»   » ಶಿವಣ್ಣನ 'ಲೀಡರ್' ಚಿತ್ರಕ್ಕೆ ಮಗದೊಂದು ಬಾರಿ ಶೀರ್ಷಿಕೆ ಕಂಟಕ.!

ಶಿವಣ್ಣನ 'ಲೀಡರ್' ಚಿತ್ರಕ್ಕೆ ಮಗದೊಂದು ಬಾರಿ ಶೀರ್ಷಿಕೆ ಕಂಟಕ.!

Posted by:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಲೀಡರ್' ಸಿನಿಮಾ ಅನೌನ್ಸ್ ಆದಾಗಲೇ ಶೀರ್ಷಿಕೆ ವಿವಾದಕ್ಕೆ ಗುರಿಯಾಗಿತ್ತು.!

ಒಂದು ಕಡೆ ಅಭಿನಯ ಚಕ್ರವರ್ತಿ ಸುದೀಪ್, ಇನ್ನೊಂದು ಕಡೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ರವರ ಚಿತ್ರಕ್ಕೆ ಒಂದೇ ಶೀರ್ಷಿಕೆ ಘೋಷಣೆಯಾಗಿದ್ರಿಂದ ಮೂರು ವರ್ಷಗಳ ಹಿಂದೆ 'ಲೀಡರ್' ಸಿನಿಮಾ ಟೈಟಲ್ ಕಾಂಟ್ರವರ್ಸಿಯಲ್ಲಿ ಸಿಲುಕಿತ್ತು. ಅದೆಲ್ಲ ತಣ್ಣಗಾದ್ಮೇಲೆ 'ಲೀಡರ್' ಚಿತ್ರೀಕರಣ ಪ್ರಾರಂಭವಾಯ್ತು.[ಸುದೀಪ್ 'ದಿ ಲೀಡರ್', ಶಿವಣ್ಣ 'ಮಾಸ್ ಲೀಡರ್']

ಈಗ ಇನ್ನು ಕೆಲವೇ ತಿಂಗಳುಗಳಲ್ಲಿ 'ಲೀಡರ್' ಸಿನಿಮಾ ತೆರೆಗೆ ಬರಬೇಕು ಎನ್ನುವಾಗಲೇ... ಮಗದೊಂದು ಬಾರಿಗೆ 'ಲೀಡರ್' ಚಿತ್ರಕ್ಕೆ ಶೀರ್ಷಿಕೆ ಕಂಟಕ ಎದುರಾಗಿದೆ. ಅದರಲ್ಲೂ, ಈ ಬಾರಿ ಎ.ಎಮ್.ಆರ್.ರಮೇಶ್ ಕಡೆಯಿಂದ ಎಂಬುದು ಬ್ರೇಕಿಂಗ್ ನ್ಯೂಸ್.!

'ಲೀಡರ್' ಚಿತ್ರಕ್ಕೆ ಟೈಟಲ್ ಪ್ರಾಬ್ಲಂ

'ಲೀಡರ್' ಚಿತ್ರಕ್ಕೆ ಟೈಟಲ್ ಪ್ರಾಬ್ಲಂ

ಎರಡನೇ ಬಾರಿಗೆ 'ಲೀಡರ್' ಚಿತ್ರಕ್ಕೆ ಟೈಟಲ್ ಪ್ರಾಬ್ಲಂ ಎದುರಾಗಿದೆ. ''ಲೀಡರ್' ಎಂಬ ಟೈಟಲ್ ನಮ್ಮ ಬ್ಯಾನರ್ ನಲ್ಲಿ ರಿಜಿಸ್ಟರ್ ಆಗಿದೆ'' ಅಂತ 'ಅಟ್ಟಹಾಸ', 'ಸೈನೈಡ್' ಖ್ಯಾತಿಯ ನಿರ್ದೇಶಕ ಎ.ಎಮ್.ಆರ್.ರಮೇಶ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದಾರೆ.[ಸುದೀಪ್, ಶಿವಣ್ಣ ನಡುವೆ ಹೊಸ ಟೈಟಲ್ ವಿವಾದ]

ಏಳು ವರ್ಷಗಳ ಹಿಂದೆಯೇ ಶೀರ್ಷಿಕೆ ನೋಂದಣಿ

ಏಳು ವರ್ಷಗಳ ಹಿಂದೆಯೇ ಶೀರ್ಷಿಕೆ ನೋಂದಣಿ

'ವಸಿಸ್ಠ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ 2010 ರಲ್ಲಿಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ದೇಶಕ ಎ.ಎಮ್.ಆರ್.ರಮೇಶ್ ನೋಂದಣಿ ಮಾಡಿಸಿದ್ದಾರೆ. ಜೊತೆಗೆ ಪ್ರತಿವರ್ಷವೂ ನವೀಕರಣ ಮಾಡಿಸಿಕೊಂಡು ಬಂದಿದ್ದಾರೆ.[ಹೊಸ ತಿರುವು ಪಡೆದುಕೊಂಡ 'ಲೀಡರ್' ವಿವಾದ]

'ಲೀಡರ್' ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಕ್ಕೆ ಚಾಲನೆ

'ಲೀಡರ್' ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಕ್ಕೆ ಚಾಲನೆ

''ಲೀಡರ್' ಹೆಸರನ್ನ ನೋಂದಣೆ ಮಾಡಿದ ಬಳಿಕ ಎರಡು ವರ್ಷಗಳ ಕಾಲ ರಿಸರ್ಚ್ ಮಾಡಿ ಸ್ಕ್ರಿಪ್ಟ್ ರೆಡಿ ಮಾಡಲಾಗಿದೆ. ಸಂಗೀತ ನಿರ್ದೇಶಕ ಎಮಿಲ್ ಕೂಡ ನಾಲ್ಕು ಹಾಡುಗಳನ್ನ ಸಂಯೋಜಿಸಿದ್ದಾಗಿದೆ. ಆದ್ರೆ, ತಾರಾಗಣ ಇನ್ನೂ ಫೈನಲ್ ಆಗದ ಕಾರಣ ಶೂಟಿಂಗ್ ಶುರು ಮಾಡಿರಲಿಲ್ಲ'' ಅಂತ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ನಿರ್ದೇಶಕ ಎ.ಎಮ್.ಆರ್.ರಮೇಶ್ ಬರೆದುಕೊಂಡಿದ್ದಾರೆ.

ಶೀರ್ಷಿಕೆ ನೋಂದಣಿ ಮಾಡಿಲ್ಲ.!

ಶೀರ್ಷಿಕೆ ನೋಂದಣಿ ಮಾಡಿಲ್ಲ.!

''ನನ್ನ ಅನುಮತಿ ಇಲ್ಲದೇ 'ತರುಣ್ ಪಿಕ್ಚರ್ಸ್' ರವರು 'ಲೀಡರ್' ಟೈಟಲ್ ಬಳಕೆ ಮಾಡಿಕೊಂಡಿದ್ದಾರೆ. ವಾಣಿಜ್ಯ ಮಂಡಳಿಯಲ್ಲಿ ಅವರು 'ಲೀಡರ್' ಟೈಟಲ್ ನ ನೋಂದಣಿ ಕೂಡ ಮಾಡಿಸಿಲ್ಲ'' - ಎ.ಎಮ್.ಆರ್.ರಮೇಶ್.

'ಲೀಡರ್' ಶೀರ್ಷಿಕೆ ಬಳಸುವ ಹಾಗಿಲ್ಲ.

'ಲೀಡರ್' ಶೀರ್ಷಿಕೆ ಬಳಸುವ ಹಾಗಿಲ್ಲ.

''ಇನ್ಮುಂದೆ 'ತರುಣ್ ಪಿಕ್ಚರ್ಸ್' ರವರು 'ಲೀಡರ್' ಶೀರ್ಷಿಕೆ ಬಳಸುವ ಹಾಗಿಲ್ಲ'' ಅಂತ ವಾಣಿಜ್ಯ ಮಂಡಳಿ 'ಲೀಡರ್' ಚಿತ್ರದ ನಿರ್ಮಾಪಕ ತರುಣ್ ಶಿವಪ್ಪ ರವರಿಗೆ ಸೂಚಿಸಿದ್ದಾರೆ. ಈ ಬಗ್ಗೆ ವಾಣಿಜ್ಯ ಮಂಡಳಿ ಎ.ಎಮ್.ಆರ್.ರಮೇಶ್ ರವರಿಗೆ ಪತ್ರ ಬರೆದಿದೆ.

ನ್ಯಾಯ ಸಿಕ್ಕಿದೆ.!

ನ್ಯಾಯ ಸಿಕ್ಕಿದೆ.!

''ಕಡೆಗೂ ಆರು ತಿಂಗಳ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ತರುಣ್ ಪಿಕ್ಚರ್ಸ್ ರವರು 'ಲೀಡರ್' ಶೀರ್ಷಿಕೆಯ ಹಿಂದೆ-ಮುಂದೆ ಪದ ಸೇರಿಸಿ ಬದಲಾವಣೆ ಮಾಡಲ್ಲ ಎಂದು ಭಾವಿಸುತ್ತೇನೆ'' - ಎ.ಎಮ್.ಆರ್.ರಮೇಶ್

'ಲೀಡರ್' ಚಿತ್ರತಂಡ ಏನ್ಮಾಡ್ತಾರೋ.?

'ಲೀಡರ್' ಚಿತ್ರತಂಡ ಏನ್ಮಾಡ್ತಾರೋ.?

ಇನ್ಮುಂದೆ 'ಲೀಡರ್' ಶೀರ್ಷಿಕೆಯನ್ನು ಬಳಸುವ ಹಾಗಿಲ್ಲ ಅಂತ ಚಿತ್ರತಂಡಕ್ಕೆ ವಾಣಿಜ್ಯ ಮಂಡಳಿ ಎಚ್ಚರಿಕೆ ನೀಡಿದೆ. ಈಗ 'ಲೀಡರ್' ತಂಡದ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕು.[ಶಿವಣ್ಣ 'ಲೀಡರ್' ಅವತಾರ ತಾಳುವುದು ಯಾವಾಗ.?]

English summary
'Leader' Title Controversy between Tarun Pictures and Vasista Pictures.
Please Wait while comments are loading...

Kannada Photos

Go to : More Photos