twitter
    For Quick Alerts
    ALLOW NOTIFICATIONS  
    For Daily Alerts

    ಯೋಧ ಹನುಮಂತಪ್ಪ ಕುಟುಂಬಕ್ಕೆ KFCC ಯಿಂದ ಪರಿಹಾರ ಧನ

    By Suneetha
    |

    ಸಿಯಾಚಿನ್ ನ ನಿರ್ಗಲ್ಲಿನಲ್ಲಿ ಸಿಲುಕಿ ಹುತಾತ್ಮರಾಗಿದ್ದ ಕರ್ನಾಟಕ ಮೂಲದ 'ಅಮರ' ಯೋಧ ಹನುಮಂತಪ್ಪ ಅವರ ಕುಟುಂಬಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಆರ್ಥಿಕ ಧನ ಸಹಾಯ ಮಾಡಲು ನಿರ್ಧರಿಸಿದೆ.

    ಕಳೆದ ಶುಕ್ರವಾರ (ಫೆಬ್ರವರಿ 12) ಮಧ್ಯಾಹ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಅಕಾಡೆಮಿ ಮಂಡಳಿಯಲ್ಲಿ ವೀರ ಯೋಧ ಹನುಮಂತಪ್ಪ ಅವರಿಗೆ ಶ್ರಧ್ದಾಂಜಲಿ ಸಭೆ ನಡೆದಿದ್ದು, ಕೆ.ಎಫ್.ಸಿ.ಸಿ ಅಧ್ಯಕ್ಷ ಸಾ.ರಾ ಗೋವಿಂದು ಅವರ ನೇತೃತ್ವದಲ್ಲಿ ಸಭೆ ನಡೆಯಿತು.[ವೀರ ಯೋಧ ಹನುಮಂತಪ್ಪರ ಆತ್ಮಕ್ಕೆ ಶಾಂತಿ ಕೋರಿದ ಚಿತ್ರರಂಗದ ತಾರೆಯರು]

    ಈ ಸಂದರ್ಭದಲ್ಲಿ ವೀರ ಮರಣವನ್ನಪ್ಪಿದ ಯೋಧ ಹನುಮಂತಪ್ಪ ಅವರ ಕುಟುಂಬಕ್ಕೆ ಸುಮಾರು ಒಂದು ಲಕ್ಷ ರೂಪಾಯಿ ಪರಿಹಾರ ಧನವನ್ನು ನೀಡಲು ತೀರ್ಮಾನ ಮಾಡಲಾಗಿದೆ.

    ಚಲನಚಿತ್ರ ಮಂಡಳಿಯ ಸದಸ್ಯರು ಯೋಧ ಹನುಮಂತಪ್ಪ ಅವರ ಗ್ರಾಮಕ್ಕೆ ಸದ್ಯದಲ್ಲೇ ತೆರಳಲಿದ್ದು, ಅವರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಮೊತ್ತದ ಚೆಕ್ ವಿತರಿಸಿ ವಾಪಸಾಗಲಿದೆ.[ಹನುಮಂತಪ್ಪ ಕುಟುಂಬಕ್ಕೆ 25 ಲಕ್ಷ ಪರಿಹಾರ]

    ಹುತಾತ್ಮರಾದ ಹನುಮಂತಪ್ಪ ಅವರ ಶ್ರಧ್ದಾಂಜಲಿ ಸಭೆಯಲ್ಲಿ ಸಾರಾ ಗೋವಿಂದು, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಉಮೇಶ್ ಬಣಕಾರ್, ಎಂ.ಜಿ.ರಾಮಮೂರ್ತಿ, ಎಂ.ಎನ್.ಸುರೇಶ್, ಕೆ.ಸಿ.ಎನ್ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಕಮ್ ಅಧ್ಯಕ್ಷ ಸಾ.ರಾ ಗೋವಿಂದು, 'ಹನುಮಂತಪ್ಪ ಅವರಂತಹ ಯೋಧರು ಕನ್ನಡ ಮಣ್ಣಿನವರು ಎಂಬುದು ನಮ್ಮ ಹೆಮ್ಮೆ. ಅವರ ದಿಟ್ಟತನದ ಹೋರಾಟ ಮತ್ತು ದೇಶಸೇವೆ ಎಂದಿಗೂ ಅಮರವಾಗಿರುತ್ತದೆ' ಎಂದು ನುಡಿದರು.[ರಿಯಲ್ ಸ್ಟಾರ್ ಉಪೇಂದ್ರ ಮೇಲೆ ಏನಿದು ದೊಡ್ಡ ಅಪವಾದ?]

    ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ, 'ಹನುಮಂತಪ್ಪ ಕೊಪ್ಪದ ಅವರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದು, ಬೆಟ್ಟದೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಸಹಕಾರ ನೀಡಲಾಗುತ್ತದೆ. ಹನುಮಂತಪ್ಪ ಅವರ ಪತ್ನಿಗೆ ಸರ್ಕಾರಿ ನೌಕರಿ, ಬೆಟ್ಟದೂರಿನಲ್ಲಿ ನಾಲ್ಕು ಎಕರೆ ಜಮೀನು, ಮತ್ತು ಹುಬ್ಬಳ್ಳಿಯಲ್ಲಿ ಒಂದು ನಿವೇಶನ ನೀಡುವುದಾಗಿ' ಭರವಸೆ ನೀಡಿದ್ದಾರೆ.

    English summary
    Karnataka Chalanachitra Academy President S Ra Govindu announces Rs 1 lakh compensation to the family members of Lance Naik Hanumanthappa Koppad who died in Delhi RR hospital on Thursday.
    Monday, February 15, 2016, 10:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X