»   » ಸ್ಯಾಂಡಲ್ ವುಡ್ ನಲ್ಲಿ 'ಕಿರಿಕ್ ಪಾರ್ಟಿ'ಯ ಹೊಸ ದಾಖಲೆ ಇದು..!

ಸ್ಯಾಂಡಲ್ ವುಡ್ ನಲ್ಲಿ 'ಕಿರಿಕ್ ಪಾರ್ಟಿ'ಯ ಹೊಸ ದಾಖಲೆ ಇದು..!

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ 35 ಗಳನ್ನು ಪೂರೈಸಿ ಇನ್ನೂ ಸಹ ಭರ್ಜರಿ ಆಗಿ ರನ್ ಆಗುತ್ತಿದೆ 'ಕಿರಿಕ್ ಪಾರ್ಟಿ'. ಕರ್ನಾಟಕದಲ್ಲಿ ಮಾತವಲ್ಲದೇ ವಿಶ್ವದಾದ್ಯಂತ ಪ್ರದರ್ಶನ ಕಾಣುತ್ತಿರುವ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಚಿತ್ರ ಈಗ ಹೊಸ ದಾಖಲೆಯೊಂದನ್ನು ಸೃಷ್ಟಿಸಿದೆ.[ಕನ್ನಡಿಗರಿಗೆ ಹೆಮ್ಮೆ ತಂದ 'ಕಿರಿಕ್ ಪಾರ್ಟಿ' ಚಿತ್ರತಂಡ]

ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರದ ವಿಡಿಯೋ ಸಾಂಗ್ ಒಂದು ಯೂಟ್ಯೂಬ್ ನಲ್ಲಿ 1 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. ಅದು ಬೇರೆ ಯಾವುದು ಅಲ್ಲಾ.. ಕನ್ನಡಿಗರಿಗೆ ಮಾತ್ರವಲ್ಲದೇ ಅನ್ಯ ಭಾಷಿಕರಿಗೂ ಕೇಳಿದರೆ ಒಮ್ಮೆ ಮನಸ್ಸಲ್ಲಿ ಕಚಗುಳಿ ಇಟ್ಟಂತೆ ಆಗುವ 'ಕಿರಿಕ್ ಪಾರ್ಟಿ' ಚಿತ್ರದ, "ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ.. ಅಂದಾನೋ ಅದೃಷ್ಟನೋ ಮುಂದೆ ಕುಂತಿದೆ. ನಿನ್ನ ಕಂಡ ಕನಸು ಬ್ಲಾಕ್ ಅಂಡ್ ವೈಟ್ ಇಂದು ಬಣ್ಣ ವಾಗಿದೆ" ಎಂಬ ಲಿರಿಕ್ ಹಾಡು. ಈ ವಿಡಿಯೋ ಸಾಂಗ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಹೊಸ ದಾಖಲೆ ಸೃಷ್ಟಿಸಿದ 'ಕಿರಿಕ್ ಪಾರ್ಟಿ'

ಹೊಸ ದಾಖಲೆ ಸೃಷ್ಟಿಸಿದ 'ಕಿರಿಕ್ ಪಾರ್ಟಿ'

'ಕಿರಿಕ್ ಪಾರ್ಟಿ' ಚಿತ್ರದ "ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ.. ಅಂದಾನೋ ಅದೃಷ್ಟನೋ ಮುಂದೆ ಕುಂತಿದೆ' ವಿಡಿಯೋ ಹಾಡಿಗೆ ಧನಂಜಯ ರಂಜನ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನವೆಂಬರ್ 25, 2016 ರಂದು ಯೂಟ್ಯೂಬ್ ನಲ್ಲಿ ಅಪ್‌ ಲೋಡ್ ಮಾಡಲಾದ ಈ ಹಾಡು ಎಲ್ಲರ ಮನಸ್ಸಲ್ಲಿ ಪದೇ ಪದೇ ಕಚಗುಳಿಯನ್ನು ಇಡುತ್ತಿದ್ದು, ಇಂದಿಗೆ 10,218,708 (1.2 ಮಿಲಿಯನ್) ವೀಕ್ಷಣೆ ಪಡೆದಿದೆ.['ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!]

10 ಮಿಲಿಯನ್ ವೀಕ್ಷಣೆ ಪಡೆದ ವಿಡಿಯೋ ಸಾಂಗ್

10 ಮಿಲಿಯನ್ ವೀಕ್ಷಣೆ ಪಡೆದ ವಿಡಿಯೋ ಸಾಂಗ್

ಕಾಲೇಜು ಲೈಫಿನ ರಂಗಿತರಂಗ ಹುಡುಗಾಟಗಳನ್ನು ಒಳಗೊಂಡಿರುವ ಈ ವಿಡಿಯೋ ಸಾಂಗ್ ಯೂತ್ಸ್ ಗಳ ಹಾರ್ಟ್ ಅನ್ನು ಡ್ಯಾನ್ಸ್ ಮಾಡಿಸುತ್ತಿದ್ದು, ಒಂದು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದ ಕನ್ನಡದ ಮೊಟ್ಟ ಮೊದಲ ವಿಡಿಯೋ ಸಾಂಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೊಂದು ಹೊಸ ದಾಖಲೆ ಎಂದರೆ ತಪ್ಪಾಗಲಾರದು.

ಎರಡನೇ ಅತಿಹೆಚ್ಚು ವೀಕ್ಷಣೆ ಪಡೆದ ಕಿರಿಕ್ ಹಾಡು

ಎರಡನೇ ಅತಿಹೆಚ್ಚು ವೀಕ್ಷಣೆ ಪಡೆದ ಕಿರಿಕ್ ಹಾಡು

ಚಿತ್ರದ ಸೆಕೆಂಡ್ ಆಫ್ ನಲ್ಲಿ ಕಾಣಿಸಿಕೊಳ್ಳುವ ಸಂಯುಕ್ತಾ ಹೆಗಡೆ, ರಕ್ಷಿತ್ ಶೆಟ್ಟಿ ಹಿಂದೆ ಬೀಳುವ ವಿಡಿಯೋ ಸಾಂಗ್ ಸಹ ಬರೋಬರಿ 2,849,025 ವೀಕ್ಷಣೆ ಪಡೆದಿದೆ, ಈ ಹಾಡನ್ನು ಶ್ರೇಯಾ ಘೋಶಲ್ ಹಾಡಿದ್ದು, ಕಿರಣ್ ಕಾವೇರಪ್ಪ ಸಾಹಿತ್ಯ ಬರೆದಿದ್ದಾರೆ.

'ಕಾಗದದ ದೋಣಿಯಲ್ಲಿ' ಹಾಡಿಗೆ ಮೂರನೇ ಸ್ಥಾನ

'ಕಾಗದದ ದೋಣಿಯಲ್ಲಿ' ಹಾಡಿಗೆ ಮೂರನೇ ಸ್ಥಾನ

'ಕಿರಿಕ್ ಪಾರ್ಟಿ' ಚಿತ್ರದ ಅತಿಹೆಚ್ಚು ವೀಕ್ಷಣೆ ಪಡೆದ ವಿಡಿಯೋ ಹಾಡಿನ ಪೈಕಿ 'ಕಾಗದದ ದೋಣಿಯಲ್ಲಿ' ಮೂರನೇ ಸ್ಥಾನದಲ್ಲಿದ್ದು, 1,780,272 ವೀಕ್ಷಣೆ ಪಡೆದಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿರುವ ಈ ಹಾಡಿಗೆ ವಾಸುಕಿ ವೈಭವ್ ಕಂಠದಾನ ಮಾಡಿದ್ದಾರೆ.

ಗಾಂದೀನಗರದ ಸಕ್ಸಸ್ ಫುಲ್ ಸಿನಿಮಾ

ಗಾಂದೀನಗರದ ಸಕ್ಸಸ್ ಫುಲ್ ಸಿನಿಮಾ

ಸದ್ಯದಲ್ಲಿ ಗಾಂದೀನಗರದಲ್ಲಿ ಸಕ್ಸಸ್ ಫುಲ್ ಆಗಿ ರನ್ ಆಗುತ್ತಿರುವ 'ಕಿರಿಕ್ ಪಾರ್ಟಿ' ಚಿತ್ರ 25 ದಿನಗಳಲ್ಲಿ 25 ಕೋಟಿ ಕಲೆಕ್ಷನ್ ಮಾಡಿತ್ತು. ಈಗ ದುಬೈ, ಇಸ್ರೇಲ್, ಅಮೆರಿಕ, ಯುಕೆ, ಆಸ್ಟ್ರೇಲಿಯಾ, ನ್ಯೂ ಝೀಲ್ಯಾಂಡ್ ಸೇರಿದಂತೆ ಹಲವು ದೇಶಗಳಲ್ಲಿಯೂ ಪ್ರದರ್ಶನವಾಗುತ್ತಿದೆ.

English summary
Kirik Party's song was First Kannada song to hit the 10 million views in youtube. Here is full details..
Please Wait while comments are loading...

Kannada Photos

Go to : More Photos