»   » ಕಮ್ಯುನಿಸ್ಟ್ ಮನಸ್ಥಿತಿಯಿಂದ ಹೊರಬಂದ ಕಿಚ್ಚ ಸುದೀಪ್!

ಕಮ್ಯುನಿಸ್ಟ್ ಮನಸ್ಥಿತಿಯಿಂದ ಹೊರಬಂದ ಕಿಚ್ಚ ಸುದೀಪ್!

Written by: ಜೀವನರಸಿಕ
Subscribe to Filmibeat Kannada

ಅದು ಕಿಚ್ಚನಿಗೆ ಕರ್ನಾಟಕ ರಕ್ಷಣಾ ವೇದಿಕೆ 'ಅಭಿನಯ ಚಕ್ರವರ್ತಿ' ಬಿರುದು ಕೊಡೋಕೆ ತಯಾರಾಗಿದ್ದ ಕಾರ್ಯಕ್ರಮ. ಕಾರ್ಯಕ್ರಮ ನಡೆದಿದ್ದು ನಡೆದಿದ್ದು ನಗರದ ಟೌನ್ ಹಾಲ್ ನಲ್ಲಿ. ವೇದಿಕೆಯಲ್ಲಿ ನಾರಾಯಣ ಗೌಡ ಸೇರಿದಂತೆ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಹಲವರಿದ್ರು.

ಕಿಚ್ಚ ಸುದೀಪ್ ತಂದೆ ತಾಯಿ ಕೂಡ ವೇದಿಕೆಯ ಮುಂದಿದ್ರು. ವೇದಿಕೆಯಲ್ಲಿ ಮಾತಾಡೋಕೆ ನಿಂತ ಸುದೀಪ್ ಗೆ ಚಪ್ಪಾಳೆಯ ಸುರಿಮಳೆಯೇ ಆಯ್ತು. ಸುದೀಪ್ ಅಭಿಮಾನಿಗಳೇ ತುಂಬಿದ್ದ ಕಾರ್ಯಕ್ರಮವಾಗಿದ್ದರಿಂದ ಕಿಚ್ಚ ಮಾತು ಶುರುಮಾಡೋಕೂ ಮೊದಲೇ ಚಪ್ಪಾಳೆ. ಒಂದು ವಾಕ್ಯ ಮುಗಿದ ನಂತರವೂ ರಾಶಿ ರಾಶಿ ಚಪ್ಪಾಳೆ.

ಒಂದೆರೆಡು ಮಾತಿನ ನಂತರ ಮಾತಾಡೋಕೆ ಕಷ್ಟವಾಗುವಷ್ಟು ಚಪ್ಪಾಳೆಗಳು ಬಿದ್ದಾಗ ಕಿಚ್ಚ ಕಿಡಿ ಕಿಡಿಯಾದ್ರು. ಆದ್ರೂ ಸ್ವಲ್ಪ ತಾಳ್ಮೆ ತೆಗೆದುಕೊಂಡ್ರು. ಆದ್ರೆ ಈ ನಡುವೆ ಒಬ್ಬ ಅಭಿಮಾನಿ ಎದ್ದು ನಿಂತು ಪ್ರತೀ ಮಾತು ಚಪ್ಪಾಳೆ ಮುಗಿದ ನಂತರವೂ ಕಿಚ್ಚ ಕಿಚ್ಚ ಅಂತ ಜೋರಾಗಿ ಕೂಗ್ತಿದ್ದ.

ಇದು ಸುದೀಪಪ್ ರನ್ನ ಕಿಡಿ ಕಿಡಿಯಾಗಿಸಿತ್ತು. ನನ್ನನ್ನ ಮಾತಾಡೋಕೆ ಬಿಡ್ತೀರೋ ನೀವೇ ಕಿರುಚಾಡ್ತೀರೋ ಅಂತ ಕೇಳಿದ್ರು. ಆದ್ರೂ ಹುಚ್ಚು ಅಭಿಮಾನದಲ್ಲಿ ಆ ವ್ಯಕ್ತಿ ಕೂಗೋದನ್ನ ನಿಲ್ಲಿಸಲೇ ಇಲ್ಲ. ಕೆಲವೇ ಕ್ಷಣದಲ್ಲಿ ಸುದೀಪ್ ತಾಳ್ಮೆ ಕಳೆದುಕೊಂಡ್ರು. ಕಿಚ್ಚ ಕಿಚ್ಚ ಅಂತ ಕಿರುಚಾಡ್ತಿದ್ದ ಅಭಿಮಾನಿಗೆ "ಆಯ್ತು ನಾನು ಮಾತಾಡಲ್ಲ ನೀನೇ ಹೇಳಪ್ಪ" ಅಂದ್ರು.

ಕಿಚ್ಚನ ಉತ್ತರದಿಂದ ಶಾಕ್ ಆದ ಅಭಿಮಾನಿ

ಕಿಚ್ಚನ ಉತ್ತರದಿಂದ ಶಾಕ್ ಆದ ಅಭಿಮಾನಿ

ನಾನು ನಿಮಗಾಗಿ ಭದ್ರಾವತಿಯಿಂದ ಬಂದಿದ್ದೀನಿ ಅಂತ ಕೂಗಿದ ಅಭಿಮಾನಿ, ಕೂಡಲೇ ಸುದೀಪ್ ನಾನು ಇನ್ನೂ ಆ ಕಡೆ ಇರೋ ಶಿವಮೊಗ್ಗದಿಂದ ಬಂದಿದ್ದೀನಿ ಅಂತ ಕೋಪದಿಂದ್ಲೇ ಹೇಳಿದ್ರು. ತನ್ನನ್ನ ಪ್ರೀತಿಯಿಂದ ಮಾತ್ನಾಡಿಸ್ತಾರೆ. ಅಭಿಮಾನಿಯನ್ನ ಅಭಿನಂದಿಸ್ತಾರೆ ಅಂದುಕೊಂಡಿದ್ದ ಆತನಿಗೆ ಕಿಚ್ಚನ ಉತ್ತರದಿಂದ ಶಾಕ್ ಆಗಿತ್ತು. ಆತ ನಾನು ನಿಮ್ಮ ಅಭಿಮಾನಿ ಅಣ್ಣ ಅಂತ ಕಿಚ್ಚ ಕಿಚ್ಚ ಅಂತ ಜೈಕಾರ ಹಾಕಿದ.

ಅಭಿಮಾನಿಯನ್ನು ಹೊರಹಾಕಿದ ಕಾರ್ಯಕರ್ತರು

ಅಭಿಮಾನಿಯನ್ನು ಹೊರಹಾಕಿದ ಕಾರ್ಯಕರ್ತರು

ಇದಕ್ಕೆ ಮತ್ತೆ ಕೋಪಗೊಂಡ ಸುದೀಪ್ "ನೀನು ಹಿಂಗೆ ಮಾಡ್ತಿದ್ರೆ ರಕ್ಷಣಾ ವೇದಿಕೆಯವ್ರು ನಿಂಗೆ ಮುತ್ತು ಕೊಡ್ತಾರೆ" ಅಂದ್ರು. ಅವರ ಮಾತಿನಲ್ಲಿದ್ದ ಅರ್ಥ ರಕ್ಷಣಾ ವೇದಿಕೆಯವರು ಬುದ್ಧಿ ಕಲಿಸ್ತಾರೆ ಅನ್ನೋದು. ಕಿಚ್ಚನ ಮಾತಿಗೆ 'ಬೆಲೆ' ಕೊಟ್ಟ ರಕ್ಷಣಾ ವೇದಿಕೆಯವರು ಕಾರ್ಯಕ್ರಮ ಸಾಂಗವಾಗಿ ನೆರವೇರಿಸೋಕೆ ಆ ಅಭಿಮಾನಿಯನ್ನ ಕಾರ್ಯಕ್ರಮದಿಂದ ಹೊರಗೆ ಎಳೆದುಕೊಂಡು ಹೋದ್ರು.

ತನ್ನ ಸಿನಿ ಜೀವನವನ್ನ ನೆನೆದು ಕಣ್ಣೀರಿಟ್ಟ ಕಿಚ್ಚ ಸುದೀಪ್

ತನ್ನ ಸಿನಿ ಜೀವನವನ್ನ ನೆನೆದು ಕಣ್ಣೀರಿಟ್ಟ ಕಿಚ್ಚ ಸುದೀಪ್

ಆಮೇಲೆ ಸುದೀಪ್ ಅಪ್ಪ ಅಮ್ಮನನ್ನ, ತನ್ನ ಸಿನಿ ಜೀವನವನ್ನ ನೆನೆದು ಕಣ್ಣೀರು ಹಾಕಿದ್ರು. ಅಂಬರೀಶ್ ಬಂದ್ರು ಅಭಿನಂದಿಸಿದ್ರು. ಅಂಬರೀಶ್ ಗೆ ಅವಮಾನ ಮಾಡಿದ್ರು ಅಂತಾನೂ ವಿವಾದವಾಯ್ತು, ಸುದೀಪ್ ಕಣ್ಣೀರು ಮಾಧ್ಯಮಗಳಲ್ಲಿ ಬ್ರೇಕಿಂಗ್ ಆಗಿ ಹರಿಯೋದ್ರೊಂದಿಗೆ ಅಂಬಿ ವಿವಾದ ಕೊಚ್ಚಿಹೋಯ್ತು.

ಕಿಚ್ಚನ ಮಾತಲ್ಲಿ ಒಂದು ಸೌಮ್ಯ ಸ್ವಭಾವವಿರುತ್ತೆ

ಕಿಚ್ಚನ ಮಾತಲ್ಲಿ ಒಂದು ಸೌಮ್ಯ ಸ್ವಭಾವವಿರುತ್ತೆ

ಘಟನೆ ಎರಡು ಎರಡನೇ ಘಟನೆಯಾಗಿ.., ಒಂದೆರೆಡಲ್ಲ ಹಲವು ಘಟನೆಗಳನ್ನ ಉದಾಹರಿಸಬಹುದು. ಇತ್ತೀಚೆಗೆ ನಡೀತಾ ಇರೋ ಪ್ರತೀ ಕಾರ್ಯಕ್ರಮಗಳಲ್ಲಿ ಸುದೀಪ್ ಅತಿಥಿಯಾಗಿ ಹೋದಾಗಲೆಲ್ಲ. ಕಿಚ್ಚನ ಮಾತಲ್ಲಿ ಒಂದು ಸೌಮ್ಯ ಸ್ವಭಾವವಿರುತ್ತೆ.

ಬದಲಾದ ಕಿಚ್ಚ ಸುದೀಪ್

ಬದಲಾದ ಕಿಚ್ಚ ಸುದೀಪ್

ಮೊದಲಿಗೆ ವೇದಿಕೆ ಏರಿದ್ರೆ ಕಿಚ್ಚ ಸುದೀಪ್ ವೇದಿಕೆ ಮೇಲಿರುವವರಿಗಿಂತ ವೇದಿಕೆಯ ಮುಂದೆ ಕುಳಿತಿರೋ ಹಿರಿಯರನ್ನ ಗುರುತಿಸ್ತಾರೆ ಗೌರವಿಸ್ತಾರೆ. ಇದಕ್ಕೊಂದು ಇತ್ತೀಚೆಗಿನ ಉದಾಹರಣೆ ಅಂದ್ರೆ 'ಮಂಡ್ಯ ಟು ಮುಂಬೈ' ಆಡಿಯೋ ರಿಲೀಸ್ ನಲ್ಲಿ ಮೊದಲಿಗೆ ಕಿಚ್ಚ ಗುರುತಿಸಿದ್ದು ಸಂಗೀತ ನಿರ್ದೇಶಕ ವಿ ಮನೋಹರ್ ಅವರನ್ನ.

ಮನೋಹರ್ ಬಗ್ಗೆ ವಿಷಯವೊಂದನ್ನ ತೆರೆದಿಟ್ರು

ಮನೋಹರ್ ಬಗ್ಗೆ ವಿಷಯವೊಂದನ್ನ ತೆರೆದಿಟ್ರು

40 ವರ್ಷ ಕಳೆದಿದೆ. 20 ವರ್ಷದಲ್ಲಿ ಕಮ್ಯುನಿಷ್ಟ್ ಮನಸ್ಥಿತಿ ಇಲ್ಲದಿದ್ರೆ ಅವನು ಸಹಜ ಮನುಷ್ಯನೇ ಅಲ್ಲ. ನಲವತ್ತು ವರ್ಷ ಕಳೆದ್ರೂ ಅವನಲ್ಲಿ ಕಮ್ಯುನಿಷ್ಟ್ ಮನಸ್ಥಿತಿ ಹೋಗ್ಲಿಲ್ಲ ಅಂದ್ರೆ ಆವಾಗ್ಲೂ ಅವನು ಸಹಜ ಮನುಷ್ಯ ಅಲ್ಲ (ಅಬ್ ನಾರ್ಮಲ್) ಅನ್ನೋ ಮಾತು ಕಿಚ್ಚನ ವಿಷಯದಲ್ಲೂ ಸತ್ಯವಾಗಿದೆ.

ಯಾರು ಶಾಶ್ವತ ಅಲ್ಲ

ಯಾರು ಶಾಶ್ವತ ಅಲ್ಲ

ಒಂದು ಕಾಲದಲ್ಲಿ ಜನುಮದ ಜೋಡಿ ಸಂಗೀತ ಸೂಪರ್ ಡ್ಯೂಪರ್ ಹಿಟ್ಟಾಗಿದ್ದ ಕಾಲ ನಾವು ಅವರನ್ನ ಒಂದು ಸಾರಿ ಮಾತಾಡೋಕೆ ಅವಕಾಶ ಸಿಕ್ಕಿದ್ರೆ ಸಾಕು ಅಂತಿದ್ವಿ. ಕಾಲ ಬದಲಾಗುತ್ತೆ. ಯಾರು ಶಾಶ್ವತ ಅಲ್ಲ. ಹೊಸಬರು ಬರಲೇಬೇಕು. ಹಳಬರು ಸೈಡಿಗೆ ಸರಿಯಲೇಬೇಕು.

ಆಡಿಯೋ ರಿಲೀಸ್ ಗೆ ಬಂದಿದ್ದೀನಿ ಅಂದ್ರು

ಆಡಿಯೋ ರಿಲೀಸ್ ಗೆ ಬಂದಿದ್ದೀನಿ ಅಂದ್ರು

ಆದ್ರೆ ನಾವು ಹೊಸಬರಾಗಿ ಬಂದಾಗ ನಮ್ಗೂ ಹಲವರು ಇದೇ ತರಹ ಉತ್ತೇಜನ ನೀಡಿದ್ರು. ಅವ್ರು ಮಾಡಿರೋ ಸಹಾಯವನ್ನ ನಾವು ಎತ್ತರದಲ್ಲಿ ನಿಂತಾಗ ಮರೆಯಬಾರ್ದು. ಹಾಗಾಗಿ ಹೊಸಬರಿಗೆ ಹಾಡಿದ್ದೀನಿ. ಆಡಿಯೋ ರಿಲೀಸ್ ಗೆ ಬಂದಿದ್ದೀನಿ ಅಂದ್ರು.

ಕಮ್ಯುನಿಸ್ಟ್ ಮನಸ್ಥಿತಿಯಿಂದ ಹೊರಬಂದ ಕಿಚ್ಚ ಸುದೀಪ್!

ಕಮ್ಯುನಿಸ್ಟ್ ಮನಸ್ಥಿತಿಯಿಂದ ಹೊರಬಂದ ಕಿಚ್ಚ ಸುದೀಪ್!

40 ವರ್ಷ ಕಳೆದಿದೆ. 20 ವರ್ಷದಲ್ಲಿ ಕಮ್ಯುನಿಷ್ಟ್ ಮನಸ್ಥಿತಿ ಇಲ್ಲದಿದ್ರೆ ಅವನು ಸಹಜ ಮನುಷ್ಯನೇ ಅಲ್ಲ. ನಲವತ್ತು ವರ್ಷ ಕಳೆದ್ರೂ ಅವನಲ್ಲಿ ಕಮ್ಯುನಿಷ್ಟ್ ಮನಸ್ಥಿತಿ ಹೋಗ್ಲಿಲ್ಲ ಅಂದ್ರೆ ಆವಾಗ್ಲೂ ಅವನು ಸಹಜ ಮನುಷ್ಯ ಅಲ್ಲ (ಅಬ್ ನಾರ್ಮಲ್) ಅನ್ನೋ ಮಾತು ಕಿಚ್ಚನ ವಿಷಯದಲ್ಲೂ ಸತ್ಯವಾಗಿದೆ.

ಕಿಚ್ಚ 40 ಕಳೆದ ನಂತ್ರ ಮೆತ್ತಗಾಗಿದ್ದಾರೆ

ಕಿಚ್ಚ 40 ಕಳೆದ ನಂತ್ರ ಮೆತ್ತಗಾಗಿದ್ದಾರೆ

ಕಿಚ್ಚ 40 ಕಳೆದ ನಂತ್ರ ಮೆತ್ತಗಾಗಿದ್ದಾರೆ. ಕಣ್ಣಲ್ಲಿದ್ದ ಕಿಚ್ಚು ಆಕ್ಷನ್ ಅಂದಾಗ ಮಾತ್ರ ಬರುತ್ತೆ. ಕೋಪ ಹುಚ್ಚಾಟ ಎಲ್ಲವೂ ಈಗ ಅನುಭವದ ಮಳೆಯ ನೀರಲ್ಲಿ ತೊಳೆದುಹೋಗಿದೆ. ಅವತ್ತಿನ ಗೂಳಿ, ಕಿಚ್ಚ ಈಗಿಲ್ಲ, ಸುದೀಪ್ ಮಾಣಿಕ್ಯನಾಗಿದ್ದಾರೆ, ನಿಜವಾದ ರನ್ನನಾಗಿದ್ದಾರೆ.

ಕಿಚ್ಚಿನಂತಹಾ ವ್ಯಕ್ತಿತ್ವದ ಹಿಂದೆ ರನ್ನದಂತಹಾ ಗುಣ

ಕಿಚ್ಚಿನಂತಹಾ ವ್ಯಕ್ತಿತ್ವದ ಹಿಂದೆ ರನ್ನದಂತಹಾ ಗುಣ

ಕಿಚ್ಚ ಸುದೀಪ್ ರ ಕಿಚ್ಚಿನಂತಹಾ ವ್ಯಕ್ತಿತ್ವದ ಹಿಂದೆ ರನ್ನದಂತಹಾ ಗುಣವಿದೆ. ಚಿತ್ರರಂಗದ ಕಷ್ಟಗಳ ಕಿಚ್ಚಲ್ಲಿ ಬೆಂದ ಸುದೀಪ್ ಪುಟವಿಟ್ಟ ಚಿನ್ನವಾಗಿದ್ದಾರೆ. ದೊಡ್ಡವರಿಗೆ ತಲೆಬಾಗ್ತಾರೆ. ಚಿಕ್ಕವರ ತಲೆ ನೇವರಿಸ್ತಾರೆ.

English summary
In recent days Kichcha Sudeep attitude has changed a lot. He is out of communist frame. Here is the complete scoop.
Please Wait while comments are loading...

Kannada Photos

Go to : More Photos