»   » ತಮಿಳು, ತೆಲುಗಿಗೆ 'ಹೆಬ್ಬುಲಿ' ರಿಮೇಕ್?

ತಮಿಳು, ತೆಲುಗಿಗೆ 'ಹೆಬ್ಬುಲಿ' ರಿಮೇಕ್?

Posted by:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಘರ್ಜನೆಗೆ ಈಗ ದಿನಗಣನೆ ಶುರುವಾಗಿದೆ. ಬಹುಭಾಷಾ ನಟಿ ಅಮಲಾ ಪೌಲ್ ಚಿತ್ರದ ನಾಯಕಿ ಆಗಿ ನಟಿಸಿದ್ದು, ಚಿತ್ರಕ್ಕೆ ಹೊರರಾಜ್ಯಗಳಲ್ಲೂ ಕ್ರೇಜ್ ಹೆಚ್ಚಿದೆ.[ಸುದೀಪ್ ಬದುಕಿನ ಮೊದಲ ಅತ್ಯಂತ ದೊಡ್ಡ ಸಾಧನೆ ಇದು..!]

ಎಸ್.ಕೃಷ್ಣ ಆಕ್ಷನ್ ಕಟ್ ಹೇಳಿದ್ದು, ಉಮಾಪತಿ ಶ್ರೀನಿವಾಸ್ ಮತ್ತು ರಘುನಾಥ್ ಅವರು 'ಹೆಬ್ಬುಲಿ' ಚಿತ್ರವನ್ನು ನಿರ್ಮಾಣ ಮಾಡಿರುವುದು, ಸುದೀಪ್ ಮತ್ತು ರವಿಚಂದ್ರನ್ ಕಾಂಬಿನೇಷನ್ ಇರುವ ಮೂರನೇ ಚಿತ್ರ ಎಂಬುದು, ಚಿತ್ರಕ್ಕೆ ಖಡಕ್ ವಿಲನ್ ಗಳಾಗಿ 'ಕನ್ನಡದ ರವಿಶಂಕರ್, ಬಹುಭಾಷಾ ನಟ ರವಿಕಿಶನ್, ಕಬೀರ್ ದುಹಾನ್ ಸಿಂಗ್ ಮತ್ತು ಸಂಪತ್ ರಾಜ್' ಅಭಿನಯಿಸಿದ್ದಾರೆ ಎಂಬುದು ನಿಮಗೆಲ್ಲ ಗೊತ್ತಿರುವ ವಿಚಾರವೇ. ಆದ್ರೆ 'ಹೆಬ್ಬುಲಿ'ಯ ಅಪ್‌ ಡೇಟೆಡ್ ವಿಚಾರ ಅಂದ್ರೆ ಪರಭಾಷೆಗಳಿಂದ ರಿಮೇಕ್ ಬೇಡಿಕೆ ಹೆಚ್ಚಿದೆಯಂತೆ.

'ಹೆಬ್ಬುಲಿ' ರೀಮೇಕ್ ಗಾಗಿ ಪೈಪೋಟಿ!

'ಹೆಬ್ಬುಲಿ' ರೀಮೇಕ್ ಗಾಗಿ ಪೈಪೋಟಿ!

ಸುದೀಪ್ ಅಭಿನಯದ 'ಹೆಬ್ಬುಲಿ' ಬಿಡುಗಡೆಗೂ ಮುಂಚೆ ಸಖತ್ ಸೌಂಡ್ ಮಾಡ್ತಿದೆ. ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ, ಹೊರರಾಜ್ಯಗಳಲ್ಲೂ 'ಹೆಬ್ಬುಲಿ' ಕ್ರೇಜ್ ಹಚ್ಚಾಗಿದೆ. ಇದರ ಪರಿಣಾಮವೇ ಈಗ 'ಹೆಬ್ಬುಲಿ' ಚಿತ್ರದ ರೀಮೇಕ್ ರೈಟ್ಸ್ ಗಾಗಿ ನಿರ್ಮಾಪಕರು ಮುಗಿಬೀಳುತ್ತಿದ್ದಾರಂತೆ..[ರವಿಶಂಕರ್ ಧ್ವನಿ ಬಗ್ಗೆ ಯದ್ವಾತದ್ವಾ ಹೊಗಳಿದ ಕಿಚ್ಚ ಸುದೀಪ್]

ತಮಿಳು, ತೆಲುಗಿಗೆ 'ಹೆಬ್ಬುಲಿ' ರಿಮೇಕ್?

ತಮಿಳು, ತೆಲುಗಿಗೆ 'ಹೆಬ್ಬುಲಿ' ರಿಮೇಕ್?

ಮೂಲಗಳ ಪ್ರಕಾರ ತಮಿಳು, ತೆಲುಗು ಭಾಷೆಗಳಿಂದ ಹೆಬ್ಬುಲಿ ಚಿತ್ರದ ರೀಮೇಕ್ ಗಾಗಿ ಆಫರ್ ಗಳು ಬಂದಿದೆಯಂತೆ. ಆದ್ರೆ, ಹಣಕಾಸಿನ ವ್ಯವಹಾರದಲ್ಲಿ ಇನ್ನೂ ಮಾತುಕತೆ ನಡೆಯಬೇಕಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ತೆಲುಗು, ತಮಿಳಿಗೆ 'ಹೆಬ್ಬುಲಿ' ರೀಮೇಕ್ ಆಗೋದು ಪಕ್ಕಾ ಎನ್ನಲಾಗುತ್ತಿದೆ.

ಹಿಂದಿಗೆ 'ಹೆಬ್ಬುಲಿ' ಡಬ್ಬಿಂಗ್

ಹಿಂದಿಗೆ 'ಹೆಬ್ಬುಲಿ' ಡಬ್ಬಿಂಗ್

ಇತ್ತ, ದಕ್ಷಿಣದಲ್ಲಿ ಹವಾ ಹುಟ್ಟುಹಾಕಿರುವ 'ಹೆಬ್ಬುಲಿ' ಬಾಲಿವುಡ್ ನಲ್ಲೂ ಸಂಚಲನ ಸೃಷ್ಠಿಸಿದೆ. ಈಗಾಗಲೇ 'ಹೆಬ್ಬುಲಿ' ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ದಾಖಲೆ ಬೆಲೆಗೆ ಸೋಲ್ಡ್ ಔಟ್ ಆಗಿದ್ದು, ರಿಲೀಸ್ ಗೂ ಮುಂಚೆ ಮಸ್ತ್ ಬಿಸ್ ನೆಸ್ ಮಾಡಿದೆಯಂತೆ..['ಹೆಬ್ಬುಲಿ' ಚಿತ್ರವನ್ನ ಎಲ್ಲರಿಗಿಂತ ಮೊದಲು ನೋಡುವ ಗೋಲ್ಡನ್ ಚಾನ್ಸ್ ಇಲ್ಲಿದೆ.!]

ಕಿಚ್ಚನ ಚಿತ್ರಗಳಿಗೆ ಡಿಮ್ಯಾಂಡ್

ಕಿಚ್ಚನ ಚಿತ್ರಗಳಿಗೆ ಡಿಮ್ಯಾಂಡ್

ಸುದೀಪ್ ಈಗಾಗಲೇ 'ಈಗ', 'ಬಾಹುಬಲಿ', 'ಪುಲಿ', 'ಫೊಂಕ್', 'ಮುಡಿಂಜಾ ಇವನ ಪುಡಿ' ಚಿತ್ರಗಳ ಮೂಲಕ ಪರಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ನಿರೀಕ್ಷೆಯಂತೆ ಸುದೀಪ್ ಚಿತ್ರಕ್ಕೆ ಪರಭಾಷೆಯಲ್ಲಿ ಈ ರೀತಿಯ ಕ್ರೇಜ್ ಹೆಚ್ಚಾಗುವುದು ನಿಜಕ್ಕೂ ಖುಷಿ ತಂದಿದೆ.

ಫೆಬ್ರವರಿ 23 ಕ್ಕೆ 'ಹೆಬ್ಬುಲಿ' ಘರ್ಜನೆ

ಫೆಬ್ರವರಿ 23 ಕ್ಕೆ 'ಹೆಬ್ಬುಲಿ' ಘರ್ಜನೆ

ಅಂದ್ಹಾಗೆ, ಸುದೀಪ್ ಅಭಿನಯದ 'ಹೆಬ್ಬುಲಿ' ಇದೇ ಫೆಬ್ರವರಿ 23 ರಂದು, ರಾಜ್ಯಾದ್ಯಂತ 400ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಕಾಣಲಿದೆ.

English summary
S Krishna directorial, Kichha Sudeep starrer 'Hebbuli' getting remake Offer.
Please Wait while comments are loading...

Kannada Photos

Go to : More Photos