್ಟುಹಾಕುವಲ್ಲಿ ಯಶಸ್ವಿಯಾಗುತ್ತಿವೆ.

ಶಿವರಾಜ್ ಕುಮಾರ್, ದರ್ಶನ್, ಗಣೇಶ್, ರಕ್ಷಿತ್ ಶೆಟ್ಟಿ ಅಭಿನಯಿಸಿದ್ದ 2013ರ ಹಿಟ್ ಚಿತ್ರಗಳು ಪ್ರಶಸ್ತಿಯ ವಿವಿಧ ವಿಭಾಗಗಳಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಸ್ಥಾನ ಪಡೆದಿರುವುದು ಗಮನಿಸಬೇಕಾದ ಅಂಶ.

ಪಟ್ಟಿಯಲ್ಲಿ ಸ್ಥಾನ ಪಡೆದ ಅತ್ಯುತ್ತಮ ಚಿತ್ರ, ನಿರ್ದೇಶಕ, ನಾಯಕ ನಟ, ನಟಿ ಮುಂತಾದವರು ಯಾರು ಎನ್ನುವುದನ್ನು ಸ್ಲೈಡಿನಲ್ಲಿ ನೀಡಲಾಗಿದೆ. ಹಾಗೆಯೇ, ನಮ್ಮ ಓದುಗರ ಪ್ರಕಾರ ನಾಮಿನೇಶನ್ ಪಟ್ಟಿಯಲ್ಲಿರುವವರಲ್ಲಿ ಪ್ರಶಸ್ತಿಗೆ ಅತ್ಯಂತ ಸೂಕ್ತ ಆಯ್ಕೆಯಾವುದು?

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ನಟಿ ಪಟ್ಟಿ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ನಟಿ ಪಟ್ಟಿ

ಐಂದ್ರಿತಾ ರೇ - ಭಜರಂಗಿ
ಅಮೂಲ್ಯ - ಶ್ರಾವಣಿ ಸುಬ್ರಮಣ್ಯ
ಮೇಘನಾ ಗಾಂವ್ಕರ್ - ಚಾರ್ಮಿನಾರ್
ರಚಿತಾ ರಾಮ್ - ಬುಲ್ ಬುಲ್
ಶ್ವೇತಾ ಶ್ರೀವಾಸ್ತವ್- ಸಿಂಪಲ್ಲಾಗೊಂದು ಲವ್ ಸ್ಟೋರಿ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ಸಂಗೀತ ನಿರ್ದೇಶಕರ ಪಟ್ಟಿ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ಸಂಗೀತ ನಿರ್ದೇಶಕರ ಪಟ್ಟಿ

ಅರ್ಜುನ್ ಜನ್ಯಾ - ಭಜರಂಗಿ
ಬಿ ಜೆ ಭರತ್ - ಸಿಂಪಲ್ಲಾಗೊಂದು ಲವ್ ಸ್ಟೋರಿ
ಜೆಸ್ಸಿ ಗಿಫ್ಟ್ - ಮೈನಾ
ಜೋಶ್ ಶ್ರೀಧರ್ - ಗೂಗ್ಲಿ
ವಿ ಹರಿಕೃಷ್ಣ - ಶ್ರಾವಣಿ ಸುಬ್ರಮಣ್ಯ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ಪೋಷಕ ನಟರ ಪಟ್ಟಿ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ಪೋಷಕ ನಟರ ಪಟ್ಟಿ

ಅಚ್ಯುತ್ ಕುಮಾರ್ - ಲೂಸಿಯಾ
ಅಂಬರೀಶ್ - ಬುಲ್ ಬುಲ್
ರಂಗಾಯಣ ರಘು - ಜಯಮ್ಮನ ಮಗ
ಸಾಯಿಕುಮಾರ್ - ಬೃಂದಾವನ
ಶರತ್ ಲೋಹಿತಾಶ್ವ - ಕಡ್ಡಿಪುಡಿ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ಪೋಷಕ ನಟಿಯರ ಪಟ್ಟಿ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ಪೋಷಕ ನಟಿಯರ ಪಟ್ಟಿ

ಕಲ್ಯಾಣಿ - ಜಯಮ್ಮನ ಮಗ
ಮಿಲನ - ಬೃಂದಾವನ
ಪರುಲ್ ಯಾದವ್ - ಬಚ್ಚನ್
ರುಕ್ಮಿಣಿ ವಿಜಯಕುಮಾರ್ - ಭಜರಂಗಿ
ತಾರಾ - ಶ್ರಾವಣಿ ಸುಬ್ರಮಣ್ಯ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ಗಾಯಕರ ಪಟ್ಟಿ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ಗಾಯಕರ ಪಟ್ಟಿ

ಪೂರ್ಣಚಂದ್ರ ತೇಜಸ್ವಿ - ಲೂಸಿಯ (ತಿನ್ಬೇಡ ಕಮ್ಮಿ)
ಶಾನ್ - ಶ್ರಾವಣಿ ಸುಬ್ರಮಣ್ಯ (ಕಣ್ಣಲ್ಲೇ ಕಣ್ಣಿಟ್ಟು)
ಶಂಕರ್ ಮಹಾದೇವನ್ - ಭಜರಂಗಿ (ಶ್ರೀ ಆಂಜನೇಯಂ ಪ್ರಸನ್ನಾಂಜನೇಯಂ)
ಸೋನು ನಿಗಂ - ಸಿಂಪಲ್ಲಾಗೊಂದು ಲವ್ ಸ್ಟೋರಿ ( ಬಾನಲ್ಲಿ ಬದಲಾಗೋ)
ವಿಜಯ್ ಪ್ರಕಾಶ್ - ವಿಕ್ಟರಿ (ಖಾಲಿ ಕ್ವಾಟ್ರು ಬಾಟಲ್)

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ಗಾಯಕಿಯರ ಪಟ್ಟಿ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ಗಾಯಕಿಯರ ಪಟ್ಟಿ

ಮಂಜುಳಾ ಗುರುರಾಜ್ - ಶ್ರಾವಣಿ ಸುಬ್ರಮಣ್ಯ (ಆಕಳ್ ಬೆಣ್ಣೆ)
ಸೌಮ್ಯಾ ರಾವ್ - ಸಿಂಪಲ್ಲಾಗೊಂದು ಲವ್ ಸ್ಟೋರಿ (ಕರಗಿದ ಬಾನಲ್ಲಿ)
ಸಚಿನಾ ಹೆಗ್ಗಾರ್ - ಕಡ್ಡಿಪುಡಿ (ಹೆದ್ರಬ್ಯಾಡೇ)
ಶ್ರೇಯಾ ಘೋಷಾಲ್ - ಮೈನಾ (ಮೊದಲ ಮಳೆಯಂತೆ)
ಅನುರಾಧ ಭಟ್ - ಭಜರಂಗಿ (ಶ್ರೀಕೃಷ್ಣ)

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ನಿರ್ದೇಶಕರ ಪಟ್ಟಿ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ನಿರ್ದೇಶಕರ ಪಟ್ಟಿ

ಎ ಹರ್ಷ - ಭಜರಂಗಿ
ಸುನಿ - ಸಿಂಪಲ್ಲಾಗೊಂದು ಲವ್ ಸ್ಟೋರಿ
ಎಂ ಡಿ ಶ್ರೀಧರ್ - ಬುಲ್ ಬುಲ್
ನಾಗಶೇಖರ್ - ಮೈನಾ
ಪವನ್ ಕುಮಾರ್ - ಲೂಸಿಯಾ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ಸಾಹಿತಿಗಳ ಪಟ್ಟಿ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ಸಾಹಿತಿಗಳ ಪಟ್ಟಿ

ಜಯಂತ್ ಕಾಯ್ಕಿಣಿ - ಭಜರಂಗಿ (ಜಿಯಾ ತೇರಿ ಜಿಯಾ ಮೆರಿ)
ಕವಿರಾಜ್ - ಮೈನಾ (ಮೊದಲ ಮಳೆಯಂತೆ)
ಎಂ ಕೃಷ್ಣೇಗೌಡ - ಶ್ರಾವಣಿ ಸುಬ್ರಮಣ್ಯ (ಆಕಳ್ ಬೆಣ್ಣೆ)
ಸಿದ್ದು ಕೋಡಿಪುರ - ಸಿಂಪಾಲ್ಲಾಗೊಂದು ಲವ್ ಸ್ಟೋರಿ ( ಬಾನಲ್ಲಿ ಬದಲಾಗೋ)
ವಿ ನಾಗೇಂದ್ರ ಪ್ರಸಾದ್ - ಶ್ರಾವಣಿ ಸುಬ್ರಮಣ್ಯ (ಕಣ್ಣಲ್ಲೇ ಕಣ್ಣಿಟ್ಟು)

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ಚಿತ್ರಗಳ ಪಟ್ಟಿ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ಚಿತ್ರಗಳ ಪಟ್ಟಿ

ಭಜರಂಗಿ
ಬುಲ್ ಬುಲ್
ಮೈನಾ
ಶ್ರಾವಣಿ ಸುಬ್ರಮಣ್ಯ
ಸಿಂಪಾಲ್ಲಾಗೊಂದು ಲವ್ ಸ್ಟೋರಿ

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ನಟರು

ಫಿಲಂಫೇರ್ 2013ರ ಸಾಲಿನ ಅತ್ಯುತ್ತಮ ನಟರು

ಗಣೇಶ್ - ಶ್ರಾವಣಿ ಸುಬ್ರಮಣ್ಯ
ಪ್ರೇಮ್ - ಚಾರ್ಮಿನಾರ್
ಶಿವರಾಜ್ ಕುಮಾರ್ - ಭಜರಂಗಿ
ಸುದೀಪ್ - ಬಚ್ಚನ್
ಯಶ್ - ಗೂಗ್ಲಿ

English summary
Kannada Nominations List For 61st Idea Filmfare South Awards Released.
Please Wait while comments are loading...

Kannada Photos

Go to : More Photos