twitter
    For Quick Alerts
    ALLOW NOTIFICATIONS  
    For Daily Alerts

    ಮೆಜೆಸ್ಟಿಕ್ನಲ್ಲಿರುವ 'ಕಪಾಲಿ' ಚಿತ್ರಮಂದಿರ ಕ್ಲೋಸ್!

    By Bharath Kumar
    |

    ಬೆಂಗಳೂರಿನ ಮೆಜೆಸ್ಟಿಕ್ ಬಳಿ ಸುಬೇದಾರ್ ಛತ್ರಂ ರಸ್ತೆಯಲ್ಲಿರುವ ಸುಪ್ರಸಿದ್ಧ 'ಕಪಾಲಿ' ಚಿತ್ರಮಂದಿರ ಶೀಘ್ರದಲ್ಲೇ ಕಣ್ಮರೆಯಾಗಲಿದೆ. ಎಪ್ಪತ್ತರ ದಶಕದಲ್ಲಿ ತಲೆ ಎತ್ತಿದ್ದ ಬೃಹತ್ ಚಿತ್ರಮಂದಿರ ಈಗ ನೆಲಸಮವಾಗುತ್ತಿದೆ ಎನ್ನಲಾಗುತ್ತಿದೆ. ಈ ಮೂಲಕ ಕನ್ನಡ ಚಿತ್ರರಂಗದ ಹಿರಿಮೆಯಂತಿದ್ದ 'ಕಪಾಲಿ' ಇನ್ನು ಮುಂದೆ ನೆನಪು ಮಾತ್ರ.[ಸಿನಿಪ್ರೇಮಿಗಳ ಕಪಾಲಿಗೆ ಹೊಡೆದ ಸಿಂಡಿಕೇಟ್ ಬ್ಯಾಂಕ್]

    ಬೆಂಗಳೂರಿನ ಪ್ರಮುಖ ಚಿತ್ರಮಂದಿರಳಾದ ಸಂಗಮ್, ಮೆಜೆಸ್ಟಿಕ್, ತ್ರಿಭುವನ್, ಸಾಗರ್, ಕಲ್ಪನಾ, ಕೈಲಾಷ್, ಕೆಂಪೆಗೌಡ ಇತಿಹಾಸ ಪುಟ ಸೇರಿವೆ. ಈಗ 'ಕಪಾಲಿ' ಚಿತ್ರಮಂದಿರ ಕೂಡ ಈ ಸಾಲಿಗೆ ಸೇರುತ್ತಿದೆ.. ಮುಂದೆ ಓದಿ......

    'ಕಪಾಲಿ' ಚಿತ್ರಮಂದಿರ ಕ್ಲೋಸ್!

    'ಕಪಾಲಿ' ಚಿತ್ರಮಂದಿರ ಕ್ಲೋಸ್!

    ಏಷ್ಯಾದ ಅತೀ ದೊಡ್ಡ ಥಿಯೇಟರ್, ವಿಶ್ವದ 2ನೇ ಅತೀದೊಡ್ಡ ಚಿತ್ರಮಂದಿರ ಅಂತ ಹೆಸರು ಮಾಡಿದ ಬೆಂಗಳೂರಿನ ಕಪಾಲಿ ಥಿಯೇಟರ್ ಈಗ ತನ್ನ ಕೊನೆ ದಿನಗಳನ್ನ ಎಣಿಸುತ್ತಿದೆ. ಸರಿ ಸುಮಾರು 50 ವರ್ಷಗಳು ಸಿನಿರಸಿಕರನ್ನ ರಂಜಿಸಿದ ಚಿತ್ರಮಂದಿರ ಶೀಘ್ರದಲ್ಲೇ ನೆಲಸಮವಾಗಲಿದೆ ಎಂದು ಹೇಳಲಾಗಿದೆ.

    'ಕಪಾಲಿ' ಜಾಗದಲ್ಲಿ 'ಮಲ್ಟಿಫ್ಲೆಕ್ಸ್'

    'ಕಪಾಲಿ' ಜಾಗದಲ್ಲಿ 'ಮಲ್ಟಿಫ್ಲೆಕ್ಸ್'

    'ಕಪಾಲಿ' ಇರುವ ಜಾಗದಲ್ಲಿ ಬೃಹತ್ ಮಾಲ್ ನಿರ್ಮಿಸುವ ಯೋಜನೆ ಚಿತ್ರಮಂದಿರದ ಮಾಲೀಕ ಡಾ. ರಾಮಚಂದ್ರೇಗೌಡರು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ 'ಕಪಾಲಿ' ನೆಲಸಮಗೊಳಿಸಿದ ನಂತರ ಅಲ್ಲಿ ಮಲ್ಟಿಫ್ಲೆಕ್ಸ್ ತಲೆ ಎತ್ತಲಿದೆ.

    ಸ್ಟಾರ್ ಗಳ ನೆಚ್ಚಿನ ಚಿತ್ರಮಂದಿರ

    ಸ್ಟಾರ್ ಗಳ ನೆಚ್ಚಿನ ಚಿತ್ರಮಂದಿರ

    ಕಪಾಲಿ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಮೊದಲ ಚಿತ್ರ ‘ದಿಸ್ ಇಸ್ ಸಿನೆರಮಾ'. ಡಾ. ರಾಜ್ ಕುಮಾರ್ ಅಭಿನಯದ 'ಮಣ್ಣಿನ ಮಗ' ಚಿತ್ರ ಕಪಾಲಿಯಲ್ಲಿ ಶತದಿನೋತ್ಸವ ಆಚರಿಸಿದ ಮೊದಲ ಚಿತ್ರವಾಗಿತ್ತು. ಪ್ರೇಮಲೋಕದ ಕ್ರೇಜಿಸ್ಟಾರ್ ರವಿಚಂದ್ರನ್‍ ಅವರಿಗೆ ಈ ಥಿಯೇಟರ್ ತುಂಬಾನೆ ಲಕ್ಕಿ ಎನಿಸಿಕೊಂಡಿತ್ತು. ಭಾರತೀಯ ಚಿತ್ರರಂಗದ ಎವರ್ ಗ್ರೀನ್ ಚಿತ್ರ `ಶೋಲೆ' ಕಪಾಲಿಯಲ್ಲಿ 6 ತಿಂಗಳು ಯಶಸ್ವಿ ಪ್ರದರ್ಶನ ಕಂಡಿತ್ತು. ಶಿವರಾಜ್ ಕುಮಾರ್ ಅವರ 'ಓಂ' ಚಿತ್ರ ಅತಿ ದೊಡ್ಡ ಯಶಸ್ಸು ಕಂಡಿದ್ದು ಕಪಾಲಿಯಲ್ಲಿ.

    1968ರಲ್ಲಿ ಸ್ಥಾಪನೆ ಆದ 'ಕಪಾಲಿ'

    1968ರಲ್ಲಿ ಸ್ಥಾಪನೆ ಆದ 'ಕಪಾಲಿ'

    1968 ರಲ್ಲಿ ಫೆಬ್ರವರಿ 16 ರಂದು 'ಕಪಾಲಿ' ಚಿತ್ರವನ್ನ ಸ್ಥಾಪಿಸಲಾಗಿತ್ತು. ಮಾಜಿ ಪ್ರಧಾನಿ ಮತ್ತು ಅಂದಿನ ಕೇಂದ್ರ ಹಣಕಾಸು ಸಚಿವರಾಗಿದ್ದ ಮೋರಾರ್ಜಿ ದೇಸಾಯಿ ಅವರು ಉದ್ಘಾಟಿಸಿದ್ದರು.

    ದೇಶದ ಮೊದಲ ಸಿನಿಮಾ ಚಿತ್ರಮಂದಿರ

    ದೇಶದ ಮೊದಲ ಸಿನಿಮಾ ಚಿತ್ರಮಂದಿರ

    'ಕಪಾಲಿ' ಚಿತ್ರದ ಉದ್ಘಾಟನೆಯಾದಾಗ ಇದು ದೇಶದ ಮೊದಲ ಹಾಗೂ ವಿಶ್ವದ ಮೂರನೇ ಸಿನಿಮಾ ಚಿತ್ರಮಂದಿರ ಎನಿಸಿಕೊಂಡಿತ್ತು. ಅವತ್ತಿಗೆ ಪಾಕಿಸ್ತಾನದ ಕರಾಚಿ, ಶ್ರೀಲಂಕಾದ ಕೊಲಂಬೊ ಬಿಟ್ಟರೇ ಸಿನಿಮಾ ಚಿತ್ರಮಂದಿರ ಇದ್ದುದ್ದು ಬೆಂಗಳೂರಿನಲ್ಲೇ.

    ಅತಿ ದೊಡ್ಡ ಚಿತ್ರಮಂದಿರ

    ಅತಿ ದೊಡ್ಡ ಚಿತ್ರಮಂದಿರ

    'ಕಪಾಲಿ' ಚಿತ್ರಮಂದಿರದಲ್ಲಿ ಒಟ್ಟು 1465 ಸೀಟುಗಳಿವೆ. ಇಷ್ಟೊಂದು ಸೀಟುಗಳು ಬೇರೆ ಯಾವುದೇ ಏಕಪರದೆ ಚಿತ್ರಮಂದಿರದಲ್ಲಿಲ್ಲ. 85 ಬೈ 32 ಸುತ್ತಳತೆಯ ದೊಡ್ಡ ಪರದೆಯನ್ನ ಹೊಂದಿದೆ. 60 ಸಾವಿರ ಚದುರ ಅಡಿಯ ವಿಸ್ತರಣೆಯನ್ನ ಈ ಚಿತ್ರಮಂದಿರತ ಹೊಂದಿದೆ. ವಿಶೇಷ ಅಂದ್ರೆ, ಏಕಕಾಲದಲ್ಲಿ ಮೂರು ಪ್ರೊಜೆಕ್ಟರ್ ಗಳನ್ನ ಕಪಾಲಿಯಲ್ಲಿ ಬಳಕೆ ಮಾಡಲಾಗುತ್ತಿತ್ತು.

    ಕೆ.ಜಿ ರಸ್ತೆಯಲ್ಲಿದ್ದ ಚಿತ್ರಗಳು ಖಾಲಿ!

    ಕೆ.ಜಿ ರಸ್ತೆಯಲ್ಲಿದ್ದ ಚಿತ್ರಗಳು ಖಾಲಿ!

    ಸಂಗಮ್, ಮೆಜೆಸ್ಟಿಕ್, ಕೆಂಪೇಗೌಡ, ಹಿಮಾಲಯ, ತ್ರಿಭುವನ್, ಸಾಗರ್, ಕೈಲಾಶ್, ಕಲ್ಪನಾ ಈಗಾಗಲೇ ನೆಲಸಮವಾಗಿವೆ. ಈಗ ಅದೇ ಸಾಲಿಗೆ ಹೊಸ ಸೇರ್ಪಡೆ ಕಪಾಲಿ.

    English summary
    The Second Biggest Cinerama Theater in Asia Kapali is Ready for Demolition in One Month Time.
    Sunday, April 9, 2017, 13:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X