»   » ಕಿಚ್ಚನ ಪ್ರಕಾರ ಪ್ರೇಮ್ ನಿರ್ದೇಶನದಲ್ಲಿ 'ಪ್ಲಸ್-ಮೈನಸ್' ಏನು?

ಕಿಚ್ಚನ ಪ್ರಕಾರ ಪ್ರೇಮ್ ನಿರ್ದೇಶನದಲ್ಲಿ 'ಪ್ಲಸ್-ಮೈನಸ್' ಏನು?

Posted by:
Subscribe to Filmibeat Kannada

ಕನ್ನಡದ ಶೋ ಮ್ಯಾನ್, ಗಿಮಿಕ್ ಡೈರೆಕ್ಟರ್, ರಾ ಡೈರೆಕ್ಟರ್, ಪಕ್ಕಾ ಕಮರ್ಷಿಯಲ್ ಡೈರೆಕ್ಟರ್ ಅಂತೆಲ್ಲ ಕರೆಸಿಕೊಳ್ಳುವ ಜೋಗಿ ಪ್ರೇಮ್ ಅವರ, ನಿರ್ದೇಶನದಲ್ಲಿ ಮೈನಸ್ ಪಾಯಿಂಟ್? ಪ್ಲಸ್ ಪಾಯಿಂಟ್ ಇದೆಯಂತೆ. ಇದನ್ನ ಕಿಚ್ಚ ಸುದೀಪ್ ಗುರುತಿಸಿದ್ದಾರೆ.['ಫೇಸ್ ಬುಕ್ ಲೈವ್'ನಲ್ಲಿ ಸುದೀಪ್: 'ದಿ ವಿಲನ್' ಕಥೆ ಬಿಚ್ಚಿಟ್ಟ ಕಿಚ್ಚ]

ಹೌದು, ದರ್ಶನ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅಂತಹ ದೊಡ್ಡ ನಟರಿಗೆ ಆಕ್ಷನ್ ಕಟ್ ಹೇಳಿದ್ದ ಪ್ರೇಮ್, ಜೊತೆ ಸುದೀಪ್ 'ದಿ ವಿಲನ್' ಅಂತ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಪ್ರೇಮ್ ನಿರ್ದೇಶನದ ಬಗ್ಗೆ ಕಿಚ್ಚ ಸುದೀಪ್ ಮೈನಸ್ ಪಾಯಿಂಟ್ ಹಾಗೂ ಪ್ಲಸ್ ಪಾಯಿಂಟ್ ಕಂಡು ಹಿಡಿದಿದ್ದಾರೆ. ಮುಂದೆ ಓದಿ....

'ಜೋಗಿ' ಸಿನಿಮಾ ನೋಡಿದ ಅನುಭವ!

'ಜೋಗಿ' ಸಿನಿಮಾ ನೋಡಿದ ಅನುಭವ!

''ನಾನು, ಪ್ರೇಮ್ ಅವರದ್ದು 'ಜೋಗಿ' ಸಿನಿಮಾ ಒಂದೇ ನೋಡಿದ್ದು. ಅದು 50 ದಿನ ಆದ್ಮೇಲೆ. ನಾನು ಮತ್ತು ಪ್ರಿಯ ಅವರು ಮಧ್ಯಾಹ್ನ ಶೋಗೆ ಮಲ್ಟಿಫ್ಲೆಕ್ಸ್ ಗೆ ಹೋಗಿದ್ದೀವಿ. ಆಲ್ ಮೋಸ್ಟ್ ಆವತ್ತು ಕೂಡ 50 ಪರ್ಸೆಂಟ್ ಇತ್ತು. ತುಂಬಾ ಆರಾಮಗಿ ಸಿನಿಮಾ ನೋಡಿದೆ.[ಶಿವರಾಜ್ ಕುಮಾರ್ ಮತ್ತು ಸುದೀಪ್: ಇಬ್ಬರಲ್ಲಿ 'ವಿಲನ್' ಯಾರು.?]

ಪ್ರೇಮ್ ನಿರ್ದೇಶನದಲ್ಲಿ ಮೈನಸ್!

ಪ್ರೇಮ್ ನಿರ್ದೇಶನದಲ್ಲಿ ಮೈನಸ್!

''ಪ್ರೇಮ್ ಅವರದ್ದು ಕೆಲವು ಮೈನಸ್ ಇದೆ, ಕೆಲವು ಪ್ಲಸ್ ಇದೆ. ಮೈನಸ್ ಏನಪ್ಪಾ ಅಂದ್ರೆ, ಪ್ರೇಮ್ ಹಿಂದೆ ನೋಡಲ್ಲ, ಮುಂದೆ ನೋಡಲ್ಲ, ಸಿನಿಮಾನ ಸೈಲಾಂಟ್ ಆಗಿ ಹೊಡ್ಕೊಂಡು ಹೋಗ್ತಾ ಇರ್ತಾನೆ. ಅಲ್ಲಿ ಸ್ವಲ್ಪ ಹಿಡಿಬೇಕು''.[ಸುದೀಪ್-ಶಿವಣ್ಣನ 'ದಿ ವಿಲನ್'ಗೆ ಬ್ರಿಟಿಷ್ ದೇಶದ ನಾಯಕಿ!]

ಕಿಚ್ಚನ ಪ್ರಕಾರ ಪ್ಲಸ್ ಪಾಯಿಂಟ್!

ಕಿಚ್ಚನ ಪ್ರಕಾರ ಪ್ಲಸ್ ಪಾಯಿಂಟ್!

''ಪ್ರೇಮ್ ಅವರ ನಿರ್ದೇಶನದಲ್ಲಿ ಪ್ಲಸ್ ಪಾಯಿಂಟ್ ಏನಪ್ಪಾ ಅಂದ್ರೆ ಸೆಂಟಿಮೆಂಟ್. ಪ್ರೇಮ್ ಸಿನಿಮಾಗಳಲ್ಲಿ ಎಮೋಶನ್ ತುಂಬಾನೇ ಕನೆಕ್ಟ್ ಆಗಿರುತ್ತೆ. ನಮ್ಮ ಸಿನಿಮಾದಲ್ಲಿ ಎಮೋಶನ್ ಇಲ್ಲ ಅಂದ್ರೆ ಬಹಳ ಕಷ್ಟ. ಅದು ಎಷ್ಟೇ ಕೋಟಿ ಸಿನಿಮಾ ಆದ್ರೂ, ಎಂತಹದ್ದೇ ಪಾತ್ರ ಮಾಡಿದ್ರು ಅಷ್ಟೇ.[10 ದಿನದಲ್ಲಿ ರಿಲೀಸ್ ಆಗಲಿದೆಯಂತೆ 'ದಿ ವಿಲನ್' ಫಸ್ಟ್ ಲುಕ್]

ಪ್ರೇಮ್ ಅವರ ಬಹುದೊಡ್ಡ ಶಕ್ತಿ ಎಮೋಶನ್

ಪ್ರೇಮ್ ಅವರ ಬಹುದೊಡ್ಡ ಶಕ್ತಿ ಎಮೋಶನ್

''ಚಿತ್ರಮಂದಿರದಲ್ಲಿ ಸಿನಿಮಾ ನೋಡುವಾಗ, ತೆರೆಮೇಲೆ ಬರುವ ಯಾವುದೋ ಒಂದು ಅಂಶದ ಜೊತೆ ಕನೆಕ್ಟ್ ಆಗಬೇಕು. ಈ ತರ ನಾನು ಅದನ್ನ 'ಜೋಗಿ' ಚಿತ್ರದಲ್ಲಿ ನೋಡಿದ್ದೆ. ಅವರನ್ನ 'ರಾ ಡೈರೆಕ್ಟರ್', 'ಕಮರ್ಷಿಯಲ್ ಡೈರೆಕ್ಟರ್' ಅಂತೆಲ್ಲ ಕರೆಯುತ್ತಾರೆ. ಆದ್ರೆ, ಅದು ಸುಳ್ಳು. ಪ್ರೇಮ್ ಅವರ ಬಹುದೊಡ್ಡ ಶಕ್ತಿ ಎಮೋಶನ್.

ಸಾಂಗ್ ಮಾಡುವ ರೀತಿ ಇಷ್ಟ

ಸಾಂಗ್ ಮಾಡುವ ರೀತಿ ಇಷ್ಟ

''ಪ್ರೇಮ್ ಹಾಡು ಮಾಡುವ ರೀತಿಯಲ್ಲಿ ಹಳ್ಳಿಯವರೆಗೂ ಮುಟ್ಟುತ್ತೆ. ರೀತಿ ಆಗಿರಬಹುದು. ಅವರು ಸರಳವಾಗಿರುವ ಒಂದು ಭಾಷೆಯನ್ನ ಬಳಸುತ್ತಾರೆ. ಅವರ ಸಾಹಿತ್ಯ ಎಲ್ಲರಿಗೂ ಟಚ್ ಆಗುತ್ತೆ''[ಸುದೀಪ್ ಅವರ 'ಫೇಸ್ ಬುಕ್ ಲೈವ್' ವಿಡಿಯೋ ಇಲ್ಲಿದೆ ನೋಡಿ]

English summary
Kiccha Sudeep Talks About Prem Direction. What is the Strength and weakness of Prem Direction According to Sudeep. now Presently Sudeep Working with Prem In the Movie of The Villain, CO Starring Dr.Shiva Rajkumar
Please Wait while comments are loading...

Kannada Photos

Go to : More Photos