»   » ಇಡೀ ಸ್ಯಾಂಡಲ್ ವುಡ್ ತಲೆ ತಗ್ಗಿಸುವಂತೆ ಮಾಡಿದ ನಿರ್ಮಾಪಕ ಈತ.!

ಇಡೀ ಸ್ಯಾಂಡಲ್ ವುಡ್ ತಲೆ ತಗ್ಗಿಸುವಂತೆ ಮಾಡಿದ ನಿರ್ಮಾಪಕ ಈತ.!

Posted by:
Subscribe to Filmibeat Kannada

''ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇಲ್ಲ'' ಅಂತ ವಾದ ಮಾಡುವವರು ಇಂದು ಬೆಳಕಿಗೆ ಬಂದಿರುವ ಒಂದು ಘಟನೆಯತ್ತ ಒಮ್ಮೆ ತಿರುಗಿ ನೋಡಬೇಕು. ಯಾಕಂದ್ರೆ, ಇಡೀ ಸ್ಯಾಂಡಲ್ ವುಡ್ ತಲೆ ತಗ್ಗಿಸುವಂತೆ ಓರ್ವ ಕನ್ನಡ ನಿರ್ಮಾಪಕ ಮಾಡಿದ್ದಾನೆ.

''ಪಾತ್ರ ನೀಡುವೆ'' ಅಂತ ಯುವ ನಟಿಗೆ ಆಸೆ ತೋರಿಸಿ, ಮಂಚಕ್ಕೆ ಆಹ್ವಾನ ನೀಡಿದ್ದ ಕನ್ನಡ ಚಿತ್ರ ನಿರ್ಮಾಪಕ ಇಂದು ಪೊಲೀಸರ ಅತಿಥಿಯಾಗಿದ್ದಾನೆ.!

ಯಾರು ಆ ಕಿಡಿಗೇಡಿ ನಿರ್ಮಾಪಕ.?

ಇಂದು ಯುವ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವವರು 2014 ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ 'ಪ್ರೀತಿ ಮಾಯೆ ಹುಷಾರು' ಎಂಬ ಕನ್ನಡ ಚಿತ್ರದ ನಿರ್ಮಾಪಕ ವೀರೇಶ್.ವಿ. [ನಾಚಿಕೆಗೇಡು: ಕನ್ನಡ ಚಿತ್ರರಂಗದಲ್ಲಿ 'ಕಾಸ್ಟಿಂಗ್ ಕೌಚ್'! ಸಾಕ್ಷಿ ಬೇಕಾ?]

ಘಟನೆ ಹಿನ್ನಲೆ ಏನು.?

ಹೊಸ ಚಿತ್ರವೊಂದರ ನಿರ್ಮಾಣ ಮಾಡುತ್ತಿರುವ ವೀರೇಶ್.ವಿ, ''ಅ ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಕೊಡಿಸುವೆ'' ಅಂತ ಯುವ ನಟಿಗೆ ಆಸೆ ತೋರಿಸಿದ್ದಾನೆ. ಸಾಲದಕ್ಕೆ ತಮ್ಮ ಮನೆಗೆ ಬರುವಂತೆ ಆ ಯುವ ನಟಿಗೆ ಆಹ್ವಾನ ನೀಡಿದ್ದಾನೆ. [ಕಾಮುಕ ನಿರ್ದೇಶಕನ ಕಿರುಕುಳದಿಂದ ಬೇಸತ್ತ ನಟಿ ಆತ್ಮಹತ್ಯೆಗೆ ಯತ್ನ]

ಮನೆಯಲ್ಲಿ ಲೈಂಗಿಕ ಕಿರುಕುಳ

ಮನೆಗೆ ಆ ಯುವ ನಟಿ ಬಂದ್ಮೇಲೆ, ಅಸಭ್ಯವಾಗಿ ನಿರ್ಮಾಪಕ ವೀರೇಶ್ ವರ್ತಿಸಿದ್ದಾನೆ. ಧೈರ್ಯ ಮಾಡಿದ ಆ ಯುವ ನಟಿ, ನಿರ್ಮಾಪಕನನ್ನ ರೂಮ್ ನಲ್ಲಿ ಕೂಡಿ ಹಾಕಿ, ಮನೆಯಿಂದ ಹೊರಬಂದು ಅಕ್ಕ-ಪಕ್ಕದ ಸಹಾಯದವರಿಂದ ತಮ್ಮ ಕುಟುಂಬದವರಿಗೆ ಮಾಹಿತಿ ನೀಡಿದ್ದಾಳೆ. [ಬಹುಭಾಷಾ ನಟಿ ಅಪಹರಣ ಬಳಿಕ ಹೊಸ ಬಾಂಬ್ ಸಿಡಿಸಿದ ವರಲಕ್ಷ್ಮಿ ಶರತ್ ಕುಮಾರ್.!]

ನಿರ್ಮಾಪಕನಿಗೆ ಕುಟುಂಬಸ್ಥರಿಂದ ಗೂಸಾ

ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ನಿರ್ಮಾಪಕ ವೀರೇಶ್ ಗೆ ಗೂಸಾ ಕೊಟ್ಟಿದ್ದಾರೆ. ಜೊತೆಗೆ ಪೊಲೀಸ್ ಕಂಪ್ಲೇಂಟ್ ಕೂಡ ದಾಖಲಿಸಿದ್ದಾರೆ. [ಸ್ಯಾಂಡಲ್ ವುಡ್ ನಲ್ಲಿ 'ಲೈಂಗಿಕ ಕಿರುಕುಳ' ಬಗ್ಗೆ ಕವಿತಾ ಲಂಕೇಶ್ ಪ್ರತಿಕ್ರಿಯೆ]

ವೀರೇಶ್ ಬಂಧನ

ದೂರು ಆಧರಿಸಿ ಇಂದು ಬೆಂಗಳೂರು ಪೊಲೀಸರು ನಿರ್ಮಾಪಕ ವೀರೇಶ್ ನ ಬಂಧಿಸಿದ್ದಾರೆ.

English summary
Kannada Producer Viresh is arrested for allegedly molesting a girl while promising her role in his upcoming film.
Please Wait while comments are loading...

Kannada Photos

Go to : More Photos