»   » ಫೆಬ್ರವರಿ 14ಕ್ಕೆ 'ಕಿಸ್' ಕೊಡ್ತಾರಂತೆ ಎ.ಪಿ ಅರ್ಜುನ್.!

ಫೆಬ್ರವರಿ 14ಕ್ಕೆ 'ಕಿಸ್' ಕೊಡ್ತಾರಂತೆ ಎ.ಪಿ ಅರ್ಜುನ್.!

Posted by:
Subscribe to Filmibeat Kannada

'ಅಂಬಾರಿ', 'ಅದ್ಧೂರಿ' 'Mr ಐರಾವತ' ಮುಂತಾದ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಎ.ಪಿ ಅರ್ಜುನ್ ಅವರು ಇದೀಗ ಹೊಸಬರಿಗಾಗಿ ಹೊಸ ಕಥೆಯೊಂದನ್ನು ಹೊತ್ತು ತಂದಿದ್ದಾರೆ.

ಹೊಸಬರ ತಲಾಷ್ ನಲ್ಲಿದ್ದ ನಿರ್ದೇಶಕ ಎ.ಪಿ ಅರ್ಜುನ್ ಅವರು ಇದೀಗ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಿದ್ದಾರೆ. ರೊಮ್ಯಾಂಟಿಕ್ ಕಥೆಯಾಧರಿತ ಪಕ್ಕಾ ಲವ್ ಸ್ಟೋರಿ ಸಿನಿಮಾವನ್ನು ಗಾಂಧಿನಗರಕ್ಕೆ ಹೊತ್ತು ತರುತ್ತಿರುವ ನಿರ್ದೇಶಕ ಚಿತ್ರಕ್ಕೆ 'ಕಿಸ್' ಎಂಬ ಹೆಸರನ್ನಿಟ್ಟಿದ್ದಾರೆ.[ಹೊಸ ಪ್ರತಿಭೆಗಳ ಹುಡುಕಾಟದಲ್ಲಿರುವ ಎ.ಪಿ ಅರ್ಜುನ್ ಏನಂತಾರೆ]

ಈ ಸಿನಿಮಾದ ಬಗ್ಗೆ ನಿರ್ದೇಶಕ ಎ.ಪಿ ಅರ್ಜುನ್ ಅವರನ್ನು ಫಿಲ್ಮಿಬೀಟ್ ಕನ್ನಡ ಸಂಪರ್ಕಿಸಿದಾಗ ಚಿತ್ರದ ನಾಯಕ-ನಾಯಕಿಯರ ಹುಡುಕಾಟದಲ್ಲಿರುವ ನಿರ್ದೇಶಕ ಸದ್ಯಕ್ಕೆ ಚಿತ್ರಕ್ಕೆ 'ಕಿಸ್' ಎಂಬ ಹೆಸರನ್ನಿಟ್ಟಿದ್ದಾರೆ. ಅದು ಬಿಟ್ಟರೆ ಇನ್ನುಳಿದಂತೆ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯಂದು ಹೊರಬೀಳಲಿದೆ ಎಂದಿದ್ದಾರೆ.[ಚಿತ್ರ ವಿಮರ್ಶೆ : 'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ']

ಇನ್ನು ಈ ಚಿತ್ರದಲ್ಲಿ ತಮ್ಮ ಹಳೇ ತಂಡವನ್ನು ಇಟ್ಟುಕೊಂಡು ಅರ್ಜುನ್ ಅವರು ಕೆಲಸ ಮಾಡಲಿದ್ದಾರೆ. ಎ.ಪಿ ಅರ್ಜುನ್ ಅವರ ಚಿತ್ರಗಳೆಂದರೆ ಛಾಯಾಗ್ರಾಹಕರಾಗಿ ಸತ್ಯ ಹೆಗಡೆ ಅವರು ಇರಲೇಬೇಕು. ಸಂಗೀತಕ್ಕೆ ವಿ.ಹರಿಕೃಷ್ಣ ಅವರು ಫಿಕ್ಸ್, ರವಿವರ್ಮ ಅವರು ಸಾಹಸ ಮಾಡಿದ್ರೆ ದೀಪು ಎಸ್.ಕುಮಾರ್ ಅವರು ಸಂಕಲನ ಮಾಡುವ ಜವಾಬ್ದಾರಿ ಹೊತ್ತಿರುತ್ತಾರೆ. ಒಟ್ನಲ್ಲಿ ಮತ್ತೆ ಇದೇ ತಂಡ 'ಕಿಸ್' ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ.

English summary
After Airavatha, director AP Arjun decided to work on a love story and is in the process of scouting for new faces. Meanwhile, we hear that he has zoomed in on the title for his romantic subject as KISS.
Please Wait while comments are loading...

Kannada Photos

Go to : More Photos