»   » ಸುದೀಪ್ ಹೊಸ ಚಿತ್ರಕ್ಕೆ ಮಿಲನ ಪ್ರಕಾಶ್ ಆಕ್ಷನ್ ಕಟ್

ಸುದೀಪ್ ಹೊಸ ಚಿತ್ರಕ್ಕೆ ಮಿಲನ ಪ್ರಕಾಶ್ ಆಕ್ಷನ್ ಕಟ್

Written by: ಉದಯರವಿ
Subscribe to Filmibeat Kannada

'ರನ್ನ' ಚಿತ್ರದಲ್ಲಿ ಬಿಜಿಯಾಗಿರುವ ಸುದೀಪ್ ಅವರು ಮತ್ತೊಂದು ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಬಾರಿ ಆಕ್ಷನ್ ಕಟ್ ಹೇಳುತ್ತಿರುವವರು 'ಮಿಲನ' ಖ್ಯಾತಿಯ ಪ್ರಕಾಶ್. ಇದು ಎಸ್ಆರ್ ವಿ ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರ.

ರಮೇಶ್ ಅರವಿಂದ್ ಜೊತೆಗೆ 'ಆಕ್ಸಿಡೆಂಟ್' ಚಿತ್ರವನ್ನು ನಿರ್ಮಿಸಿದ್ದ ರಘುನಾಥ್ ಅವರು ಇದೀಗ ಸುದೀಪ್ ಚಿತ್ರಕ್ಕೆ ಎಸ್ಆರ್ ವಿ ಪ್ರೊಡಕ್ಷನ್ಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದ ಲೋಗೋ ಬಿಡುಗಡೆ ಮಾಡಲಾಗಿದ್ದು ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ.

ಇದೇ ಸಂದರ್ಭದಲ್ಲಿ ರಘುನಾಥ್ ಅವರ ನೂತನ ರೆಸ್ಟೋರೆಂಟ್ 'ಓಗರ'ವನ್ನೂ ಆರಂಭಿಸಲಾಯಿತು. ವೇದಬ್ರಹ್ಮ ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮಾ ಅವರು ಜ್ಯೋತಿ ಬೆಳಗುವ ಮೂಲಕ ನೂತನ ರೆಸ್ಟೋರೆಂಟ್ ಉದ್ಘಾಟಿಸಿದರು. ಸುದೀಪ್ ಅವರು ಎಸ್ಆರ್ ವಿ ಪ್ರೊಡಕ್ಷನ್ಸ್ ನ ಲೋಗೋವನ್ನೂ ಬಿಡುಗಡೆ ಮಾಡಿದರು.

ಶೂಟಿಂಗ್ ಜೊತೆಗೆ ಭರ್ಜರಿ ಊಟ

ಶೂಟಿಂಗ್ ಜೊತೆಗೆ ಭರ್ಜರಿ ಊಟ

ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್, "ಈ ಸಮಾರಂಭ ನೋಡಿದ ಮೇಲೆ ನನಗೆ ಒಂದಂತೂ ಖಾತ್ರಿಯಾಗಿದೆ. ಶೂಟಿಂಗ್ ಜೊತೆಗೆ ಶುಚಿ ರುಚಿಕರವಾದ ಭರ್ಜರಿ ಊಟವನ್ನೂ ನಿರೀಕ್ಷಿಸಬಹುದು. ನಮಗೆ ಹೋಟೆಲ್ ಬಿಜಿನೆಸ್ ಹೊಸದಲ್ಲ. ನಮ್ಮ ತಂದೆ ಸರೋವರ್ ಸಂಜೀವಯ್ಯ ರೆಸ್ಟೋರೆಂಟ್ ಒಂದನ್ನು ನಿರ್ವಹಿಸುತ್ತಿದ್ದರು." ಎಂದರು.

ಬಹಳ ಅದ್ದೂರಿ ಚಿತ್ರ ಇದು

ಬಹಳ ಅದ್ದೂರಿ ಚಿತ್ರ ಇದು

"ಈ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಮಾಡಿದ್ದಾರೆ. ತಮ್ಮ ಚಿತ್ರವೂ ಅದೇ ರೀತಿ ಅದ್ದೂರಿಯಾಗಿ ಮೂಡಿಬರುತ್ತದೆ. ಈ ವೇದಿಕೆಯನ್ನು ಸುಂದರವಾಗಿ ರೂಪಿಸಿದ ತಮ್ಮ ಪತ್ನಿ ಪ್ರಿಯಾ ಅವರಿಗೂ ಥ್ಯಾಂಕ್ಸ್ ಹೇಳಲು ಮರೆಯಲಿಲ್ಲ ಸುದೀಪ್. ಪ್ರಿಯಾ ಅವರು 'ಸ್ಟೇಜ್ 360' ಎಂಬ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ನಿರ್ವಹಿಸುತ್ತಿರುವುದು ಗೊತ್ತೇ ಇದೆ.

ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ

ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ

ಚಿತ್ರದ ನಿರ್ದೇಶಕ ಮಿಲನ ಪ್ರಕಾಶ್ ಮಾತನಾಡುತ್ತಾ, "ಸುದೀಪ್ ಜೊತೆ ಕೆಲಸ ಮಾಡಬೇಕೆಂಬ ನಿರೀಕ್ಷೆಯಲ್ಲಿದ್ದೆ. ಈಗ ಸ್ವಲ್ಪ ಆತಂಕವಾಗುತ್ತಿದೆ ಕಾರಣ ಚಿತ್ರದ ಗುಣಮಟ್ಟ ಹೆಚ್ಚಾಗುತ್ತಿದ್ದಂತೆ ಚಿತ್ರದ ಬಗೆಗಿನ ನಿರೀಕ್ಷೆಗಳು ದುಪ್ಪಟ್ಟಾಗುತ್ತಿವೆ. ಇದನ್ನು ಸುದೀಪ್ ಅವರಿಗೂ ಹೇಳಿದ್ದೇನೆ. ನನ್ನ ಪ್ರಯತ್ನವನ್ನು ಆದಷ್ಟು ಉತ್ತಮವಾಗಿ ಮಾಡುತ್ತೇನೆ." ಎಂದರು.

'ಆಕ್ಸಿಡೆಂಟ್' ಮಾಡಿದ ಚಿತ್ರ

'ಆಕ್ಸಿಡೆಂಟ್' ಮಾಡಿದ ಚಿತ್ರ

'ಆಕ್ಸಿಡೆಂಟ್' ಚಿತ್ರದ ಬಳಿಕ ನಾನು ಸಂಪೂರ್ಣವಾಗಿ ಸೊರಗಿ ಹೋಗಿದ್ದೆ. ಈ ಸಂದರ್ಭದಲ್ಲಿ ನನ್ನ ಪತ್ನಿ ನನ್ನ ಬೆಂಬಲಕ್ಕೆ ನಿಂತರು. ಅವರೇ ನನಗೆ ಸ್ಫೂರ್ತಿ ಹಾಗೂ ಶಕ್ತಿ ತುಂಬಿದ್ದು. ಕೆಲವು ಗೆಳೆಯರ ಸಹಕಾರದಿಂದ ಇದೀಗ ನಾವು ಮತ್ತೆ ಚಿತ್ರೋದ್ಯಮಕ್ಕೆ ಬಂದಿದ್ದೇವೆ.

ಅತ್ಯುತ್ತಮ ರೆಸ್ಟೋರೆಂಟ್ ಗಳಲ್ಲಿ ಓಗರ ಒಂದು

ಅತ್ಯುತ್ತಮ ರೆಸ್ಟೋರೆಂಟ್ ಗಳಲ್ಲಿ ಓಗರ ಒಂದು

ಬೆಂಗಳೂರಿನಲ್ಲಿರುವ ಕೆಲವು ಅತ್ಯುತ್ತಮ ರೆಸ್ಟೋರೆಂಟ್ ಗಳಲ್ಲಿ ಓಗರ ಸಹ ಒಂದು. ಮಿಲನ ಪ್ರಕಾಶ್ ಅವರನ್ನು ಸೂಚಿಸಿದ್ದು ಸುದೀಪ್ ಎಂದರು. ನನ್ನ ಒಬ್ಬ ತಂಗಿ ಯುಎಸ್ ನಲ್ಲಿದ್ದಾರೆ. ಮತ್ತೊಬ್ಬ ತಂಗಿ ಪ್ರಿಯಾ ಅವರು. ಅವರ ಸಹಕಾರ ಇಲ್ಲದಿದ್ದರೆ ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ ಎಂದರು ರಘುನಾಥ್.

English summary
Kichcha Sudeep's new movie will be directed by Milana Prakash. Producer Raghunath launched this movie under his new venture SRV Productions. The movie logo was launched but the title is not disclosed yet.
Please Wait while comments are loading...

Kannada Photos

Go to : More Photos