»   » ಅಟ್ಲಾಂಟಾ ನಗರದಲ್ಲಿ ಮಿನುಗುತ್ತಿದೆ ಕನ್ನಡದ 'ಕಿರಿಕ್ ಪಾರ್ಟಿ'

ಅಟ್ಲಾಂಟಾ ನಗರದಲ್ಲಿ ಮಿನುಗುತ್ತಿದೆ ಕನ್ನಡದ 'ಕಿರಿಕ್ ಪಾರ್ಟಿ'

Posted by:
Subscribe to Filmibeat Kannada

ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ... ವಿದೇಶಗಳಲ್ಲೂ 'ಕಿರಿಕ್ ಪಾರ್ಟಿ' ಹವಾ ಜೋರಾಗಿದೆ. ಕರ್ನಾಟಕದಲ್ಲಿ ದಾಖಲೆ ಮಟ್ಟದ ಕಲೆಕ್ಷನ್ ಮಾಡಿದ್ದ ರಕ್ಷಿತ್ ಶೆಟ್ಟಿ ಅಭಿನಯದ ರಿಶಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಈಗಾಗಲೇ ಅಮೇರಿಕಾ, ಇಸ್ರೇಲ್, ಯುಕೆ, ಆಸ್ಟ್ರೇಲಿಯಾ, ನ್ಯೂ ಝೀಲ್ಯಾಂಡ್ ಸೇರಿದಂತೆ ಅನೇಕ ದೇಶಗಳಲ್ಲಿ ಬಿಡುಗಡೆಗೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ.[ಕನ್ನಡಿಗರಿಗೆ ಹೆಮ್ಮೆ ತಂದ 'ಕಿರಿಕ್ ಪಾರ್ಟಿ' ಚಿತ್ರತಂಡ]

kirik-party-screening-in-atlanta

ಈಗ ಪ್ರೇಕ್ಷಕರ ಒತ್ತಾಯದ ಮೇರೆಗೆ ಅಟ್ಲಾಂಟಾ ನಗರದಲ್ಲಿ ಎರಡನೇ ಬಾರಿಗೆ 'ಕಿರಿಕ್ ಪಾರ್ಟಿ' ಪ್ರದರ್ಶನ ನಡೆಯುತ್ತಿದೆ. ಡಿಜಿಮ್ಯಾಕ್ಸ್ ಥಿಯೇಟರ್ ನಲ್ಲಿ ಫೆಬ್ರವರಿ 2 ರಿಂದ ಪ್ರದರ್ಶನ ಆರಂಭಗೊಂಡಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ಹಾಗೂ ಸಂಜೆ 7.45ಕ್ಕೆ ಮತ್ತು ನಾಳೆ ಸಂಜೆ 8ಕ್ಕೆ 'ಕಿರಿಕ್ ಪಾರ್ಟಿ' ಶೋ ಇದೆ.['ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!]

kirik-party-screening-in-atlanta

ಅಟ್ಲಾಂಟಾ ನಗರದಲ್ಲಿ ಇರುವ ಕನ್ನಡಾಭಿಮಾನಿಗಳು ಇನ್ನೂ 'ಕಿರಿಕ್ ಪಾರ್ಟಿ' ಚಿತ್ರ ನೋಡಿಲ್ಲ ಅಂದ್ರೆ ಈಗ ಮಿಸ್ ಮಾಡ್ಕೋಬೇಡಿ. 'ಕಿರಿಕ್ ಪಾರ್ಟಿ' ಚಿತ್ರ ನೋಡಿ ಟೀನೇಜ್ ಜಾಲಿ ಮೂಡ್ ಗೆ ಜಾರಿರಿ....

English summary
Kannada Actor Rakshit Shetty starrer 'Kirik Party' screening this week in Atlanta.
Please Wait while comments are loading...

Kannada Photos

Go to : More Photos