»   » ಸುದೀಪ್ ಬುಲ್ಡೋಜರ್ಸ್ ತಂಡಕ್ಕೆ ಕಠಿಣ ಸವಾಲು

ಸುದೀಪ್ ಬುಲ್ಡೋಜರ್ಸ್ ತಂಡಕ್ಕೆ ಕಠಿಣ ಸವಾಲು

Posted by:
Subscribe to Filmibeat Kannada

ಇಷ್ಟು ದಿನಗಳ ಕಾಲ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಉತ್ತಮ ಆಟವನ್ನು ಆಡುತ್ತಾ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದೆ. ಈಗ ಫೆಬ್ರವರಿ 15ರಂದು ಮತ್ತೊಂದು ಕಠಿಣ ಸವಾಲನ್ನು ಎದುರಿಸಲು ಸಜ್ಜಾಗಿದೆ.

ಇದೇ ಶನಿವಾರ (ಫೆ.15) ಹೈದರಾಬಾದಿನಲ್ಲಿ ತೆಲುಗು ವಾರಿಯರ್ಸ್ ತಂಡದೊಂದಿಗೆ ಮುಖಾಮುಖಿಯಾಗಲಿದೆ ಬುಲ್ಡೋಜರ್ಸ್ ತಂಡ. ಅಂದು ಸಂಜೆ 7 ರಿಂದ 11 ಗಂಟೆಯ ತನಕ ನಡೆಯುವ ಆಟವನ್ನು ಲಾಲ್ ಬಹದ್ದೂರ್ ಸ್ಟೇಡಿಯಂನಲ್ಲಿ ಸವಿಯಬಹುದು.

ಈ ಪಂದ್ಯಾವಳಿಯನ್ನು ಸುವರ್ಣ ವಾಹಿನಿ ನೇರ ಪ್ರಸಾರ ಮಾಡಲಿದೆ. ಇದುವರೆಗೂ ತೆಲುಗು ವಾರಿಯರ್ಸ್ ತಂಡ ಮೂರು ಪಂದ್ಯಗಳನ್ನು ಆಡಿದ್ದು ಎರಡನ್ನು ಗೆದ್ದಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಬುಲ್ಡೋಜರ್ಸ್ ಗಿಂತಲೂ ಕೆಳಗಿದೆ.

ಸುಭದ್ರ ಸ್ಥಾನದಲ್ಲಿರುವ ಕರ್ನಾಟಕ ಬುಲ್ಡೋಜರ್ಸ್

ಸುಭದ್ರ ಸ್ಥಾನದಲ್ಲಿರುವ ಕರ್ನಾಟಕ ಬುಲ್ಡೋಜರ್ಸ್

ಇನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದಿದ್ದು ಒಂದು ಪಂದ್ಯ ಟೈ ಆಗಿದೆ. ನೆಟ್ ರನ್ ರೇಟ್ ಹಾಗೂ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಸುಭದ್ರವಾಗಿದೆ. ತೆಲುಗು ವಾರಿಯರ್ಸ್ ತಂಡಕ್ಕೆ ಹೋಂ ಗ್ರೌಂಡ್ ಆದ ಕಾರಣ ಒಂದಷ್ಟು ಹೆಚ್ಚಿನ ಬಲ ಸಿಗಬಹುದು.

ಕಲಾತ್ಮಕ ಬ್ಯಾಟ್ಸ್ ಮನ್ ಗುಂಡಪ್ಪ ಮಾರ್ಗದರ್ಶನ

ಕಲಾತ್ಮಕ ಬ್ಯಾಟ್ಸ್ ಮನ್ ಗುಂಡಪ್ಪ ಮಾರ್ಗದರ್ಶನ

ಈ ಒಂದು ಕಠಿಣ ಸವಾಲನ್ನು ಕಿಚ್ಚ ಸುದೀಪ್ ತಂಡ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಕಾದುನೋಡಬೇಕು. ಭಾರತದ ಕ್ರಿಕೆಟ್ ತಂಡದಲ್ಲಿ ಕಲಾತ್ಮಕ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿರುವ ಗುಂಡಪ್ಪ ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಕಿಚ್ಚ ಸುದೀಪ್ ತಂಡ ಸಾಕಷ್ಟು ಬೆವರರಿಸಿದೆ.

ಪಕ್ಕಾ ಪ್ರೊಫೆಷನಲ್ಸ್ ತರಹ ಆಡುತ್ತಿರುವ ತಂಡ

ಪಕ್ಕಾ ಪ್ರೊಫೆಷನಲ್ಸ್ ತರಹ ಆಡುತ್ತಿರುವ ತಂಡ

ಪಕ್ಕಾ ಪ್ರೊಫೆಷನಲ್ಸ್ ತರಹ ಕಿಚ್ಚ ಸುದೀಪ್ ತಂಡ ಆಡುತ್ತಿದ್ದು ಎಲ್ಲರ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ. ಪ್ರದೀಪ್, ರಾಹುಲ್, ಧ್ರುವ ಶರ್ಮಾ, ಭಾಸ್ಕರ್, ಜೆಕೆ ಈಗಾಗಲೆ ತಮ್ಮ ತಾಕತ್ತನ್ನು ತೋರಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂಚೂರು ಪಿಕಪ್ ಆಗಲೇಬೇಕಾಗಿದೆ.

ಅತೀವ ಕುತೂಹಲ ಕೆರಳಿಸಿರುವ ಪಂದ್ಯಾವಳಿ

ಅತೀವ ಕುತೂಹಲ ಕೆರಳಿಸಿರುವ ಪಂದ್ಯಾವಳಿ

ಇನ್ನು ವಿಕ್ಟರಿ ವೆಂಕಟೇಶ್ ನಾಯಕತ್ವದ ತೆಲುಗು ವಾರಿಯರ್ಸ್ ತಂಡದಲ್ಲಿ ತರುಣ್, ಅಕ್ಕಿನೇನಿ ಅಖಿಲ್, ಪ್ರಿನ್ಸ್ ಮುಂತಾದವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಒಟ್ಟಾರೆಯಾಗಿ ಹೈದರಾಬಾದ್ ಪಂದ್ಯಾವಳಿ ಅತೀವ ಕುತೂಹಲ ಕೆರಳಿಸಿದೆ.

ಬುಲ್ಡೋಜರ್ಸ್ ಎರಡು ಪಂದ್ಯ ವಿನ್ ಒಂದು ಟೈ

ಬುಲ್ಡೋಜರ್ಸ್ ಎರಡು ಪಂದ್ಯ ವಿನ್ ಒಂದು ಟೈ

ವೀರ್ ಮರಾಠಿಗರನ್ನು ಬಗ್ಗುಬಡಿದಿದ್ದ ಬುಲ್ಡೋಜರ್ಸ್ ತಂಡ ಚೆನ್ನೈ ರೈನೋಸ್ ವಿರುದ್ಧದ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಅದಕ್ಕೂ ಮುನ್ನ ಬೆಂಗಾಲ್ ಟೈಗರ್ಸ್ ವಿರುದ್ಧ ಸುನಾಯಾಸವಾಗಿ ಜಯಭೇರಿ ಬಾರಿಸಿತ್ತು.

English summary
Kichcha Sudeep lead Karnataka Bulldozers team facing tough challenge ahead on 15th February, 2014. Sudeep team facing Telugu Warriors in Hyderabad at Lal Bahadur Shastri Stadium.
Please Wait while comments are loading...

Kannada Photos

Go to : More Photos